Saturday, August 8

ವಿಶೇಷ

ಸೋಮಾವತಿ ಅಮಾವಾಸ್ಯೆ; ಹರಿವಾದಲ್ಲಿ ಯಾಕಿಷ್ಟು ಜನಸಾಗರ?

ಸೋಮಾವತಿ ಅಮಾವಾಸ್ಯೆ; ಹರಿವಾದಲ್ಲಿ ಯಾಕಿಷ್ಟು ಜನಸಾಗರ?

ಪ್ರಮುಖ ಸುದ್ದಿ, ವಿಶೇಷ
ಹರಿದ್ವಾರ: ಸೋಮವತಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಹಾಗೂ ಪ್ರಾರ್ಥನೆಗಾಗಿ ಸೋಮವಾರ ಲಕ್ಷಾಂತರ ಭಕ್ತರು ಹರ್ ಕಿ ಪೌರಿ ಸೇರಿದಂತೆ ಪ್ರಮುಖ ಘಾಟ್‌ಗಳಿಗೆ ಆಗಮಿಸಿದರು. ಸೋಮವತಿ ಅಮಾವಾಸ್ಯೆಯಂದು ಗಂಗಾ ಸ್ನಾನ, ದಾನ ಹಾಗೂ ಪೂರ್ವಜರಿಗೆ ತರ್ಪಣ ಸಲ್ಲಿಸುವುದು ವಿಶೇಷ ಮಹತ್ವ ಹೊಂದಿದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಯಾತ್ರಿಕರು ಹರಿದ್ವಾರಕ್ಕೆ ಆಗಮಿಸಿದರು. ಭಕ್ತರ ಭಾರಿ ಸಂಖ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಪ್ರಮುಖ ಘಾಟ್‌ಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಇತರ ಭದ್ರತಾ ತಂಡಗಳನ್ನು ನಿಯೋಜಿಸಲಾಗಿತ್ತು.ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭಕ್ತರ ಸಂಚಾರ, ಸುರಕ್ಷತೆ ಮತ್ತು ಸ್ನಾನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವು ಹಂತಗಳಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಧಾರ್ಮಿಕ...
ಎತ್ತುಗಳ ಜೊತೆ ಶಾರದಮ್ಮ ಕೃಷಿ, ಎಲ್ಲೆಡೆಯಿಂದ ಶಹಬ್ಬಾಸ್ ಗಿರಿ, ಆದರೆ ಅಂಗಲಾಚಿದರೂ ಸಿಗದ ಬೋರ್‌ವೆಲ್ ಸೌಲಭ್ಯ

ಎತ್ತುಗಳ ಜೊತೆ ಶಾರದಮ್ಮ ಕೃಷಿ, ಎಲ್ಲೆಡೆಯಿಂದ ಶಹಬ್ಬಾಸ್ ಗಿರಿ, ಆದರೆ ಅಂಗಲಾಚಿದರೂ ಸಿಗದ ಬೋರ್‌ವೆಲ್ ಸೌಲಭ್ಯ

