Blog

  • ವಯನಾಡು ಸಂತ್ರಸ್ತರಿಗಾಗಿ ಮಿಡಿದ ಕರುನಾಡು ಹೃದಯಗಳು.. BTM, ಜಯನಗರ ಕ್ಷೇತ್ರಗಳಿಂದ 9 ಟ್ರಕ್‌ಗಳಲ್ಲಿ ಅಹಾರ, ಅಗತ್ಯವಸ್ತು ರವಾನೆ..

    ಬೆಂಗಳೂರು: ಕೇರಳದ ವಯನಾಡಿನಲ್ಲಿ, ಹಾಗೂ ಕರಾವಳಿಯ ಶಿರೂರಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ‌ ಬಡಪಾಯಿಗಳ ಬಗ್ಗೆ ಬೆಂಗಳೂರಿನ ಬಿಟಿಎಂ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ಜನರು ಅನುಕಂಪ ತೋರಿದ್ದಾರೆ. ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದ್ದಾರೆ.

    ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸಾರಿಗೆ ಮತ್ತು ಮುಜರಾಯಿ‌ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತಿಯಲ್ಲಿ, ಆಹಾರ, ಸಾಮಾಗ್ರಿಗಳನ್ನು ಹೊತ್ತ ಸುವಾರು 9 ಟ್ರಕ್ ಗಳಿಗೆ ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಚಾಲನೆ ನೀಡಿದರು. ಸದರಿ ಟ್ರಕ್ ಗಳೊಂದಿಗೆ ಜಯನಗರದ ಮಾಜಿಬಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ನಾಗರಾಜು, ಮಂಜುನಾಥ್‌ ಅವರನ್ನೊಳಗೊಂಡ ನಾಯಕರ ತಂಡ ಈ ಸಾಮಾಗ್ರಿಗಳ ಜೊತೆ ತೆರಳಿದೆ.

    ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದ ದುರಂತಕ್ಕೆ ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಮಾನವೀಯ ನೆಲೆಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ 9 ಟ್ರಕ್ ಗಳಲ್ಲಿ ರೂ.1.32 ಕೋಟಿ ಮೊತ್ತದಷ್ಟು‌ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿದೆ ಎಂದು ಸಚಿವರು ವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

    ಟ್ರಕ್ ನಲ್ಲಿ ಸೀರೆ, ಟಿ- ಶರ್ಟ್, ಟೂತ್ ಪೇಸ್ಟ್ / ಬ್ರಷ್, ಸೋಪು, ಬಿಸ್ಕತ್, ಅಕ್ಕಿ, ಬೇಳೆ ಕಾಳುಗಳು, ಸಾಂಬಾರ ಪದಾರ್ಥಗಳು, ಬಕೆಟ್, ಟಾರ್ಪಲಿನ್, ಟವೆಲ್, ಜಮಕಾನ, ಲೋಟ ತಟ್ಟೆಗಳು, ಎಣ್ಣೆ ಇತ್ಯಾದಿ ಅಗತ್ಯ ವಸ್ತುಗಳಿವೆ. ವಯನಾಡಿನ ಭೀಕರತೆ, ಸಾವು ನೋವು ನೋಡಲು ಸಾಧ್ಯವಿಲ್ಲ. ಅಗಲಿದ ಆತ್ಮಗಳಿಗೆ ಶಾಂತಿ ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಮನೆಯವರಿಗೆ ಆ ಭಗವಂತ ಕರುಣಿಸಲಿ. ಈ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನಮ್ಮ ಕೈಲಾದ ಸೇವೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ನುಡಿದಿದ್ದಾರೆ.

    • 2019ರಲ್ಲಿ ಕೊಡಗು ಕೇರಳ ಪ್ರವಾಹ ದುರಂತ ಸಂಭವಿಸಿದ ಸಂದರ್ಭದಲ್ಲೂ ಬಿ.ಟಿ.ಎಂ ಮತ್ತು ಜಯನಗರ ವಿಧಾನಸಭಾ‌ ಕ್ಷೇತ್ರಗಳಿಂದ 16 ಲಾರಿಗಳಲ್ಲಿ ರೂ.1 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು‌ ಕಳುಹಿಸಲಾಗಿತ್ತು.

