Blog

  • ಕೋಲಾರ ಸಮೀಪ ಭೀಕರ ಅಪಘಾತ; ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ದುರ್ಮರಣ

    ಕೋಲಾರ ಸಮೀಪ ಭೀಕರ ಅಪಘಾತ; ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ದುರ್ಮರಣ

    ಕೋಲಾರ: ಬೆಂಗಳೂರಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಲಾರ ‌ಸಮೀಪದ ಸಹಕಾರ ನಗರದ ಬಳಿ ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.

    ಮೃತಪಟ್ಟ ಮೂವರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳಾಗಿದ್ದು, ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್, ಕೋಲಾರ ಜಿಲ್ಲೆ ಬಂಗಾರಪೇಟೆಯ ನಿಶ್ಚಲ್ಎಂದು ಗುರುತಿಸಲಾಗಿದೆ. ಸಾಯಿಗಗನ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಯಿಗಗನ್ ಸೋದರಿಯ ಮದುವೆ ಆಮಂತ್ರಣ ಹಂಚಲು ಸ್ನೇಹಿತರು ಕಾರಿನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ.

    ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸೂಕ್ತ ರಕ್ಷಣೆ ನೀಡಿಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸೂಕ್ತ ರಕ್ಷಣೆ ನೀಡಿಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಸೈಟ್ ಹಂಚಿಕೆ ಕರ್ಮಕಾಣದ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

    ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮವಹಿಸುವ ಅನುಮಾನ ಹಿನ್ನೆಲೆ ಬಿಜೆಪಿ ನಾಯಕರು ಹೈಕೋರ್ಟ್ ಬಾಗಿಲು ತಟ್ಟಿದ್ದಾರೆ. ಪಾದಯಾತ್ರೆಗೆ ಅನುಮತಿಗಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ರಿಟ್ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ಅನುಮತಿ ಕೇಳಿದರೂ ಸರ್ಕಾರ ಪ್ರತಿಕ್ರಿಯಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಣೆ ಆರಂಭವಾಗುವ ಹೊತ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಸೂಕ್ತ ಭದ್ರತೆ ವಿಚಾರದಲ್ಲಿ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಜಿ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನು ಪ್ರಕಾರ ಪಾದಯಾತ್ರೆ ಭದ್ರತೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಕ್ಲಾ ಪೊಲೀಸ್​ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

  • ಮಾಧ್ಯಮ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ‘ರಾಜ್ಯ ಸಂವಹನ ಪ್ರಶಸ್ತಿ’;

    ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Relations Council of India- PRCI) ನೀಡುವ ‘ರಾಜ್ಯ ಸಂವಹನ ಪ್ರಶಸ್ತಿ‌’ ಪ್ರದಾನ ಸಮಾರಂಭ ಗಮನಸೆಳೆಯಿತು. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಬೆಂಗಳೂರಿನಲ್ಲಿ ನೆರವೇರಿತು. PRCI ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ಸಮಾರಂಭದಲ್ಲಿ ಈ ಬಾರಿ ಮಾಧ್ಯಮ, ಸಂವಹನ, ಸಿನಿಮಾ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ 12 ಮಂದಿಗೆ ಪ್ರಶಸ್ತಿ ನೀಡಲಾಯಿತು.

    ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ, ನಿವೃತ್ತ ನ್ಯಾಯಮೂರ್ತಿ ಗಳಾದ ಡಾ. ಹೆಚ್ ಎಸ್ ಪ್ರಭಾಕರ ಶಾಸ್ತ್ರಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ಕರ್ನಾಟಕ ಮೀಡಿಯಾ ಕೌನ್ಸಿಲ್ ಅಧ್ಯಕ್ಷ ಅಲ್ವಿನ್ ಮೆಂಡೊನ್ಸಾ, ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಡಿ.ಪಿ.ಮುರುಳಿಧರ್, ವಿಜಯಕರ್ನಾಟಕ ಮುಖ್ಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ‘ದ ಹಿಂದು’ ಹಿರಿಯ ಪತ್ರಕರ್ತ ಬಿ.ಎಸ್.ಸತೀಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಪತ್ರಕರ್ತೆ ರಜಿನಿ ಎಂ.ಜಿ., ಬೆಂಗಳೂರು ವೈರ್ ಮಾಧ್ಯಮದ ಸಂಪಾದಕ ಶ್ಯಾಮ್ ಎಸ್., ಬೆಂಗಳೂರು ವಿಶ್ವವಿದ್ಯಾನಿಲಯದ ಮಾಧ್ಯಮ ವಿದ್ಯುನ್ಮಾನ ಇಲಾಖೆ ಅಸೋಸಿಯೇಟ್ ಪ್ರೊಫೆಸರ್ ಡಾ. ರಾಜೇಶ್ವರಿ ತಾರೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾವಣನ್ ರಾಘವೇಂದ್ರ, ಸಂಯೋಜಕ- ಕಲಾವಿದ ಡಾ.ಸಂದೇಶ್ ನಾಗರಾಜ್, BBMPಯ ಕಲೆ ಮತ್ತು ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷೆ ಎಸ್ ಕವಿತಾ, ಯುವ ಬಲ ಜಾಗೃತಿ ಪರಿಷತ್‌ನ ಯುವ ಸಬಲೀಕರಣ ಅಧ್ಯಕ್ಷೆ ಪ್ರಾಚಿ ಗೌಡ, ವೈಸಿಸಿ ಕಥೆ ನಿರ್ಮಾಪಕಿ ರಮ್ಯಾ ಜೋಶಿ ಅವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರ್ವಜನಿಕ ಸಂಪರ್ಕ ಕ್ಷೇತ್ರವು ಇಂದು ಎಲ್ಲಾ ವಲಯಗಳಲ್ಲೂ ಅತೀ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ಯಾವುದೇ ಸಚಿವರ ಅಥವಾ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಗುರುತಿವಿಕೆಯು PR ಅವರ ಮೇಲೆ ನಿಂತಿದೆ ಎಂದರು. ಸಂವಹನ ಬಹಳ ಮುಖ್ಯ. ಮೊದಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಹಳಷ್ಟು ಸ್ವಾತಂತ್ರ್ಯ ಇತ್ತು. ಈಗ ಮಾಧ್ಯಮಗಳಲ್ಲಿ ನಿರ್ಭೀತಿಯಿಂದ ಹಾಗೂ ನಿಷ್ಪಕ್ಷಪಾತವಾಗಿ ವರದಿ ಮಾಡುವ ಸಂದರ್ಭವಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಸಮತೋಲಿತ ವರದಿಗಳು ಬರಬೇಕಿದೆ. ಮಾಧ್ಯಮಗಳಲ್ಲಿ ಸಂಪಾದಕರಿಗೆ ಪೂರ್ತಿ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ನೈಜವಾಗಿ ಮಾಧ್ಯಮಗಳು ಕೆಲಸ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸಾರಿಗೆ ವಿಷಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರ ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದರೆ ಆ ಸಂಸ್ಥೆಗಳು ಸಾರ್ವಜನಿಕರಿಗೆ ಹತ್ತಿರವಾಗುತ್ತವೆ. ಈ ಕ್ರಮದಿಂದಾಗಿಯೇ ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳಿಗೆ 500ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.
    KSRTC ಸಂಸ್ಥೆಯೊಂದಕ್ಕೇ 356 ಪ್ರಶಸ್ತಿಗಳು ಬಂದಿವೆ ಎಂದು ಉದಾಹರಿಸಿದರು.

    ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಎಸ್.ಪ್ರಭಾಕರ ಶಾಸ್ತ್ರಿ ಮಾತನಾಡಿ ಪುರಾಣ ಕಾಲದಿಂದಲೂ ಸಾರ್ವಜನಿಕ ಸಂಪರ್ಕ ಕ್ಷೇತ್ರವಿದೆ. ಆದರೆ ಅದರ‌ ಪಾತ್ರಗಳು ಭಿನ್ನವಾಗಿದ್ದವು. ರಾಮಾಯಾಣ, ಮಹಾಭಾರತದಲ್ಲಿ‌ ಕೂಡ ಸಂವಹನ ಸಾರ್ವಜನಿಕ ಸಂಪರ್ಕವಿತ್ತು ಎಂದರು. ಗೃಹಿಣಿ ತನ್ನ ಮನೆಯ ಹಿತ ಬಯಸುವ ರೀತಿಯಲ್ಲೇ ಕಂಪನಿಗಳ ಬಗ್ಗೆ ಅದರ ಪಿಆರ್‌ಒ ಹಿತ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    PRCI ಸಂಸ್ಥಾಪಕ ಜಯರಾಮ್ ಮಾತನಾಡಿ ದೇಶದಲ್ಲಿ 59 ಚಾಪ್ಟರ್ ಇದೆ. ನಾನು ಕಿರುತೆರೆಯಲ್ಲಿ, ಪತ್ರಕರ್ತನಾಗಿ ಹಾಗೂ ಸಾರ್ವಜನಿಕ‌ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಮಾಜದಲ್ಲಿ‌ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆ ಮಹತ್ವದ್ದಾಗಿದೆ ಎಂದರು. ಪಿಆರ್ ಸಿಐನಲ್ಲಿ 80 ವಿವಿಧ ವಲಯಗಳ ಕ್ಷೇತ್ರಗಳ ತಜ್ಞರಿದ್ದಾರೆ. ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಪಿಆರ್ ಸಿಐ ಜಾಗತಿಕ ಸಮಾವೇಶ ಆಯೋಜಿಸುತ್ತಿದ್ದೇವೆ. ಅದರಲ್ಲಿ ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೇಣುಗೋಪಾಲ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನ್, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಉಪಾಧ್ಯಕ್ಷರೂ ಆದ KSRTC ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, PRCI ಬೆಂಗಳೂರು ವಲಯ ಅಧ್ಯಕ್ಷ ರಾಮಕೃಷ್ಣ, ಸಂಘಟನೆಯ ಪ್ರಮುಖರಾದ ಸ್ವಾಮಿ, ಆನಂದ್, ಚಿನ್‌ಯ್ ಪ್ರವೀಣ್ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

  • UAEಯಲ್ಲಿ ಪುರುಷ ನರ್ಸ್ ಉದ್ಯೋವಕಾಶ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

    UAEಯಲ್ಲಿ ಪುರುಷ ನರ್ಸ್ ಉದ್ಯೋವಕಾಶ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

    UAEಯಲ್ಲಿ ಪುರುಷ ನರ್ಸ್ ಉದ್ಯೋವಕಾಶ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ.. ಆಯ್ಕೆಯಾದವರಿಗೆ ಮಾಸಿಕ 1,11,000. ರೂಪಾಯಿ ವೇತನ..

    ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್ಗಳಿಗೆ
    ಉದ್ಯೋಗ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರುವರಿಗೆಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಅರ್ಹರಿಗೆ ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ.

    ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವರು

    ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಈ ಹಿಂದೆ ಸ್ಲೋವಾಕಿಯಾದಲ್ಲಿ ಹಲವಾರು ಕನ್ನಡಿಗರಿಗೆ ನಿಗಮದ ಮೂಲಕ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನಲ್ಲೇ ಯುಎಈ ನಲ್ಲಿ ಪುರುಷ ನರ್ಸ್ಗಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ಅವರು ಈ ಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

    UAE ಯಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದೊಳಗಿನ ವರಾಗಿರಬೇಕು. 2 ವರ್ಷ ಅನುಭವ ಹೊಂದಿರಲೇಬೇಕು. ಆಯ್ಕೆಯಾಗುವವರಿಗೆ 5 ಸಾವಿರ ಎಇಡಿ (ಮಾಸಿಕ 1,11,000. ರೂ ವೇತನ), 30 ದಿನ ವೇತನ ರಹಿತ ಸಂಬಳ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ, ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

    ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದೆ. ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕೌಶಲ್ಯಾಭಿವೃದ್ದಿ ನಿಗಮ ತಿಳಿಸಿದೆ. ಕೆಎಸ್‌ಡಿಸಿ ಈ ಹಿಂದೆ ಸ್ಲೋವಾಕಿಯಾದಲ್ಲಿ ಐಟಿ, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ-ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಹಲವಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ. ಕೆಎಸ್‌ಡಿಸಿ ಹಂಗೇರಿಯಲ್ಲಿ 37 ಡ್ರೈವರ್ಗಳಿಗೆ ಉದ್ಯೋಗಗಳನ್ನು ಒದಗಿಸಿತ್ತು. ಜೊತೆಗೆ ವೆಲ್ಡರ್‌ಗಳಿಗೆ ಮಾರಿಷಸ್‌ನಲ್ಲಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.

    ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕೆಎಸ್‌ಡಿಸಿ ವೆಬ್ಸೈಟ್ http://imck.kaushalkar.com ಭೇಟಿ ನೀಡಬಹುದು ಮತ್ತು hr.imck@gmail.com ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
    ಅಭ್ಯರ್ಥಿಗಳು ಈ ವಾಟ್ಸಪ್ಪ್ ನಂಬರ್ಗಳ 9606492213/ 9606492214 ಮೂಲಕ ವಿವರಗಳನ್ನು ಪಡಯಬಹುದು ಹಾಗು ಈ ವಿಳಾಸಕ್ಕೆ ಇಂಟರ್ನ್ಯಾಷನಲ್ ಮೈಗ್ರೇಶನ್ ಸೆಂಟರ್– ಕರ್ನಾಟಕ (IMC-K), ನಾಲ್ಕನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕ್ಯಾಂಪಸ್, ಡೇರಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು–560029 ಭೇಟಿ ನೀಡಬಹುದು ಎಂದು ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

  • ಭೂ ಕುಸಿತ.. ಈಗ ಪುತ್ತೂರು ಸರದಿ.. ಹೆದ್ದಾರಿಯಲ್ಲಿ ವಾಹನ ಸಂಚಾರ ಏರುಪೇರು

    ಮಂಗಳೂರು: ಕರಾವಳಿ ಮಲೆನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು ಬಹುತೇಕ ನದಿಗಳ ತೀರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ಪಾತ್ರದ ಅನೇಕ ಹಳ್ಳಿಗಳ ತಗ್ಗು ಪ್ರದೇಶಗಳು ಜಲಾವ್ರತವಾಗಿವೆ.

    ಈ ನಡುವೆ, ರಾಜ್ಯದ ಹಲವೆಡೆ ಮಳೆಯಿಂದಾಗಿ ಸರಣಿ ಅವಘಡಗಳು ಸಂಭವಿಸುತ್ತಿದ್ದು. ಭೂ ಕುಸಿತದ ದುರ್ಘಟನೆಗಳಿಂದಾಗಿ, ಹಲವು ನಗರಗಳನ್ನು ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿ ಶುಕ್ರವಾರ ಮುಂಜಾನೆ ಭೂ ಕುಸಿತ ಸಂಭವಿಸಿದೆ.

    ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತೆಂಕಿಲ ಬಪ್ಪಳಿಗೆ ಎಂಬಲ್ಲಿ ಬೈಪಾಸ್ ಬಳಿ ಗುಡ್ಡಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳಕ್ಕೆ ಧಾವಿಸಿರುವ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

  • ಮುಡಾ ಹಗರಣ; ಬಿಜೆಪಿ ಪಾದಯಾತ್ರೆಗೆ ಸರ್ಕಾರದಿಂದ ಅಡ್ಡಿ ಇಲ್ಲ

    ಮುಡಾ ಹಗರಣ; ಬಿಜೆಪಿ ಪಾದಯಾತ್ರೆಗೆ ಸರ್ಕಾರದಿಂದ ಅಡ್ಡಿ ಇಲ್ಲ

    ಬೆಂಗಳೂರು: ಮುಡಾ ಹಗರಣ ಸಂಬಂಧ ಪ್ರತಿಪಕ್ಷ ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಗೆ ಸರ್ಕಾರದಿಂದ ಅಡ್ಡಿ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದಾರೆ. ಹೀಗಾಗಿ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಿದ್ದೇವೆ ಎಂದವರು ತಿಳಿಸಿದರು.

  • ಶೋಕಾಸ್ ನೋಟಿಸಿಗೆ ಹೆದರಲ್ಲ; ರಾಜ್ಯಪಾಲರಿಗೆ ಸಿದ್ದು ಸವಾಲ್

    ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ಆಡಳಿತ ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಮುಡಾ ಹಗರಣ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ಮುಂದಿರುವಂತೆಯೇ, ಈ ಹಗರಣ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಅರ್ಜಿ ಹಿನ್ನೆಲೆಯಲ್ಲಿ ರಾಜ್ಯಪಾಲರು ನೀಡಿರುವ ನೋಟಿಸ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

    ಈ ನಡುವೆ ರಾಜ್ಯಪಾಲರು ಶೋಕಾಸ್ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಇದಕ್ಕೆಲ್ಲ ನಾನು ಹೆದರಲ್ಲ. ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ‌ ಎಂದು ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಸಿಎಂ, ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ತಪ್ಪು ಮಾಡಿದ್ದರೆ ತಾನೇ ಹೆದರುವುದು ಎಂದರು.

    ಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ ಎಂದು ದೂರಿದ ಸಿದ್ದರಾಮಯ್ಯ, ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

    ದೂರುದಾರ ಟಿ.ಜೆ. ಅಬ್ರಹ್ರಾಂ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಜುಲೈ 26ರಂದು ಬೆಳಿಗ್ಗೆ 11.30ಕ್ಕೆ ಟಿ.ಜೆ. ಅಬ್ರಹ್ರಾಂ ನೀಡಿದ್ದು, ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್​ಕೆ ಅತೀಕ್​​ಗೆ ಹೇಳುತ್ತಾರೆ ಎಂದು ಬೆಳವಣಿಗೆ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಬಿಜೆಪಿ ನಾಯಕರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಬಗ್ಗೆ ಈವರೆಗೂ ಶೋಕಾಸ್ ನೋಟಿಸ್ ನೀಡದ ರಾಜ್ಯಪಾಲರು ನನಗೆ ಮಾತ್ರ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿರುವ ವೈಖರಿಯೂ ಚರ್ಚೆಗೆ ಎಡೆಮಾಡಿಕೊಟ್ಟಿದೆ.

  • ವಯನಾಡ್ ಸಂತ್ರಸ್ತರಿಗೆ ಬಿಬಿಎಂಪಿ ಪರಿವಾರ ನೆರವಿನ ಹಸ್ತ; ದಿನಸಿ, ಅಗತ್ಯ ವಸ್ತು ರವಾನೆ

    ವಯನಾಡ್ ಸಂತ್ರಸ್ತರಿಗೆ ಬಿಬಿಎಂಪಿ ಪರಿವಾರ ನೆರವಿನ ಹಸ್ತ.. ಅಧಿಕಾರಿ-ನೌಕರರ ಕ್ಷೇಮಾಭಿವೃದ್ದಿ ಸಂಘ, ನೌಕರರ ಸಹಕಾರ ಸಂಘದಿಂದ ದಿನಸಿ, ಅಗತ್ಯ ವಸ್ತು ರವಾನೆ.. ಹತ್ತು ಟನ್ ಆಹಾರ ಪದಾರ್ಥಗಳು ಮತ್ತು ದಿನ ನಿತ್ಯ ಬಳಕೆಯ ವಸ್ತು ರವಾನೆ..

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಕೇರಳದ ವಯನಾಡ್‌ ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ವಾಹನಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಸಹಕಾರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಚಾಲನೆ ನೀಡಿದರು.

    ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಬಂದಾಗ ಬಿಬಿಎಂಪಿ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಾ ಬಂದಿದೆ. ವಯನಾಡ್ ದುರಂತದಲ್ಲಿ ನಮ್ಮ ಬಿಬಿಎಂಪಿ ಸಂಘವು ಅಂದಾಜು 25ಲಕ್ಷ ರೂಪಾಯಿ ಮೌಲ್ಯದ ದಿನಸಿ ಸಾಮಾಗ್ರಿಗಳು ನೀಡುತ್ತಿದ್ದಾರೆ. ಬಿಬಿಎಂಪಿ ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಪ್ರಶಂಶಿಸಿದರು.  ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಬಳದಲ್ಲಿ ವಯನಾಡ್ ಸಂತ್ರಸ್ತರಿಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ ಎಂದ ಅವರು, ವಯನಾಡ್ ದುರಂತದಲ್ಲಿ ನೋವಿನ ಸಂಗತಿ, ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ಅಧಿಕಾರಿಗಳ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದು ಹೇಳಿದರು.

    ಅಧ್ಯಕ್ಷರಾದ ಎ.ಅಮೃತ್ ರಾಜ್ ಮಾತನಾಡಿ ಕೇರಳ ವಯನಾಡ್ ನಲ್ಲಿ ಮಳೆ ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿ ಇದ್ದಾರೆ .ಸರ್ಕಾರ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರವಾಗುತ್ತದೆ. ನಮ್ಮ ಸಂಘಟನೆ ಈ ಹಿಂದೆ ಉತ್ತರ ಕರ್ನಾಟಕ ಮತ್ತು ಕೊಡಗು ಮಳೆ ಪ್ರವಾಹದಿಂದ ಸಂಕಷ್ಟ ಸಮಯದಲ್ಲಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಜನರಿಗೆ ನೀಡಲಾಯಿತು. ಧರ್ಮಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ 1ಲಕ್ಷ ಲೀಟರ್ ಕುಡಿಯುವ ನೀರನ್ನು ನೀಡಲಾಯಿತು ಎಂದು ವಿವರಿಸಿದರು.

