
ಅಕ್ಟೋಬರ್‌ನಲ್ಲಿ 34,920 ಗ್ರಾಮೀಣ ಯುವಕರಿಗೆ DDU-GKY 2.0 ಕೌಶಲ ತರಬೇತಿ
ನವದೆಹಲಿ: ಪರಿಷ್ಕೃತ ದೀನ್ ದಯಾಳ್ ಉಪಾಧ್ಯಾಯ–ಗ್ರಾಮೀಣ ಕೌಶಲ್ಯ ಯೋಜನೆ (DDU-GKY) 2.0 ಅಡಿಯಲ್ಲಿ ಅಕ್ಟೋಬರ್ 2026ರಿಂದ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 34,920 ಗ್ರಾಮೀಣ ಯುವಕರು ಕೌಶಲ ತರಬೇತಿ ಆರಂಭಿಸಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಅಕ್ಟೋಬರ್‌ನಲ್ಲಿ ಒಡಿಶಾ, ಮಿಜೋರಾಂ, ಸಿಕ್ಕಿಂ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ, ಪುದುಚೇರಿ, ಕರ್ನಾಟಕ, ತೆಲಂಗಾಣ ಹಾಗೂ ಬಿಹಾರದಲ್ಲಿ ಒಟ್ಟು 1,164 ತರಬೇತಿ ಬ್ಯಾಚ್‌ಗಳು ಆರಂಭವಾಗಲಿವೆ.
ಈ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಡಿಸೆಂಬರ್ 31, 2027ರೊಳಗೆ 3,57,112 ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಗುರಿ ನಿಗದಿಪಡಿಸಲಾಗಿದೆ.
ಕೇಂದ್ರ ಪ್ರಾಯೋಜಿತ DDU-GKY ಯೋಜನೆಯು ಗ್ರಾಮೀಣ ಪ್ರದೇಶದ ಬಡ ಯುವಕರಿಗೆ ಉದ್ಯೋಗಾವಕಾಶಕ್ಕೆ ಸಂಪರ್ಕ ಹೊಂದಿದ ಕೌಶಲ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕೋರ್ಸ್‌ಗೆ ಅನುಗುಣವಾಗಿ ತರಬೇತಿಯ ಅವಧಿ ಮೂರು ತಿಂಗಳಿಂದ 12 ತಿಂಗಳವರೆಗೆ ಇರಲಿದೆ.2026–28ರ ಅವಧಿಗೆ ದೇಶದ 31 ರಾಜ್ಯಗಳು ಮತ್ತು ಕೇ...









