ಭಾರತ–ಈಜಿಪ್ಟ್ ಕಡಲ ಸಹಕಾರಕ್ಕೆ ಮತ್ತಷ್ಟು ಬಲ: ಅಲೆಕ್ಸಾಂಡ್ರಿಯಾದಲ್ಲಿ INS ತ್ರಿಶೂಲ್ ನೌಕಾ ತಾಲೀಮು
ಅಲೆಕ್ಸಾಂಡ್ರಿಯಾ: ಭಾರತೀಯ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ ಐಎನ್ಎಸ್ ತ್ರಿಶೂಲ್ ಸೆ.14ರಿಂದ 17ರವರೆಗೆ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಬಂದರಿಗೆ ಭೇಟಿ ನೀಡಿದ್ದು, ಭಾರತ–ಈಜಿಪ್ಟ್ ನಡುವಿನ ಕಡಲ ಸಹಕಾರಕ್ಕೆ ಮತ್ತಷ್ಟು ಬಲ ನೀಡಿದೆ.
ಅಲೆಕ್ಸಾಂಡ್ರಿಯಾ ಬಂದರಿಗೆ ಆಗಮಿಸಿದ ಐಎನ್ಎಸ್ ತ್ರಿಶೂಲ್‌ಗೆ ಈಜಿಪ್ಟ್ ನೌಕಾಪಡೆಯ ಅಲ್ ಖದೀರ್ ಹಡಗು ಆತ್ಮೀಯ ಸ್ವಾಗತ ನೀಡಿತು. ಭೇಟಿ ವೇಳೆ ಯುದ್ಧನೌಕೆಯ ಕಮಾಂಡಿಂಗ್ ಅಧಿಕಾರಿ ಹಾಗೂ ಸಿಬ್ಬಂದಿ ಚಾಟ್ಬಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಎರಡು ವಿಶ್ವಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡ ಯೋಧರ ಸ್ಮರಣಾರ್ಥ ಇರುವ ಈ ಸ್ಮಾರಕದಲ್ಲಿ 12 ಸಮಾಧಿಗಳಿದ್ದು, ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ಹಡಗುಗಳಲ್ಲಿ ಮೃತಪಟ್ಟ 19 ಭಾರತೀಯ ಯೋಧರ ಹೆಸರುಗಳೂ ದಾಖಲಾಗಿವೆ.
ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಸುರೇಶ್ ಕೆ. ರೆಡ್ಡಿ ಅವರು ಐಎನ್ಎಸ್ ತ್ರಿಶೂಲ್‌ಗೆ ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಉಪಸ್ಥಿತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು ಎಂದು ರಕ್ಷಣಾ ಸಚಿ...