    ವಯನಾಡ್ ಸಂತ್ರಸ್ತರಿಗೆ ಹತ್ತು ಟನ್ ಆಹಾರ ಪದಾರ್ಥಗಳು ಮತ್ತು ದಿನ ನಿತ್ಯ ಬಳಕೆಯ ವಸ್ತುಗಳಾದ (ಹಾಸಿಗೆ, ದಿಂಬು, ಬೆಡ್ ಶಿಟ್, ಸ್ವಟರ್, ಜರ್ಕಿನ್, ಪಾದರಕ್ಷೆ, ಸೀರೆ, ಕಂಬಳಿ, ಮಹಿಳೆಯರ ನೈಟ್ ಡ್ರೆಸ್ ಮತ್ತು ಪಂಚೆ,ಟವಲ್, ಲುಂಗಿ, ಟೀ ಶರ್ಟ್) ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕ್ಷೇಮಾಭಿವೃದ್ದಿ ಸಂಘದ ಮತ್ತು ಸಹಕಾರ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಕೆ.ಜಿ.ರವಿ, ಡಾ.ಶೋಭಾ, ಹೆಚ್.ಕೆ.ಹರೀಶ್, ಸೋಮಶೇಖ‌ರ್, ಆ‌ರ್.ರೇಣುಕಾಂಬ , ಕೆ.ಮಂಜೇಗೌಡ, ಶ್ರೀಧರ್ ಎನ್, ಸಂತೋಷ್ ಕುಮಾ‌ರ್, ಎನ್‌.ಮಂಜುನಾಥ್, ಕೆ.ನರಸಿಂಹ ಕೆ.ಸಂತೋಷ್ ಕುಮಾರ್ ನಾಯ್ಕ, ಸಿ.ಎಂ.ಮುನಿರಾಜು, ಮಹೇಶ್ ಎಂ, ಮಂಜುನಾಥ್‌ ಎಲ್.ಆರ್, ಹರೀಶ್ ಕುಮಾ‌ರ್ ಎನ್, ವಿನಯಕುಮಾರ್, ರಾಜಶೇಖ‌ರ್, ಮಂಜುನಾಥ್, ವಾಣಿ ಅ‌ರ್.ಪಿ. ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

  • ವಯನಾಡ್ ಭೂಕುಸಿತ ಪ್ರದೇಶದಲ್ಲಿ 31 ತಾಸುಗಳಲ್ಲಿ ಬೈಲಿ ಬ್ರಿಡ್ಜ್ ನಿರ್ಮಿಸಿದ ಕರ್ನಾಟಕದ ಯೋಧರಿಗೆ ಇಡೀ ದೇಶವೇ ಸೆಲ್ಯೂಟ್..!

    ವಯನಾಡ್‌: ಮುಂಗಾರು ಮಳೆ ಆರ್ಭಟದ ನಡುವೆ, ಭೀಕರ ಭೂಕುಸಿತಕ್ಕೆ ನಲುಗಿರುವ ಕೇರಳದ ವಯನಾಡಿನಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರ ಸಜ್ಜಿನಂತೆ ಸಾಗಿದೆ. ಈ ಕಾರ್ಯಾಚರಣೆಯ ನಡುವೆ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ಈ ಸಾಧನೆ ಇಡೀ ದೇಶದ ಗಮನಸೆಳೆದಿದೆ.

    ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರ್ಘಟನೆಗಳಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು ಅನೇಕರು ಜೀವಂತ ಸಮಾಧಿಯಾಗಿರುವ ಆತಂಕವಿದೆ. ಅವರಿಗಾಗಿ ಸೇನೆ ಹಾಗೂ ಎನ್‌ಡಿ‌ಆರ್‌ಎಫ್ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೇ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ದುರ್ಗಮ ಸ್ಥಳದಲ್ಲಿ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಜನರ ರಕ್ಷಣೆಗೆ ನೆರವಾಗಿದೆ.

