Friday, September 18

ಸಿನಿಮಾ

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ರಾಮಾಯಣದ ಕಥೆಯನ್ನು ಆಧರಿಸಿದ ಮತ್ತೊಂದು ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸೆಪ್ಟೆಂಬರ್ 25ರಂದು ಹಿಂದಿ ಹಾಗೂ ಛತ್ತೀಸ್‌ಗಢಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ್ದು, ಸೀತಾ ಅಪಹರಣದಿಂದ ಲಂಕಾ ದಹನದವರೆಗಿನ ಪ್ರಮುಖ ಘಟನೆಗಳ ಝಲಕ್ ನೀಡಿದೆ. https://youtu.be/lUhw32rt_dE?si=hHZxpcJZ-3py0Wkk ಟ್ರೇಲರ್‌ನಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವ ದೃಶ್ಯ ಪ್ರಮುಖವಾಗಿ ಮೂಡಿಬಂದಿದೆ. ಚಿನ್ನದ ಜಿಂಕೆಯ ಪ್ರಸಂಗದ ಬಳಿಕ ಸೀತೆಯ ಅಪಹರಣವಾಗುತ್ತದೆ. ವಿಷಯ ತಿಳಿದ ರಾಮ, ಸೀತೆಯ ಹುಡುಕಾಟಕ್ಕೆ ಹೊರಡುತ್ತಾರೆ. ಈ ಸಂದರ್ಭದಲ್ಲಿ ಹನುಮಂತ ಸೀತೆಯನ್ನು ಭೇಟಿಯಾಗುವ ದೃಶ್ಯಗಳೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿವೆ. ರಾಮಸೇತು ನಿರ್ಮಾಣ, ಹನುಮಂತನ ಲಂಕಾ ದಹನ ಹಾಗೂ ಸಂಜೀವಿನಿ ಪರ್ವತ ತರುವ ಸಾಹಸ ಸೇರಿದಂತೆ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ಭ...
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ

ಪ್ರಮುಖ ಸುದ್ದಿ, ಸಿನಿಮಾ
ನವದೆಹಲಿ: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಭಾರತೀಯ ಚಿತ್ರರಂಗ, ವಿಶೇಷವಾಗಿ ಕನ್ನಡ ಸಿನಿಮಾಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಿದೆ. ಬುಧವಾರ ಪತ್ರಿಕಾ ಮಾಹಿತಿ ಬ್ಯೂರೋ (PIB) ‘ಎಕ್ಸ್‌’ ಮೂಲಕ ಪ್ರಶಸ್ತಿ ಘೋಷಣೆ ಮಾಡಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅನಂತ್ ನಾಗ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸೆ.22ರಂದು ಪ್ರಶಸ್ತಿ ಪ್ರದಾನ ಗುಜರಾತ್‌ನ ಕೆವಾಡಿಯಾದಲ್ಲಿ ಸೆಪ್ಟೆಂಬರ್ 22ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಘೋಷಣೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅನಂತ್ ನಾಗ್ ಅವರ ಸಹಜ ಅಭಿನಯ, ವೈವಿಧ್ಯಮಯ ಪಾತ್ರ ನಿರ್ವಹಣೆ ಹಾಗೂ ಕಲಾತ್ಮಕ ಪ್ರತಿಭೆ ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ, ವಿಶಿಷ್ಟ ಛಾಪು ಮೂಡಿಸಿದ...
‘ಟಾಸ್’: ಕರಾವಳಿಯ ಹಾಸ್ಯ ಪಯಣ! ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್‌ಗಳ ‘ಫ್ಯಾಮಿಲಿ ಪ್ಯಾಕೇಜ್’

‘ಟಾಸ್’: ಕರಾವಳಿಯ ಹಾಸ್ಯ ಪಯಣ! ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್‌ಗಳ ‘ಫ್ಯಾಮಿಲಿ ಪ್ಯಾಕೇಜ್’