ಪ್ರಮುಖ ಸುದ್ದಿ, ವಿಶೇಷ
ಶಿವಮೊಗ್ಗ: ಆಧುನಿಕ ಕೃಷಿ ಯಂತ್ರೋಪಕರಣಗಳ ಯುಗದಲ್ಲೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಿಕೊಂಡು, ಎತ್ತುಗಳ ಸಹಾಯದಿಂದ ನೇಗಿಲು ಹೊಡೆಯುತ್ತಾ ಕೃಷಿ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರೈತ ಮಹಿಳೆ ಶಾರದಮ್ಮ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸ್ವಗ್ರಾಮ ಕಾಗೋಡು ಮೂಲದ ಶಾರದಮ್ಮ, ಪ್ರತಿದಿನ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡೇ ತಮ್ಮ ಜಮೀನಿಗೆ ತೆರಳಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ಆದರೆ, ನೀರಾವರಿ ಸೌಲಭ್ಯ ಇಲ್ಲದಿರುವುದು ಅವರ ದೊಡ್ಡ ಸಮಸ್ಯೆಯಾಗಿದೆ. ಶಾರದಮ್ಮ ಅವರಿಗೆ ಎರಡು ಎಕರೆ ಜಮೀನು ಇದ್ದರೂ, ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಕೇವಲ ಐದು ಚೀಲ ಭತ್ತದ ಇಳುವರಿ ಬಂದಿದ್ದು, ನೀರಿನ ಕೊರತೆಯಿಂದ ಬೆಳೆ ಕೈಕೊಡುತ್ತಿದೆ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನಾಟಿ ಮಾಡೋಣ ಎಂದರೆ ನೀರಿಲ್ಲ. ನಾಟಿ ಮಾಡಿದ ಮೇಲೂ ನೀರಿಲ್ಲದೆ ಬೆಳೆ ಒಣಗುತ್ತದೆ. ಹಂದಿಗಳು ಬಂದು ಬೆಳೆ ಹಾಳು ಮಾಡುತ್ತವೆ. ನಮಗೆ ಒಂದು ಬೋರ್‌ವೆಲ್ ಸಿಕ್ಕರೆ ಸಾಕು” ಎಂದು ಶಾರದಮ್ಮ ಮ...
ರಾಷ್ಟ್ರವ್ಯಾಪಿ ಆಂದೋಲನವಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ವಿಕಸನ: ಸರ್ಕಾರ

ರಾಷ್ಟ್ರವ್ಯಾಪಿ ಆಂದೋಲನವಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ವಿಕಸನ: ಸರ್ಕಾರ

ಪ್ರಮುಖ ಸುದ್ದಿ, ವಿಶೇಷ
ನವದೆಹಲಿ: ಹೆಣ್ಣು ಮಗುವಿನ ರಕ್ಷಣೆ, ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಆರಂಭಿಸಲಾದ ‘ಬೇಟಿ ಬಚಾವೋ ಬೇಟಿ ಪಡಾವೋ’ (BBBP) ಯೋಜನೆ ಇದೀಗ ರಾಷ್ಟ್ರವ್ಯಾಪಿ ಸಾಮಾಜಿಕ ಆಂದೋಲನವಾಗಿ ರೂಪುಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. 2015ರ ಜನವರಿ 22ರಂದು ಆರಂಭವಾದ ಈ ಯೋಜನೆಯು ಕುಸಿಯುತ್ತಿದ್ದ ಮಕ್ಕಳ ಲಿಂಗ ಅನುಪಾತವನ್ನು ಸುಧಾರಿಸುವುದು ಮತ್ತು ಹೆಣ್ಣು ಮಕ್ಕಳ ವಿರುದ್ಧದ ಲಿಂಗ ಆಧಾರಿತ ತಾರತಮ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಶಿಕ್ಷಣ ಸಚಿವಾಲಯಗಳು ಜಂಟಿಯಾಗಿ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಸರ್ಕಾರಿ ಸಂಸ್ಥೆಗಳು, ಸಮುದಾಯಗಳು, ಮಾಧ್ಯಮ ಮತ್ತು ನಾಗರಿಕ ಸಮಾಜದ ಸಹಭಾಗಿತ್ವದ ಮೂಲಕ ಹೆಣ್ಣು ಮಕ್ಕಳ ಸುರಕ್ಷಿತ ಜನನ, ಶಿಕ್ಷಣ ಮತ್ತು ಸಮಗ್ರ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (HMIS) ಅಂಕಿಅಂಶಗಳ ಪ್ರಕಾರ, ಜನನದ ಸಮಯದಲ್ಲಿನ ರಾಷ್ಟ್ರೀಯ ಲಿಂಗ ಅನುಪಾತವು 2014-15ರಲ್ಲಿ 918 ಇದ್ದದ್ದು 2024-25ರಲ್ಲಿ 92...
‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಅಮರಾವತಿ: ಸೋಮನಾಥ ದೇವಾಲಯವು ಭಾರತದ ನಾಗರಿಕತೆಯ ಚೈತನ್ಯದ ಶಾಶ್ವತ ಸಂಕೇತವಾಗಿದ್ದು, ಅದನ್ನು ಶತಮಾನಗಳಿಂದ ರಕ್ಷಿಸಿ ಪುನರ್ನಿರ್ಮಿಸಿದವರ ಭಕ್ತಿ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.ಸೋಮನಾಥ ದೇವಾಲಯದ ಪುನಃಸ್ಥಾಪನೆಯ 75 ವರ್ಷಗಳ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ಮಹಾಪೂಜೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, “ನಮ್ಮದು ನಂಬಿಕೆಯನ್ನು ಗೌರವಿಸುವ ಭೂಮಿ. ಸೋಮನಾಥ ದೇವಾಲಯ ಕೇವಲ ಪೂಜಾ ಸ್ಥಳವಲ್ಲ, ಅದು ಭಾರತದ ನಾಗರಿಕತೆಯ ಶಕ್ತಿಯ ಸಂಕೇತ” ಎಂದು ಬರೆದಿದ್ದಾರೆ.ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ “ವಿಕಾಸ್ ಭಿ, ವಿರಾಸತ್ ಭಿ” ಎಂಬ ಧೋರಣೆಯನ್ನು ಅನುಸರಿಸುತ್ತಿದ್ದು, ಅಭಿವೃದ್ಧಿಯ ಜೊತೆಗೆ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂರಕ್ಷಣೆಯನ್ನೂ ಮುಂದುವರಿಸುತ್ತಿದೆ ಎಂದು ನಾಯ್ಡು ಹೇಳಿದ್ದಾರೆ.Ours is a land where faith is respected and serves as a force that unites everyone. Somnath Temple is more than a plac...
ಅಯೋಧ್ಯೆ ದೇವಾಲಯದಲ್ಲಿ ವಿಶೇಷ ‘ಧರ್ಮಧ್ವಜ’; ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿರುವ ಸಂಕೇತ

