Thursday, January 29

ದೇವೂರ ಹಳ್ಳದ ಸೇತುವೆ ದಿಢೀರ್ ಕುಸಿತ; ವಾಹನ ಸಂಚಾರ ಏರುಪೇರು

ವಿಜಯಪುರ: ದೇವರಹಿಪ್ಪರಗಿ ಬಳಿಯ ದೇವೂರ ಹಳ್ಳದ ಸೇತುವೆ ದಿಢೀರ್ ಕುಸಿದಿದ್ದು ವಾಹನ ಸಂಚಾರ ಏರುಪೇರಾಗಿದೆ.

ಶುಕ್ರವಾರ ಹಳ್ಳದ ಸೇತುವೆಯ ಮಧ್ಯ ಭಾಗದಲ್ಲಿ  ಭಾರಿ ಗಾತ್ರದ ಗುಂಡಿ ಬಿದ್ದಿದೆ. ಇದರಿಂದಾಗಿ ತಾಳಿಕೋಟಿ ದೇವರಹಿಪ್ಪರಗಿ ಮಧ್ಯೆ ರಸ್ತೆ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.

ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಹೊರತಾಗಿ ಇತರೆ ವಾಹನ ಸಂಚಾರ ಸಂಪೂರ್ಣ ಅಪಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.