    • 2020 ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಪ್ರವಾಹದ ‌ದುರಂತದ ಸಮಯದಲ್ಲಿ ಸಹ 20 ಲಾರಿಗಳಲ್ಲಿ ರೂ. 1.25 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿತ್ತು.

    • ಕೋವಿಡ್‌ನ ಸಮಯದಲ್ಲಿ ಪ್ರತಿದಿನ ಒಂದನೆ ಅಲೆ‌ 50,000 ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ 35,000 ಜನರಿಗೆ ಉಚಿತವಾಗಿ ಊಟವನ್ನು ನೀಡಲಾಗಿತ್ತು ಅದರೊಂದಿಗೆ ಎರಡೂ ಅಲೆಗಳಲ್ಲಿ ಸುಮಾರು 120000 ಕಿಟ್ ಗಳನ್ನು ವಿತರಿಸಲಾಗಿತ್ತು. ಇದರೊಂದಿಗೆ ಹಾಲು, ಬ್ರೆಡ್, ಮೊಟ್ಟೆ ತರಕಾರಿಗಳನ್ನು ಉಚಿತವಾಗಿ ನೀಡಲಾಗಿತ್ತು.

    ಇದೀಗ ಕೇರಳದ ವಯನಾಡ್ ಹಾಗೂ ಕರಾವಳಿಯ ಶರೂರು ಭೂಕುಸಿತ ಸಂತ್ರಸ್ತರಿಗೆ ಆಹಾರ ಹಾಗೂ ಅಗತ್ಯ ಸಾಮಾಗ್ರಿಗಳ ರವಾನಿಸಿದ ಸಂದರ್ಭದಲ್ಲಿ ಶಾಸಕ ಯು.ಬಿ.ವೆಂಕಟೇಶ್, ಕೆಪಿಸಸಿ ಖಜಾಂಚಿ.‌ಕೃಷ್ಣಂರಾಜು, ಮುಖಂಡರಾದ ಬಿ.ಮಲ್ಲಿಕಾರ್ಜುನ್, ಚಂದ್ರಪ್ಪ, ‌ಆನಂದ್, ಮಂಜುಳಾ ಸಂಪತ್, ಬಿ.ಮೋಹನ್, ಗೋವರ್ಧನ ರೆಡ್ಡಿ, ಮುನಿರಾಜು, ವೆಂಕಟಸ್ವಾಮಿ, ಚಂದ್ರಪ್ಪ‌‌ನಗರ. ಮಂಜು ಸಹಿತ ಅನೇಕರು ಉಪಸ್ಥಿತರಿದ್ದರು.

  • ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತದಲ್ಲಿ ರಕ್ಷಣೆ; ಸರ್ವಪಕ್ಷ ಸಭೆಯಲ್ಲಿ ಸಹಮತ

    ನವದೆಹಲಿ: ಹಿಂಸಾಚಾರದಿಂದ ತತ್ತರಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಆಗಮಿಸಿದ್ದು, ಅವರಿಗೆ ರಕ್ಷಣೆ ನೀಡಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಈ ನಿಲುವಿಗೆ ಸರ್ವಪಕ್ಷಗಳು ಸಹಮತ ಸೂಚಿಸಿವೆ.

    ಈ ಸಂಬಂಧ ನವ ದೆಹಲಿಯಲ್ಲಿ ಮಂಗಳವಾರ ನಡೆದ ಸರ್ವಪಕ್ಷ ಸಭೆ ಮಹತ್ವದ ನಿರ್ಣಯ ಅಂಗೀಕರಿಸಿದೆ. ಬಾಂಗ್ಲಾದೇಶದಿಂದ ಪಲಾಯನವಾಗಿರುವ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯಕ್ಕೆ ಸರ್ವಪಕ್ಷಗಳು ಬೆಂಬಲಿಸಿವೆ.

    ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಕಲ ರೀತಿಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.

  • ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

    ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

    ಮಂಗಳೂರು, ಭಾರೀ‌ ಮಳೆ ಹಾಗೂ ಸರಣಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿಯನ್ನು‌ ನಿಗದಿಪಡಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭುಕುಸಿತದಿಂದಾಗಿ ಹಾನಿಯ ಹಿನ್ನೆಲೆಯಲ್ಲಿ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿಯಮವನ್ನು ತಾತ್ಕಾಲಿಕವಾಗಿ ಜಾರಿಗೊಳಿಸಿದೆ.

    ರಾಷ್ಟ್ರೀಯ ಹೆದ್ದಾರಿ-66ರ ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವೆ ಹಾಗೂ ರಾಷ್ಟ್ರೀಯ ಹೆದ್ದಾರಿ-73ರ ಬಿ.ಸಿ. ರೋಡ್ ಮತ್ತು ನಂತೂರು ನಡುವೆ ವಾಹನಗಳ ವೇಗದ ಮಿತಿ ಗಂಟೆಗೆ 40 ಕಿಮೀ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

  • ಮೈಸೂರು ಪಾದಯಾತ್ರೆ ನಂತರ ‘ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರ ತಯಾರಿ..!

    ಮೈಸೂರು ಪಾದಯಾತ್ರೆ ನಂತರ ‘ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರ ತಯಾರಿ..!

    ಬೆಂಗಳೂರು: ಮೂಡಾ ಹಗರಣ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿರುವಂತೆಯೇ, ಮತ್ತೊಂದೆಡೆ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಬಳ್ಳಾರಿ ಚಲೋಗೆ ಬಿಜೆಪಿ ತಯಾರಿ ನಡೆಸಿದೆ.

    ಬೆಂಗಳೂರು-ಮೈಸೂರು ಪಾದಯಾತ್ರೆ ಬೆನ್ನಲ್ಲೇ ಮತ್ತೊಂದು ಸಮಾವೇಶಕ್ಕೆ ಬಿಜೆಪಿ ತಯಾರಿ ನಡೆಸಿದ್ದು
    ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮ ಅಕ್ರಮಗಳನ್ನು ಖಂಡಿಸಿ ಸದ್ಯದಲ್ಲೇ ಬಳ್ಳಾರಿಯಲ್ಲಿ ಈ ಬೃಹತ್ ಸಮಾವೇಶ ನಡೆಸಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗಿದೆ.

    ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಈ ಸಂಬಂಧ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಳ್ಳಾರಿ ಭಾಗದ ಪ್ರಭಾವಿ ನಾಯಕ ಶ್ರೀರಾಮುಲು ಬೆಂಬಲಿಗರು ಕೂಡಾ ಬಳ್ಳಾರಿ ಚಲೋ ನಡೆಸುವ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಇದಕ್ಕೆ ಪೂರಕವೆಂಬಂತೆ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಶ್ರೀರಾಮುಲು, ಬಳ್ಳಾರಿ ಭಾಗದಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸಲು ತಮ್ಮಪಕ್ಷ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ. ಬೀದರ್‌ನಿಂದ ಬಳ್ಳಾರಿಗೆ ಅಥವಾ ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆದಿದ್ದು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಈ ಬಗ್ಗೆ ನಿರ್ಧರಿಸಲಾಗುವುದು ಎಂದವರು ತಿಳಿಸಿದ್ದಾರೆ.

  • ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

    ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

    ಹೈದರಾಬಾದ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರ್ಘಟನೆಯ ಸಂತ್ರಸ್ತರ ನೆರವಿಗೆ ಧಾವಿಸಿರುವ ದಕ್ಷಿಣ ಭಾರತದ ಖ್ಯಾತ ನಟರಾದ ಚಿರಂಜೀವಿ ಹಾಗೂ ರಾಮ್ ಚರಣ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ,

    ಈ ದುರಂತದಲ್ಲಿ 380ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಸಂತ್ರಸ್ತರ ನೆರವಿಗೆ ಸಿನಿಮಾ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ. ಇದೇ ವೇಳೆ, ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ

  • ‘ಮೈಸೂರು ಪಾದಯಾತ್ರೆ’ ವೇಳೆ ಬಿಜೆಪಿ ಕಾರ್ಯಕರ್ತೆ ಸಾವು..