      ಚೂರಲ್‌ವುಲದಿಂದ ಮುಂಡಕೈಗೆ ಸಂಪರ್ಕ ಕಲ್ಪಿಸಲು 31 ತಾಸುಗಳಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಬೈಲಿ ಸೇತುವೆ ಫ‌ಲಕಗಳನ್ನು ಬಳಸಿ 190 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದೆ. ಸುಮಾರು 140 ಮಂದಿ ಯೋಧರು ಇದರಲ್ಲಿ ಕೈಜೋಡಿಸಿದ್ದರು.

    ವಯನಾಡ್‌ನ‌ ಈ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿದೆ. ಅದರಲ್ಲೂ ಭೂಕುಸಿತದ ಪ್ರದೇಶದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲು ಅವಕಾಶ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯೋಧರು ಕ್ಷಿಪ್ರ ಕಾರ್ಯಾಚರಣೆಗಿಳಿದು ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಸೇತುವೆಯಿಂದ ಚೂರಲ್‌ವುಲ ಮತ್ತು ಮುಂಡಕೈಯಲ್ಲಿ ಸಿಲುಕಿರುವ ಸಂತ್ರಸ್ತರನ್ನು ಪಾರು ಮಾಡಲು, ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಅವಕಾಶ ಸಿಕ್ಕಿದೆ.

    ಏನಿದು ‘ಬೈಲಿ’ ಸೇತುವೆ..?

    ‘ಬೈಲಿ ಸೇತುವೆ’ ಎಂಬುದು ವಿಶಿಷ್ಟ ಮಿಲಿಟರಿ ಸೇತುವೆ ಎಂದೇ ಗುರುತಾಗಿದೆ. ಎರಡನೇ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್‌ ಎಂಜಿನಿಯರ್‌ ಸರ್‌ ಡೊನಾಲ್ಡ್ ಬೈಲಿ ಅವರು ಈ ರೀತಿಯ ಸೇತುವೆ ಅಭಿವೃದ್ಧಿ ಪಡಿಸಿ ಗಮನಸೆಳೆದಿದ್ದರು. ಸಮರ ಸ್ಥಳದಲ್ಲಿ ಕ್ಷಿಪ್ರ ಜೋಡಣೆ ಮೂಲಕ ಸಿದ್ದಪಡಿಸಬಹುದಾದ, ‘ಪೋರ್ಟಬಲ್‌ ಸೇತುವೆ’ ಇದಾಗಿದ್ದು, ಪ್ರಸಕ್ತ ರಸ್ತೆಗಳನ್ನು ಸಂಪರ್ಕಿಸುವ ಸೇತುವೆಗಳಂತೆಯೇ ಇದು ಗೋಚರಿಸುತ್ತದೆ. 

  • ವಯನಾಡ್ ಭೂಕುಸಿತದಲ್ಲಿ ಮೃತರ ಸಂಖ್ಯೆ 315ಕ್ಕೆ ಏರಿಕೆ

    ವಯನಾಡ್ ಭೂಕುಸಿತದಲ್ಲಿ ಮೃತರ ಸಂಖ್ಯೆ 315ಕ್ಕೆ ಏರಿಕೆ

    ವಯನಾಡ್: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 315ಕ್ಕೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರೀ ಮಳೆಯ ಸಂದರ್ಭದಲ್ಲಿ ವಯನಾಡ್‌ನಲ್ಲಿ ಭೂ ಕುಸಿತ ಸಂಭವಿಸಿದೆ. ಅನೇಕ ಮನೆಗಳು ನೆಲಸಮವಾಗಿದ್ದು, ನೂರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ.

    ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ. ಭಾನುವಾರದಿಂದೀಚೆಗೆ ನಿರಂತರ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಅಧಿಕಾರಿಗಳ ಪ್ರಕಾರ ಈವರೆಗೂ ಸಾವನ್ನಪ್ಪಿದವರ ಸಂಖ್ಯೆ 315 ದಾಟಿದೆ. 200ಕ್ಕೂ ಹೆಚ್ಚು‌ ಮಂದಿ‌ ನಾಪತ್ತೆಯಾಗಿದ್ದು ಮೃತದೇಹಗಳಿಗಾಗಿ ಹುಡುಕಾಟ ಸಾಗಿದೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈ ಭಾರೀ ಭೂಕುಸಿತ ಸಂಭವಿಸಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ಬು ಮುಂದುವರಿಸಿದ್ದಾರೆ.‌