ಅಯೋಧ್ಯೆ ದೇವಾಲಯದಲ್ಲಿ ವಿಶೇಷ ‘ಧರ್ಮಧ್ವಜ’; ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿರುವ ಸಂಕೇತ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ, ವೀಡಿಯೊ
ಅಯೋಧ್ಯೆ/ನವದೆಹಲಿ: ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಮಂಗಳವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಧರ್ಮಧ್ವಜ’ವನ್ನು ಹಾರಿಸಿದರು. ರಾಷ್ಟ್ರ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಪ್ರಧಾನಿ ಜೊತೆಗಿದ್ದರು.“आज हम सबके लिए सार्थकता का दिन है। इसके लिए जितने लोगों ने प्राण न्योछावर किए, उनकी आत्मा तृप्त हुई होगी। आज मंदिर का ध्वजारोहण हो गया। मंदिर की शास्त्रीय प्रक्रिया पूर्ण हो गई। राम राज्य का ध्वज, जो कभी अयोध्या में फहराता था, जो पूरी दुनिया में अपने आलोक से समृद्धि प्रदान करता… pic.twitter.com/WqLQMJjM43 — RSS (@RSSorg) November 25, 2025ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನಡೆದ ಈ ಕಾರ್ಯಕ್ರಮವನ್ನು ‘ಧ್ವಜಾರೋಹಣ ಉತ್ಸವ’ ಎಂದು ಗುರುತಿಸಲಾಗಿದೆ. ಸಮಾರಂಭದ ನಂತರ ಬಿಜೆಪಿ ನಾಯಕರು, ರಾಷ್ಟ್ರಕ್ಕೆ ಹೊಸ ನಂಬಿಕೆ ಮತ್ತು ಸಂಸ್ಕೃತಿಯ ಗೌರವವನ್ನು ಸಾರುವ ಕ್ಷಣ ಎಂದು ಅಭಿಪ್ರಾಯ ವ್ಯಕ್ತಪಡ...
ತೆಲುಗು ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತ

ತೆಲುಗು ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತ

ದೇಶ, ಪ್ರಮುಖ ಸುದ್ದಿ, ವಿಶೇಷ, ಸಿನಿಮಾ
ಹೈದರಾಬಾದ್: ಟಾಲಿವುಡ್​ ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತವಾಗಿದೆ.ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೋಮವಾರ ನಟ ವಿಜಯ್ ದೇವರಕೊಂಡ ಅವರ ಕಾರು, ಅಪಘಾತಕ್ಕೀಡಾಗಿದೆ.ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುತ್ತಿದ್ದಾಗ ಅವರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ ಎನ್ನಲಾಗಿದ್ದು, ನಟನಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ....
ಕರ್ನೂಲ್: ಸಾಂಪ್ರದಾಯಿಕ ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಕರ್ನೂಲ್: ಸಾಂಪ್ರದಾಯಿಕ ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ದೇಶ, ಪ್ರಮುಖ ಸುದ್ದಿ, ವಿಶೇಷ, ವೀಡಿಯೊ
ಕರ್ನೂಲ್: ವಿಜಯದಶಮಿ ಸಂದರ್ಭದಲ್ಲಿ ಸಾಂಪ್ರದಾಯಿಕ ಬನ್ನಿ ಉತ್ಸವ ವೇಳೆ ಕೋಲುಗಳಿಂದ ನಡೆಯುವ ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. కర్నూలు 'దేవరగట్టు సమరం' 🔥🔥🔥🔥🔥🥵తరతరాలుగా వస్తున్న ఆచారం శ్రీ మాల మల్లేశ్వర స్వామి వార్ల విగ్రహాలని దక్కించుకునేందుకు 11 ఊర్ల గ్రామ ప్రజలు రక్తం చిందించి భక్తితో చేసే సమరం 🙏. #Devara #Kurnool #Devaragattu pic.twitter.com/RylANzHIta— Narasimha NTR 🦚 (@NarasimhaNTR_) October 3, 2025ಪ್ರತಿ ವರ್ಷದಂತೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗೊಂಡ 'ಮಂಡಲ' (ಬ್ಲಾಕ್) ನ ದೇವೆರಾಗಟ್ಟು ಗ್ರಾಮದಲ್ಲಿ ಗುರುವಾರ ತಡರಾತ್ರಿ ದಸರಾ ಆಚರಣೆಯ ಭಾಗವಾಗಿ ನಡೆದ ದೇವರಗಟ್ಟು ಬನ್ನಿ ಉತ್ಸವದ ಸಂದರ್ಭದಲ್ಲಿ ಎರಡು ಗುಂಪುಗಳು ಕೋಲುಗಳಿಂದ ಪರಸ್ಪರ ದಾಳಿ ನಡೆಸಿದವು. ಇದು ಸಾಂಪ್ರಾಯಾಯಿಕ ಆಚರಣೆಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ...
ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೀಡಿಯೊ
ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬದ ಉತ್ಸವದ ಪರಮೋತ್ಸವಾದ ಜಂಬೂ ಸವಾರಿ ಮೆರವಣಿಗೆ ಗಮನಸೆಳೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಯದುವೀರ್ ಒಡೆಯರ್, ವಿಧಾನದ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.ಸಂಜೆ 4.42ರಿಂದ 5.06ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಕಂಗೊಳಿಸುತ್ತಿದ್ದ ನಾಡದೇವಿ ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಯ ಆರಂಭ ಮಾಡಿದರು. ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಲಕ್ಷಾಂತರ ಜನರ ಮುಂದೆ ಗಾಂಭೀರ್ಯದ ಹೆಜ್ಜೆ ಹಾಕುತ್ತ ಸಾಗಿದ ದೃಶ್ಯ ಎಲ್ಲರ ಮನ ಸೆಳೆಯಿತು. ಕುಮ್ಕಿ ಆನೆಗಳು ಕಾವೇರಿ, ರೂಪಾ ಕೂಡಾ ಸಾಥ್ ನೀಡಿದವು. ಅಂಬಾರಿಯ ಮೇಲಿದ್ದ ನಾಡದೇವಿಯನ್ನು ಕಂಡು ಭಕ್ತಜನರು ಪುನೀತರಾದರು.ಅರಮಣಕ್ಕಿಯ ಬಲರಾಮ ದ್ವಾರದಿಂದ ಪ್ರಾರಂಭಗೊಂಡ ಜಂಬೂ ಸವಾರಿ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಬಂಬೂ ಬಜಾರ್ ಮಾರ್ಗವಾಗಿ ಬನ್ನಿಮಂಟಪ ತಲುಪುವವರೆ...
ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಮೈಸೂರು ವೈಭವದಂತೆಯೇ ನಾಡಿನ ಗಮನಸೆಳೆದಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಅಡ್ಡೂರು ದಸರಾ ನೆರವೇರುತ್ತಿದೆ. ಈ ಮಹಾವೈಭವಕ್ಕೆ ತಾಸೆ ಮತ್ತು ಡೋಲು ಬಡಿಯುವ ಮೂಲಕ ತುಳುನಾಡಿನ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಅಧ್ಯಕ್ಷ ಡಾ.ಎ.ವೆಂಕಟರಮಣ ಅಕ್ಕರಾಜು, ದಸರಾವು ಹಬ್ಬ ಮಾತ್ರವಲ್ಲ, ನಂಬಿಕೆ, ಸಂಸ್ಕೃತಿ ಹಾಗು ಒಗಟ್ಟಿನ ಪ್ರತೀಕ. ಕುದ್ರೋಳಿಯಲ್ಲಿ ನಡೆಯುತ್ತಿರು ಈ ಉತ್ಸವ ಮಂಗಳೂರನ್ನು ಮತ್ತಷ್ಟು ವಿಭಿನ್ನವಾಗಿಸಿದೆ ಎಂದರು. ಮಂಗಳೂರು ದಸರಾ ಮೈಸೂರ ದಸರಾದಷ್ಟೇ ಪ್ರಸಿದ್ಧಿ‌ ಪಡೆದಿದೆ. ಭಾರತೀಯ ಧರ್ಮ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಹಾಗೂ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಪ್ರಾದೇಶಿಕ...
ತಿರುಪತಿ: ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಸಕಲ ತಯಾರಿ; ಈ ಬಾರಿ ಅಭೂತಪೂರ್ವ ಉತ್ಸವ

