
ಹೊಸ ಹೆಲಿಕಾಪ್ಟರ್ ಹಸ್ತಾಂತರ; ಭಾರತ ವಾಯುಪಡೆಗೆ ಭೀಮ ಬಲ;
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತೀಯ ವಾಯುಪಡೆಗೆ (IAF) ಎರಡು LCA ತೇಜಸ್ FOC ಅವಳಿ ಆಸನದ ತರಬೇತುದಾರ ವಿಮಾನಗಳು ಹಾಗೂ ಮೂರು HTT-40 ಮೂಲ ತರಬೇತುದಾರ ವಿಮಾನಗಳನ್ನು ಹಸ್ತಾಂತರಿಸಿದೆ. ಇದೇ ವೇಳೆ ನಾಲ್ಕು ಧ್ರುವ್ ನೆಕ್ಸ್ಟ್ ಜನರೇಷನ್ (NG) ಹೆಲಿಕಾಪ್ಟರ್‌ಗಳನ್ನು ಪವನ್ ಹ್ಯಾನ್ಸ್ ಲಿಮಿಟೆಡ್‌ಗೆ ವಿತರಿಸಲಾಯಿತು.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ಸಮ್ಮುಖದಲ್ಲಿ ಈ ಹಸ್ತಾಂತರ ನಡೆಯಿತು.
ಭಾರತದ ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ ಹಾಗೂ ತಾಂತ್ರಿಕ ಸ್ವಾವಲಂಬನೆ ಬಲಪಡಿಸುವ ನಿಟ್ಟಿನಲ್ಲಿ ಈ ವಿತರಣೆ ಮಹತ್ವದ ಹೆಜ್ಜೆ ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು.
ವಿಮಾನ ವಿನ್ಯಾಸ, ಏವಿಯಾನಿಕ್ಸ್, ಪ್ರೊಪಲ್ಷನ್, ಕಾಂಪೋಸಿಟ್ಸ್, ಫ್ಲೈಟ್ ಕಂಟ್ರೋಲ್ ವ್ಯವಸ್ಥೆ, ಉತ್ಪಾದನೆ ಮತ್ತು ಪ್ರಮಾಣೀಕರಣ ಸೇರಿದಂತೆ ಏರೋಸ್ಪೇಸ್‌ನ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಸಾಮರ್ಥ್ಯ ವೃದ್ಧಿಸುವ ಅಗತ್ಯವಿದೆ ಎಂದರು.LCA ತೇಜಸ್ FOC ತರಬೇತುದಾರವು ಯುದ್ಧ ಕಾರ್ಯಾಚರಣೆಗಳಿಗೆ ...









