
ದೇಶದ 14.72 ಲಕ್ಷ ಶಾಲೆಗಳಲ್ಲಿ 24.8 ಕೋಟಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ : ಆರ್ಥಿಕ ಸಮೀಕ್ಷೆ 2024-25
ಆರ್ಥಿಕ ಸಮೀಕ್ಷೆಯ ಹೈಲೈಟ್ಸ್:ಕಂಪ್ಯೂಟರ್ ಹೊಂದಿರುವ ಶಾಲೆಗಳ ಪ್ರಮಾಣ 2019-20ರಲ್ಲಿ ಇದ್ದ 38.5%ನಿಂದ 2023-2024ರಲ್ಲಿ 57.2% ಗೆ ಏರಿಕೆ,
ಇಂಟರ್ ನೆಟ್ ಸೌಲಭ್ಯ ಹೊಂದಿರುವ ಶಾಲೆಗಳ ಪ್ರಮಾಣ 2019-20ರಲ್ಲಿ ಇದ್ದ 22.3%ನಿಂದ 2023-2024ರಲ್ಲಿ 53.9%ಗೆ ಏರಿಕೆ
ಇತ್ತೀಚಿನ ವರ್ಷಗಳಲ್ಲಿ ಶಾಲೆ ತೊರೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಸ್ಥಿರವಾಗಿ ಕಡಿಮೆಯಾಗಿವೆ, ಪ್ರಾಥಮಿಕ ಹಂತದಲ್ಲಿ 1.9%, ಉನ್ನತ ಪ್ರಾಥಮಿಕ ಹಂತದಲ್ಲಿ 5.2% ಮತ್ತು ಮಾಧ್ಯಮಿಕ ಹಂತದಲ್ಲಿ 14.1%ಗೆ ತಗ್ಗಿದೆ
ಶಿಕ್ಷಣ ವ್ಯವಸ್ಥೆಯ ಚಲನಶೀಲತೆಯನ್ನು ವೇಗವಾಗಿ ಅಭಿವೃದ್ಧಿಪಡಿಸುವಲ್ಲಿ ತಂತ್ರಜ್ಞಾನದ ಏಕೀಕರಣ(ಕೃತಕ ಬುದ್ಧಿಮತ್ತೆ) ಅತ್ಯಗತ್ಯ
ಒಟ್ಟು ಉನ್ನತ ಶಿಕ್ಷಣ ಸಂಸ್ಥೆಗಳು(ಎಚ್ಇಐಎಸ್) 2014-15ರಲ್ಲಿ ಇದ್ದ 51,534ರಿಂದ 2022-23ರಲ್ಲಿ 58,643ಕ್ಕೆ ಅಂದರೆ ಶೇಕಡ 13.8ರಷ್ಟು ಹೆಚ್ಚಾಗಿದೆನವದೆಹಲಿ: ಆರ್ಥಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳನ್ನು ಸಾಧಿಸಲು ಪೀರ್ ಬೋಧನೆ(ಶಿಕ್ಷಕರಿಗೆ ಬದಲಾಗಿ ಮಕ್ಕಳ ನಡುವೆ ಬೋಧನೆ)ಯಂತಹ ನಾವೀನ್ಯತೆಗೆ ಆರ್ಥಿಕ ಸಮೀಕ್ಷೆ ಒತ್ತು ನೀಡಿದೆ.ಕೇಂದ್ರ ಹಣ...