ತಿರುಪತಿ: ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಸಕಲ ತಯಾರಿ; ಈ ಬಾರಿ ಅಭೂತಪೂರ್ವ ಉತ್ಸವ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2 ರವರೆಗೆ ವೈಭವದಿಂದ ನಡೆಯಲಿದೆ. ಈ ಸಂಬಂಧ ಸಕಲ ತಯಾರಿ ನಡೆದಿದೆ.ಪ್ರಮುಖ ಧಾರ್ಮಿಕ ವಿಧಿಗಳು: ಬ್ರಹ್ಮೋತ್ಸವವು ಸೆಪ್ಟೆಂಬರ್ 23 ರಂದು ಅಂಕುರಾರ್ಪಣಂ (ಬೀಜ ಬಿತ್ತುವುದು) ಎಂಬ ಪವಿತ್ರ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸದಸ್ಯ ಎಸ್‌.ನರೇಶ್‌ ಕುಮಾರ್‌ ತಿಳಿಸಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಟಿಟಿಡಿ ದೇವಸ್ಥಾನದ ಸುಪರಿಂಟೆಂಡೆಂಟ್ ಜಯಂತಿ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವ ಕುರಿತು ವಿವರ ಒದಗಿಸಿದರು. ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2, 2025 ನಡೆಯಲಿದೆ. ಬ್ರಹ್ಮೋತ್ಸವವು ಸೆಪ್ಟೆಂಬರ್ 23 ರಂದು ಅಂಕುರಾರ್ಪಣಂ (ಬೀಜ ಬಿತ್ತುವುದು) ಎಂಬ ಪವಿತ್ರ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. ಇದು ಹಬ್ಬವು ಯಾವುದ...