ಪ್ರಮುಖ ಸುದ್ದಿ, ಸಿನಿಮಾ
ಮಂಗಳೂರು: ಅವಿಕಾ ಪ್ರೊಡಕ್ಷನ್ ಹಾಗೂ ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಟಾಸ್’ ತುಳು ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಅರ್ಜುನ್ ದೇವ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಚಿತ್ರದ ಕುರಿತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.‘ಟಾಸ್’ ಚಿತ್ರವನ್ನು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದ್ದು, ಎರಡೂ ಭಾಷೆಗಳಲ್ಲೂ ಬಿಡುಗ...
ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ನಾಡಿನ ಖ್ಯಾತ ಹಿರಿಯ ರಂಗಕರ್ಮಿ, ನಿರ್ದೇಶಕ, ರಂಗಶಿಕ್ಷಕ ಹಾಗೂ ಚಿಂತಕ ಚಿದಂಬರರಾವ್ ಜಂಬೆ ಅವರು ಶನಿವಾರ ಮಧ್ಯಾಹ್ನ ಸಾಗರದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕನ್ನಡ ರಂಗಭೂಮಿಯ ಬೆಳವಣಿಗೆಗೆ ಹಲವು ದಶಕಗಳ ಕಾಲ ಮಹತ್ವದ ಕೊಡುಗೆ ನೀಡಿದ್ದ ಜಂಬೆ ಅವರು ನಿರ್ದೇಶನದ ಜತೆಗೆ ರಂಗಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಆಧುನಿಕ ಭಾರತೀಯ ರಂಗಭೂಮಿ ಹಾಗೂ ರಂಗಶಿಕ್ಷಣದ ಪರಂಪರೆಯನ್ನು ಕರ್ನಾಟಕದಲ್ಲಿ ಬೆಳೆಸಿದ ಪ್ರಮುಖ ರಂಗತಜ್ಞರಲ್ಲಿ ಒಬ್ಬರಾಗಿದ್ದರು. 1949ರ ಜನವರಿ 3ರಂದು ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದಲ್ಲಿ ಜನಿಸಿದ ಚಿದಂಬರರಾವ್ ಜಂಬೆ ಅವರು ಕೆಳದಿ ಹಾಗೂ ಸಾಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಉಡುಪಿಯಲ್ಲಿ ಯಕ್ಷಗಾನ ತರಬೇತಿ ಪಡೆದ ಬಳಿಕ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ರಂಗಭೂಮಿ ಶಿಕ್ಷಣ ಪಡೆದು ಪದವಿ ಪಡೆದಿದ್ದರು.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, ವಿಭಿನ್ನ ಸಾಹಿತ್ಯಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಕೃತಿಗಳನ್ನು ರಂಗಕ್ಕೆ ಅಳವಡಿಸುವ ಮೂಲಕ ಕನ್ನಡ ರಂಗಭೂಮಿಯ ಪ್ರಯೋ...
ಯುವ ಮನಸ್ಸುಗಳ ಪ್ರೀತಿ, ಸ್ನೇಹ ಮತ್ತು ಬದುಕಿನ ಏರಿಳಿತಗಳ ಕಥೆ ‘ಡೋಂಟ್ ಬಿ ಶೈ’

ಯುವ ಮನಸ್ಸುಗಳ ಪ್ರೀತಿ, ಸ್ನೇಹ ಮತ್ತು ಬದುಕಿನ ಏರಿಳಿತಗಳ ಕಥೆ ‘ಡೋಂಟ್ ಬಿ ಶೈ’

ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಆರೋಷಿ ಬಜಾಜ್, ಪಿಯೂಷ್ ಖಾಟಿ, ಬಿಯಾಂಕಾ ಅರೋರಾ ಹಾಗೂ ಅಂಶ್ ದುಗ್ಗಲ್ ಅಭಿನಯದ ಯುವಜನರನ್ನು ಕೇಂದ್ರವಾಗಿಟ್ಟುಕೊಂಡ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ‘ಡೋಂಟ್ ಬಿ ಶೈ’ ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ಸ್ನೇಹ, ಮೊದಲ ಪ್ರೀತಿ, ಪ್ರೇಮಭಂಗ, ತಪ್ಪು ನಿರ್ಧಾರಗಳು ಹಾಗೂ ಜೀವನವನ್ನು ಅರ್ಥಮಾಡಿಕೊಳ್ಳುವ ಯುವಕರ ಪ್ರಯಾಣವನ್ನು ಸಿನಿಮಾ ಕಟ್ಟಿಕೊಡಲಿದೆ. ಟ್ರೈಲರ್‌ನಲ್ಲಿ ಸ್ವತಂತ್ರ ಮನೋಭಾವದ ಶ್ಯಾಮಿಲಿ ‘ಶೈ’ ದಾಸ್ ಪಾತ್ರದಲ್ಲಿ ಆರೋಷಿ ಬಜಾಜ್ ಕಾಣಿಸಿಕೊಂಡಿದ್ದಾರೆ. ತನ್ನ ಲಾಭಕ್ಕಾಗಿ ಇತರರನ್ನು ಬಳಸಿಕೊಳ್ಳುವ ಶೈ ಕೊನೆಗೆ ಸಿಕ್ಕಿಬೀಳುತ್ತಾಳೆ. ಬಳಿಕ ಆಕೆಯ ಜೀವನ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. https://youtu.be/Qrqn7xPEu3o?si=RB9WOrFtwIgUIAh0 ಸಾಂಪ್ರದಾಯಿಕ ಪ್ರೇಮ ತ್ರಿಕೋನದ ಕಥೆಗಿಂತ ವಿಭಿನ್ನವಾಗಿ ಹಲವು ಸಂಬಂಧಗಳು ಮತ್ತು ಅವುಗಳಿಂದ ಉಂಟಾಗುವ ಭಾವನಾತ್ಮಕ ಏರಿಳಿತಗಳನ್ನು ಚಿತ್ರ ಒಳಗೊಂಡಿದೆ. ಶ್ರೀತಿ ಮುಖರ್ಜಿ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಕುನಾಲ್ ರಾಯ್ ಕಪೂರ್, ಅನುರಾಗ್ ಬಸು, ನೇಹಾ ಧೂಪಿಯಾ ಹಾಗೂ ಅಂಜು ಆಲ್ವಾ ನಾಯಕ್ ಕೂಡ ಪ್ರಮುಖ...
ನಾಗ ಚೈತನ್ಯ ‘ವೃಷಕರ್ಮ’ ಡಿಸೆಂಬರ್ 4ಕ್ಕೆ ತೆರೆಗೆ