    ರಾಮನಗರ: ಮುಡಾ ಹಗರಣ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿತ್ತಿರುವ ಪಾದಯಾತ್ರೆ ನಡುವೆ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಬಿಜೆಪಿ- ಜೆಡಿಎಸ್​ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ನಡೆಸತ್ತಿದ್ದು, ಮೂರನೇ ದಿನವಾದ ಸೋಮವಾರ ಈ ಜಾಥಾ ರಾಮನಗರ ಜಿಲ್ಲೆ ಪ್ರವೇಶಿಸಿದೆ. ಚನ್ನಪಟ್ಟಣದಲ್ಲಿ ಪಾದಯಾತ್ರೆಯಲ್ಲಿ ನಡೆಯುತ್ತಿರುವ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ಬೆಂಗಳೂರಿನ ಬಸವನಗುಡಿಯ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಅವರು ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದು, ಕೂಡಲೇ ಚನ್ನಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಾಗಲೇ ಅವರು ಗೌರಮ್ಮ ಕೊನೆಯುಸಿರೆಳೆದಿದ್ದಾರೆ. ಕಾರ್ಯಕರ್ತೆಯ ನಿಧನಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.

  • ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ

    ಢಾಕಾ: ಉದ್ಯೋಗ ಮೀಸಲಾತಿ ವಿವಾದದಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ.

    ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿದ್ದು ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಒಂದೆಡೆ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆದಿದ್ದರೆ, ಆಡಳಿತ ಪಕ್ಷದ ಕಾರ್ಯಕರ್ತರು ಈ ಹೋರಾಟಕ್ಕೆ ಅಡ್ಡಿಪಡಿಸಿದ್ದಾರೆ. ಈ ಸನ್ನಿವೇಶಕ್ಕೆ ವೇಶದಿಂದಾಗಿ ಸಂಘರ್ಷ ಭುಗಿಲೆದ್ದು ಇಡೀ ದೆಶ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.

    ಈ ನಡುವೆ, ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜೀನಾಮೆ ಬಳಿಕ ಸುರಕ್ಷಿತ ಸ್ಥಳಕ್ಕೆ ಅವರು ತೆರಳಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನವಾಗಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ.

  • ಯಾದಗಿರಿ PSI ಸಾವಿನ ಪ್ರಕರಣದ ಬೆನ್ನಲ್ಲೇ ಇತ್ತ ಬೆಂಗಳೂರು CCB ಅಧಿಕಾರಿ ಸಾವಿಗೆ ಶರಣು

    ಯಾದಗಿರಿ PSI ಸಾವಿನ ಪ್ರಕರಣದ ಬೆನ್ನಲ್ಲೇ ಇತ್ತ ಬೆಂಗಳೂರು CCB ಅಧಿಕಾರಿ ಸಾವಿಗೆ ಶರಣು

    ಬೆಂಗಳೂರು: ಯಾದಗಿರಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವಾಗಲೇ ಇತ್ತ ರಾಜಧಾನಿ‌ ಬೆಂಗಳೂರು ಬಳಿ ಪೊಲೀಸ್ ಇನ್‌ಸ್ಪೆಕ್ಟರ್ ಸಾವಿಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ.

    ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಡದಿ ಬಳಿ, ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಮೃತ ಅಧಿಕಾರಿ ಬೆಂಗಳೂರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾವಿಗೆ ಕಾರಣ ಏನೆಂಬ ಬಗ್ಗೆ ಏನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

  • PSI ಪರುಶುರಾಮ್ ಶಂಕಾಸ್ಪದ ಸಾವು ಸಿಬಿಐ ತನಿಖೆಗೆ ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ಒತ್ತಾಯ

    ಬೆಂಗಳೂರು: ಯಾದಗಿರಿ ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವು ಕುರಿತು ಸಿಬಿಐ ತನಿಖೆಗೆ ವಹಿಸಬೇಕೆಂದು ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ಒತ್ತಾಯಿಸಿದೆ.

    ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಕ್ರಾಂತಿರಾಜು, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಚಿದರಹಳ್ಳಿ ಮಹಾದೇವಸ್ವಾಮಿ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿಯ ವಿ.ಗಿರಿಕುಮಾರ್, ಹಿರಿಯ ಹೋರಾಟಗಾರರಾದ ಉಮಾಶಂಕರ್, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿ.ದೇವರಾಜ್ ರವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ,  ಸ್ವಾತಂತ್ರ್ಯ ಬಂದ 77ವರ್ಷಗಳು ಕಳೆದರು ಇಂದು ಸಹ ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ನಡೆಯುತ್ತಿದೆ. ಇತ್ತಿಚೇಗೆ ರಾಜ್ಯದಲ್ಲಿ ದಲಿತ ಸಮುದಾಯದ ಅಧಿಕಾರಿಗಳು ಭ್ರಷ್ಟಚಾರದ ವಿರುದ್ದ ಸೆಣಸಲು ಆಗದೇ ಸಾವಿಗೆ ಶರಣುಗಾತ್ತಿದ್ದಾರೆ ಎಂದು‌ಕಳವಳ ವ್ಯಕ್ತಪಡಿಸಿದರು.

    ಯಾದಗಿರಿ ಪೊಲೀಸ್ ಠಾಣೆ ಪಿ.ಎಸ್.ಐ. ಪರುಶುರಾಮ್ ಶಂಕಸ್ಪಾದ ಸಾವು ಸಂಭವಿಸಿದ ಕಾರಣ ಕುರಿತು ಪರುಶುರಾಮ್ ರವರ ಪತ್ನಿ ಶ್ವೆತ್ರಾ ರವರು ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ 30ಲಕ್ಷ ರೂಪಾಯಿ ಲಂಚ ಬೇಡಿಕೆ ಹಾಗೂ ಜಾತಿ ನಿಂದನೆ ಮಾಡಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪರುಶುರಾಮ್ ರವರು ಸಾವಿಗೀಡಾಗಿದ್ದಾರೆ ಎಂದು ಕ್ರಾಂತಿರಾಜು ದೂರಿದರು.

    ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವಿಗೆ ನ್ಯಾಯ ಸಿಗಬೇಕು ಎಂದರೆ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಅಗ್ರಹ ಎಂದರು

  • ದೇವಸ್ಥಾನದ ಮೆರವಣಿಗೆ ವೇಳೆ ಘೋರ ದುರಂತ; ವಿದ್ಯುತ್ ಸ್ಪರ್ಷಿಸಿ 8 ಮಂದಿ ಸಾವು

    ದೇವಸ್ಥಾನದ ಮೆರವಣಿಗೆ ವೇಳೆ ಘೋರ ದುರಂತ; ವಿದ್ಯುತ್ ಸ್ಪರ್ಷಿಸಿ 8 ಮಂದಿ ಸಾವು

    ಪಾಟ್ನಾ: ಬಿಹಾರದ ಸುಲ್ತಾನ್‌ಪುರ ಗ್ರಾಮದ ದೇವಸ್ಥಾನವೊಂದರ ಕಾರ್ಯಕ್ರಮದ ಮೆರವಣಿಗೆಯಲ್ಲಿ ಡಿಜೆ ವಾಹನಕ್ಕೆ ವಿದ್ಯುತ್‌ ತಗುಲಿ 8 ಮಂದಿ ಬಲಿಯಾಗಿದ್ದಾರೆ.

    ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಹುಡುಗರು ಪ್ರತಿ ಸೋಮವಾರ ಸಮೀಪದ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಕೈಂಕರ್ಯ ಆಯೋಜಿಸಿದ್ದರು. ಈ ಸಂಬಂಧ ಭಾನುವಾರ ಮಧ್ಯರಾತ್ರಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಡಿಜೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದೆ.

    ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.