Tuesday, June 9

ದೇಶ-ವಿದೇಶ

ಮಹಾರಾಷ್ಟ್ರಕ್ಕೂ ಮಾದರಿಯಾದ KSRTC; ಬೆಂಗಳೂರಿನಲ್ಲಿ ನಿಯೋಗದ ಕಸರತ್ತು

ಮಹಾರಾಷ್ಟ್ರಕ್ಕೂ ಮಾದರಿಯಾದ KSRTC; ಬೆಂಗಳೂರಿನಲ್ಲಿ ನಿಯೋಗದ ಕಸರತ್ತು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ಮುಂಚೂಣಿ ಸೇವೆಯ ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಹಾರಾಷ್ಟ್ರ ಸರ್ಕಾರಕ್ಕೂ ಮಾದರಿಯಾದಂತಿದೆ.  ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌ ನತೃತ್ವದ ನಿಯೋಗ ಬೆಂಗಳೂರಿನಲ್ಲಿರುವ KSRTC ಕೇಂದ್ರ ಕಚೇರಿ ಹಾಗೂ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಬೆಳವಣಿಗೆ ಕುತೂಹಲದ ಕೇಂದ್ರಬಿಂದುವಾಯಿತು.ಮಹಾರಾಷ್ಟ್ರ ಸಾರಿಗೆ ನಿಗಮ 'ಎಂ.ಎಸ್.ಆರ್.ಟಿ.ಸಿ' ವ್ಯವಸ್ಥಾಪಕ ನಿರ್ದೇಶಕ ಮಾಧವ್ ಕುಸೆಕರ್ ಹಾಗೂ ಅಧಿಕಾರಿಗಳ ತಂಡ ಈ ನಿಯೋಗದಲ್ಲಿತ್ತು. KSRTC ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ ನವೀಕರಣ, ಹೆಚ್.ಆರ್.ಎಂ.ಎಸ್., ಇ-ಟೆಕೇಟಿಂಗ್, KSRTC ಆರೋಗ್ಯ ಯೋಜನೆ, ರೂ 1 ಕೋಟಿ ಅಪಘಾತ ವಿಮೆ ಹಾಗೂ ಇತರೆ ಉಪಕ್ರಮಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಮಾಹಿತಿ ಪಡೆಯಿತು. KSRTC ಉಪಾಧ್ಯಕ್ಷ ರಿಜ್ವಾನ್ ನವಾಬ್, ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿ, KSRTC ವ್ಯವಸ್ಥಾಪಕ ನಿರ್ದೇಶಕರು ಈ...
ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ರಯಾಗರಾಜ್‌: ಜಗದ್ವಿಖ್ಯಾತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಹಾ ಕುಂಭಕ್ಕೆ ಆಗಮಿಸುವ ಭಕ್ತರಿಗಾಗಿ ‘ನೇತ್ರ ಮಹಾಕುಂಭ’ ಹೆಸರಿನ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಶ್ಮೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ.ಜನವರಿ 13 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯನ್ನೂ ಒದಗಿಸುತ್ತಿದ್ದು, ಕಣ್ಣು ದಾನ ಕುರಿತು ಜನಜಾಗೃತಿ ಮೂಡಿಸುತ್ತಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಸಕ್ಷಮ್ ಫೌಂಡೇಶನ್ ಹಾಗೂ ಇತರ ಸಾಮಾಜಿಕ ಸಂಘಟನೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ದಿನನಿತ್ಯ ಸಾವಿರಾರು ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ.ಈ ಬಾರಿ ‘ನೇತ್ರ ಮಹಾಕುಂಭ’ದ ಉದ್ದೇಶ ಐದು ಲಕ್ಷ ಜನರಿಗೆ ಉಚಿತ ಕಣ್ಣಿನ ಆರೈಕೆ ನೀಡುವ ಪ್ರಯತ್ನ ಸಾಗಿದೆ. ಇದರಲ್ಲಿ ಮೂರು ಲಕ್ಷ ಜನರಿಗೆ ಉಚಿತ ಕಣ್ಣು ಪರೀಕ್ಷೆ, ಚಶ್ಮೆ ಹಾಗೂ ಔಷಧಿ ವಿತರಣೆ ಸೇರಿದಂತೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಒದಗಿಸಲಾಗುತ್ತಿದೆ. ಈ ಶಿಬಿರವನ್ನು...
MSME ಗಳಿಗೆ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ; ಹೂಡಿಕೆ ಮತ್ತು ವಹಿವಾಟು ಮಿತಿ 2 ಪಟ್ಟು ಹೆಚ್ಚಳ

MSME ಗಳಿಗೆ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ; ಹೂಡಿಕೆ ಮತ್ತು ವಹಿವಾಟು ಮಿತಿ 2 ಪಟ್ಟು ಹೆಚ್ಚಳ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಕೇಂದ್ರ ಬಜೆಟ್: ಅತಿಸಣ್ಣ (ಮೈಕ್ರೋ) ಮತ್ತು ಸಣ್ಣ ಉದ್ಯಮಗಳಿಗೆ ಕನಿಷ್ಠ ಸಾಲದ ಮೊತ್ತ 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಳ.. ಮುಂದಿನ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲ..
ಕೇಂದ್ರ ಬಜೆಟ್: ವಿಮಾ ವಲಯದಲ್ಲಿ FDI ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ

ಕೇಂದ್ರ ಬಜೆಟ್: ವಿಮಾ ವಲಯದಲ್ಲಿ FDI ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಆರು ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸುವ ಗುರಿಯನ್ನು 2025-26ನೇ ಸಾಲಿನ ಬಜೆಟ್ ಹೊಂದಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾಹಿತಿ ನೀಡಿದ್ದಾರೆ.ಈ ಕ್ಷೇತ್ರಗಳಲ್ಲಿ ಹಣಕಾಸು ವಲಯವೂ ಒಂದಾಗಿದ್ದು, ಇದು ವಿಮೆ, ಪಿಂಚಣಿಗಳು, ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು (ಬಿಐಟಿಎಸ್) ಮತ್ತು ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ. ವಿಮಾ ಕ್ಷೇತ್ರದಲ್ಲಿ ಎಫ್.ಡಿ.ಐ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ - ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ಗಾರ್ಡ್‌ರೇಲ್‌ಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲಾಗುತ್ತದ...
ಕೇಂದ್ರ ಬಜೆಟ್: ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 30,000 ಮಿತಿಯೊಂದಿಗೆ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್‌

ಕೇಂದ್ರ ಬಜೆಟ್: ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 30,000 ಮಿತಿಯೊಂದಿಗೆ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್‌

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ 2025-2026ರ ಬಜೆಟ್ ಮಂಡಿಸಿದರು.'ನಗರಗಳು ಬೆಳವಣಿಗೆಯ ಕೇಂದ್ರಗಳು' ಮತ್ತು ಇತರೆ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ₹ 1 ಲಕ್ಷ ಕೋಟಿಯ ನಗರ ಚಾಲೆಂಜ್ ನಿಧಿಯನ್ನು ಸ್ಥಾಪಿಸಲಿದೆ ಎಂದು ಹೇಳಿದರು. 'ನಗರಗಳ ಸೃಜನಾತ್ಮಕ ಪುನರಾಭಿವೃದ್ಧಿ' ಮತ್ತು ನೀರು ಮತ್ತು ನೈರ್ಮಲ್ಯ' ಎಂದು ಜುಲೈ ಬಜೆಟ್‌ನಲ್ಲಿ ಘೋಷಿಸಿದರು.ಈ ನಿಧಿಯು ಬ್ಯಾಂಕಬಲ್ ಯೋಜನೆಗಳ ವೆಚ್ಚದ 25 ಪ್ರತಿಶತದವರೆಗೆ ಹಣಕಾಸು ನೀಡುತ್ತದೆ. ಕನಿಷ್ಠ 50 ಪ್ರತಿಶತದಷ್ಟು ವೆಚ್ಚವನ್ನು ಬಾಂಡ್‌ಗಳು, ಬ್ಯಾಂಕ್ ಸಾಲಗಳು ಮತ್ತು PPP ಗಳಿಂದ ನಿಧಿಸಲಾಗುವುದು. 2025-26ಕ್ಕೆ ₹ 10,000 ಕೋಟಿ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಭೌಗೋಳಿಕ ಮೂಲಸೌಕರ್ಯ ಮತ್ತು ಡೇಟಾವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಅನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನಮಂತ್ರಿ ಗತಿ ಶಕ್ತಿಯನ್ನು ಬಳಸಿಕೊಂಡು, ಈ ಮಿಷನ್ ಭೂ ದಾಖಲೆಗಳ ಆಧುನೀಕರಣ, ನಗರ ಯೋಜನೆ ಮತ್ತು...
ಕೇಂದ್ರ ಬಜೆಟ್; ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ

ಕೇಂದ್ರ ಬಜೆಟ್; ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಶನಿವಾರ ಬಜೆಟ್ ಮಂಡಿಸಿದರು. ಮಧ್ಯಮ ವರ್ಗದ ಬಹು ದಿನಗಳ ಬೇಡಿಕೆಯಂತೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಭರವಸೆ ಪ್ರಕಟಿಸಿದರು.ಹೊಸ ತೆರಿಗೆ ಪದ್ಧತಿಯಂತೆ 12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. 4 ಲಕ್ಷದಿಂದ 8 ಲಕ್ಷದವರೆಗೆ ಶೇ.5 ತೆರಿಗೆ, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10 ತೆರಿಗೆ, 12 ಲಕ್ಷದಿಂದ 15 ಲಕ್ಷದವರೆಗೆ ಶೇ.15 ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20 ತೆರಿಗೆ 20 ಲಕ್ಷದಿಂದ 24 ಲಕ್ಷದರೆಗೆ ಶೇ.25 ತೆರಿಗೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆಹೊಸ ತೆರಿಗೆ ಪದ್ಧತಿ ಅನ್ವಯ 4 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಹಿರಿಯ ನಾಗರಿಕರಿಗೆ ತೆರಿಗೆ ಕಡಿತದ ಮಿತಿಯನ್ನು 1 ಲಕ್ಷ ರೂ.ಗೆ ದ್ವಿಗುಣಗೊಳಿಸಲಾಗಿದೆ ಎಂದು ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.4 ಲಕ್ಷ ರೂ.ಗಳಿಂದ 6 ಲಕ್ಷ ರ...
ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ

ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿ 67 ಜನರ ಸಾವಿಗೆ ಕಾರಣವಾದ ವಿಮಾನ ಡಿಕ್ಕಿಯಿಂದ ಅಮೆರಿಕ ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಸಂಜೆ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಪೆನ್ಸಿಲ್ವೇನಿಯಾ ಪ್ರಾಂತ್ಯದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿಕೊಂಡಿದೆ.ಈ ವಿಮಾನದಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಅದು ವೈದ್ಯಕೀಯ ಸೇವಾ ನಿರತ ವಿಮಾನವಾಗಿತ್ತು ಎನ್ನಲಾಗಿದೆ. ಈ ವಿಮಾನ ಪತನದಿಂದಾಗಿ ನ್ಯೂ ರೂಸ್‌ವೆಲ್ಟ್ ಬೌಲೆವಾರ್ಡ್ ಮತ್ತು ಕಾಟ್‌ಮನ್ ಅವೆನ್ಯೂದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ.ಶುಕ್ರವಾರ ಸಂಜೆ 6 ಗಂಟೆಯ ನಂತರ ವಸತಿ ಬೀದಿಯಾದ ಕ್ಯಾಲ್ವರ್ಟ್ ಸ್ಟ್ರೀಟ್‌ನ 7200 ಬ್ಲಾಕ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತುರ್ತು ಸೇವೆಗಳ ರವಾನೆಗಳನ್ನು ಸುದ್ದಿ ತಾಣ ಉಲ್ಲೇಖಿಸಿದೆ....
‘ಪೂರ್‌ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

‘ಪೂರ್‌ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ನೀಡಿದ 'ಪೂರ್‌ ಲೇಡಿ' ಹೇಳಿಕೆ ಅತ್ಯಂತ ಖಂಡನೀಯ ಎಂದಿರುವ ಬಿಜೆಪಿ, ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್‌ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ ಸಾಕ್ಷಿ ಎಂದಿದೆ.ಈ ದೇಶದ ಆದಿವಾಸಿ ಹಾಗೂ ದಲಿತ ಸಮುದಾಯದವರ ಬಗ್ಗೆ ಕಾಂಗ್ರೆಸ್‌ ಎಂತಹ ಮನಸ್ಥಿತಿ ಹೊಂದಿದೆ ಎಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದೆ.ಸೋನಿಯಾ ಗಾಂಧಿಯವರು ತಮ್ಮ ಹೇಳಿಕೆಯ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರಾಷ್ಟ್ರಪತಿ @rashtrapatibhvn ದ್ರೌಪದಿ ಮುರ್ಮು ಅವರ ಬಗ್ಗೆ @INCIndia ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರು ನೀಡಿದ “ಪೂರ್‌ ಲೇಡಿ” ಹೇಳಿಕೆ ಅತ್ಯಂತ ಖಂಡನೀಯ.ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್‌ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ… ...
ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ

ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ

Focus, Update, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಓಮನ್: ಓಮನ್ ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಉನ್ನತ ಆಶಯದಿಂದ "ವಿಶ್ವವಾಣಿ" "ಸಂಸ್ಥೆ ಕರ್ನಾಟಕ ಸಂಘ ಮಸ್ಕತ್" ಅವರ ಸಹಯೋಗದೊಂದಿಗೆ ಓಮನ್ ನಲ್ಲಿ ನಡೆದ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಮಾಜಿ ಸಚಿವ ಸಿ.ಟಿ.ರವಿ ಅವರಿಗೆ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಸಾಧಕರನ್ನು ಗೌರವಿಸುವ ಮಹೋನ್ನತ ಕಾರ್ಯಮಾಡಿದ ವಿಶ್ವವಾಣಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.ಎರಡು ದೇಶಗಳ ಮೈತ್ರಿ ಮತ್ತು ಪರಸ್ಪರ ಸಂಸ್ಕೃತಿಕ ವಿನಿಮಯದ ಆಶಯದಿಂದ ನೆರವೇರಿಸಲಾದ ಮಹಾ ಸಮಾರಂಭದಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಜನ ಸಾಧಕರೊಂದಿಗೆ, ವಿಧಾನ ಸಭೆಯ ಸಭಾಧ್ಯಕ್ಷ ಯುಟಿ ಖಾದರ್, ಮಸ್ಕತ್ ನ ಕರ್ನಾ...