ನಾಗ ಚೈತನ್ಯ ‘ವೃಷಕರ್ಮ’ ಡಿಸೆಂಬರ್ 4ಕ್ಕೆ ತೆರೆಗೆ

ಪ್ರಮುಖ ಸುದ್ದಿ, ಸಿನಿಮಾ
ನಟ ನಾಗ ಚೈತನ್ಯ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ ಡಿಸೆಂಬರ್ 4, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ತಿಕ್ ದಂಡು ನಿರ್ದೇಶನದ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ನಾಗ ಚೈತನ್ಯ ಅವರು ‘ಎಕ್ಸ್‌’ನಲ್ಲಿ ಬಿಡುಗಡೆಯ ದಿನಾಂಕ ಹಂಚಿಕೊಂಡಿದ್ದು, “ಒಂದು ಪೌರಾಣಿಕ ದೃಶ್ಯವೈಭವ ಅನಾವರಣಗೊಳ್ಳಲಿದೆ” ಎಂದು ಹೇಳಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹಿರಿಯ ನಟ ಜಯರಾಮ್ ಅವರು ಚಿತ್ರದಲ್ಲಿ ಪ್ರೊಫೆಸರ್ ರಂಗನಾಥ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಈಗಾಗಲೇ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ಪಾತ್ರವನ್ನು ಕಥೆಯ ಪ್ರಮುಖ ಮಾರ್ಗದರ್ಶಕ ಶಕ್ತಿಯಾಗಿ ಪರಿಚಯಿಸಿದೆ.ಕಳೆದ ವರ್ಷ ನಾಗ ಚೈತನ್ಯ ಅವರ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಹಾಗೂ ಅವರ ಫಸ್ಟ್‌ಲುಕ್‌ ಬಿಡುಗಡೆಯಾಗಿತ್ತು. ರಗಡ್‌ ಹಾಗೂ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದ ಅವರ ಲುಕ್‌ ಗಮನ ಸೆಳೆದಿತ್ತು.The mythical stage is set for the world to witness..#Vrushakarma GRAND RELEASE WORLDW...
ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಬಾಲಿವುಡ್‌ ಚಿತ್ರರಂಗದಲ್ಲಿ ಹೊಸತನದ ಕೊರತೆ ಎದುರಾಗಿದೆ. ಒಂದು ಸಿನಿಮಾ ಯಶಸ್ವಿಯಾದರೆ ಸಾಕು, ಅದೇ ಮಾದರಿಯ ಕಥೆ, ನಿರೂಪಣೆ ಹಾಗೂ ಫಾರ್ಮುಲಾವನ್ನು ಅನುಸರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನಟಿ ಕರೀನಾ ಕಪೂರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಅನಿಮಲ್‌’ ಸಿನಿಮಾ ಯಶಸ್ವಿಯಾದ ಬಳಿಕ ಹಿಂಸಾತ್ಮಕ ಕಥೆಗಳತ್ತ ಚಿತ್ರರಂಗ ಹೆಚ್ಚಿನ ಒಲವು ತೋರಿಸುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಕೇವಲ ಹಿಟ್‌ ಸಿನಿಮಾಗಳ ಸೂತ್ರವನ್ನು ಕಾಪಿ ಮಾಡುವುದರಿಂದ ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯವಿಲ್ಲ. ಬದಲಾಗಿ ಹೊಸ ಕಥೆ ಮತ್ತು ವಿಭಿನ್ನ ನಿರೂಪಣೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ.ಬರಹಗಾರರಿಗೆ ಸಿಗಲಿ ಪ್ರಾಮುಖ್ಯ ಚಿತ್ರವೊಂದರ ಯಶಸ್ಸಿನಲ್ಲಿ ಕಥೆಗಾರರು ಹಾಗೂ ಬರಹಗಾರರ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಹಿಂದಿ ಚಿತ್ರರಂಗದಲ್ಲಿ ಅವರಿಗೆ ನಿರೀಕ್ಷಿತ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬರಹಗಾರರಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ವಿಭಿನ್ನ ಕಥೆಗಳು ಮೂಡಿಬರಲು ಸಾಧ್ಯ ಎಂಬ ಅಭಿ...
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ಆಕ್ಷನ್‌ ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಹೆಸರಾಗಿರುವ ನಿರ್ದೇಶಕ ಪ್ರಶಾಂತ್ ನೀಲ್‌ ಇದೀಗ ಹಾರರ್‌ ಸಿನಿಮಾವೊಂದರ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಪ್ರಸ್ತುತಪಡಿಸಿರುವ ‘418’ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಆರಂಭದಲ್ಲಿ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿತ್ತು. ಇದೀಗ ಕೆಲವೊಂದು ಬದಲಾವಣೆಗಳ ಬಳಿಕ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ದೊರೆತಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ‘418’ ಚಿತ್ರವನ್ನು ಕೀರ್ತನ್ ನಾಡಗೌಡ ನಿರ್ದೇಶಿಸಿದ್ದಾರೆ. ಇದು ಸಂಪೂರ್ಣ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನೇ ಒಳಗೊಂಡಿರುವ ಸಿನಿಮಾ ಎನ್ನಲಾಗಿದೆ.ಹೆದರಿಸುವ ದೃಶ್ಯಗಳೇ ಕಾರಣ! ಸಿನಿಮಾದಲ್ಲಿರುವ ಕೆಲವು ದೃಶ್ಯಗಳು ತೀರಾ ಭಯಾನಕವಾಗಿದ್ದು, ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಅಸಮಾಧಾನ ಉಂಟುಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿತ್ತು. ಇತ್ತೀಚಿನ ಹಾರರ್‌ ಸಿನಿಮಾಗಳಲ್ಲಿ ಕಾಮಿಡಿ, ರೊಮ್ಯಾನ್ಸ್ ಸೇರಿದಂತೆ ಹಲವು ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ‘418’ನಲ್ಲಿ ಆರಂಭದಿಂದ ಕೊನೆಯವರೆಗೂ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳೇ ಪ...
ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!

ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!

ಪ್ರಮುಖ ಸುದ್ದಿ, ಸಿನಿಮಾ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಜಂಬೂಸವಾರಿ ಮತ್ತಷ್ಟು ಅದ್ಧೂರಿಯಾಗುವ ಸಾಧ್ಯತೆ ಇದೆ. ಸ್ಯಾಂಡಲ್‌ವುಡ್‌ನ ಸುಮಾರು 30 ಪ್ರಮುಖ ನಟ-ನಟಿಯರು ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದು, ದಸರಾ ಸಂಭ್ರಮಕ್ಕೆ ಸಿನಿತಾರೆಯರ ಮೆರುಗು ಸಿಗಲಿದೆ. ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ನಟ-ನಟಿಯರು ತೆರೆದ ವಾಹನದಲ್ಲಿ ಸಾಗಲಿದ್ದಾರೆ. ಈ ಮೂಲಕ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ ಜನರನ್ನು ರಂಜಿಸಲಿದ್ದಾರೆ. ಸಿನಿ ದಿಗ್ಗಜರಿಗೆ ಆಹ್ವಾನ ಸ್ಯಾಂಡಲ್‌ವುಡ್‌ನ ಪ್ರಮುಖ ನಟರಾದ ರಾಕಿಂಗ್‌ ಸ್ಟಾರ್‌ ಯಶ್, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಕಿಚ್ಚ ಸುದೀಪ್‌ ಹಾಗೂ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ ದಸರಾ ಸಮಿತಿ ವಿಶೇಷ ಆಹ್ವಾನ ನೀಡಲು ಮುಂದಾಗಿದೆ.ಆದರೆ ಆಹ್ವಾನಿತರ ಪೈಕಿ ಯಾರೆಲ್ಲ ಜಂಬೂಸವಾರಿಗೆ ಆಗಮಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.ಇನ್ನು ಹಿರಿಯ ನಟಿ ಉಮಾಶ್ರೀ ಸೇರಿದಂತೆ ರಚಿತಾ ರಾಮ್‌, ರುಕ್ಮಿಣಿ ವಸಂತ್‌ ಹಾಗೂ ಸಪ್ತಮಿ ಗ...
ಬ್ರಿಟಿಷರ ದೌರ್ಜನ್ಯ ವಿರುದ್ಧದ ಹೋರಾಟದ ಕಥೆ; ವಿಜಯ್-ರಶ್ಮಿಕಾ ಜೋಡಿಯ ‘ರಣಬಾಲಿ’ ಟೀಸರ್ ಬಿಡುಗಡೆ;

ಬ್ರಿಟಿಷರ ದೌರ್ಜನ್ಯ ವಿರುದ್ಧದ ಹೋರಾಟದ ಕಥೆ; ವಿಜಯ್-ರಶ್ಮಿಕಾ ಜೋಡಿಯ ‘ರಣಬಾಲಿ’ ಟೀಸರ್ ಬಿಡುಗಡೆ;

ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಐತಿಹಾಸಿಕ ಆ್ಯಕ್ಷನ್‌–ಡ್ರಾಮಾ ‘ರಣಬಾಲಿ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ರಾಹುಲ್‌ ಸಾಂಕೃತ್ಯನ್‌ ನಿರ್ದೇಶನದ ಈ ಸಿನಿಮಾ ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್‌ 16ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗುತ್ತಿದೆ. ‘ದಿ ಸ್ಯಾವೇಜಸ್ ಓತ್’ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಟೀಸರ್‌ ಸಿನಿಮಾದ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸಿದೆ. 1876–1878ರ ಅವಧಿಯಲ್ಲಿ ಸಂಭವಿಸಿದ ‘ಮದ್ರಾಸ್‌ ಕ್ಷಾಮ’ದ ಹಿನ್ನೆಲೆಯನ್ನು ಚಿತ್ರ ಹೊಂದಿದೆ. ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ನಡೆದ ದೌರ್ಜನ್ಯ ಮತ್ತು ಅದರ ವಿರುದ್ಧ ಸ್ಥಳೀಯರು ನಡೆಸಿದ ಹೋರಾಟವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.ಟೀಸರ್‌ನಲ್ಲಿ ಬ್ರಿಟಿಷ್‌ ಅಧಿಕಾರಿಗಳ ಕ್ರೌರ್ಯ ಹಾಗೂ ಅವರ ವಿರುದ್ಧ ಬಂಡೆದ್ದ ಜನರ ಹೋರಾಟದ ದೃಶ್ಯಗಳು ಗಮನ ಸೆಳೆಯುತ್ತವೆ. ಭಾರತದಲ್ಲಿ ಬ್ರಿಟಿಷರ ಆಡಳಿತದ ಅವಧಿಯಲ್ಲಿ ನಡೆದ ಅಮಾನವೀಯ ಘಟನೆಗಳ ಹಿನ್ನೆಲೆಯನ್ನು ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ. ಹಾಲಿವುಡ್‌ನ ‘ದಿ ಮಮ್ಮಿ’ ಸೇರಿದಂತೆ ...