
ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ
ಬೆಂಗಳೂರು: ಪೊಲೀಸ್ ಸಮವಸ್ತ್ರ ಎಂದರೆ ಕಠಿಣತೆ, ಶಿಸ್ತು ಮತ್ತು ಅಧಿಕಾರದ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಯ ನಡುವೆ, ಅದೇ ಸಮವಸ್ತ್ರದೊಳಗೆ ಆಳವಾದ ಮಾನವೀಯ ಹೃದಯವೊಂದನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಿದ ಅಪರೂಪದ ಅಧಿಕಾರಿಗಳಲ್ಲಿ ಡಾ. ಬಿ.ಆರ್. ರವಿಕಾಂತೇಗೌಡ ಅವರೂ ಒಬ್ಬರು.
ಮಂಡ್ಯದಲ್ಲಿ ಹುಟ್ಟಿ ಬೆಳೆದ ಅವರು 1997ರಲ್ಲಿ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ಕೆಎಎಸ್ ಅಧಿಕಾರಿಯಾಗುವ ಅವಕಾಶವಿದ್ದರೂ, ಸಮಾಜಕ್ಕೆ ನೇರವಾಗಿ ಸೇವೆ ಸಲ್ಲಿಸುವ ಆಶಯದಿಂದ ಡಿವೈಎಸ್ಪಿ ಹುದ್ದೆಯನ್ನು ಸ್ವೀಕರಿಸಿದರು. ವೃತ್ತಿಜೀವನದ ವಿವಿಧ ಹಂತಗಳಲ್ಲಿ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಮಾನವೀಯತೆಯನ್ನು ಒಟ್ಟಿಗೆ ಕೊಂಡೊಯ್ದ ಅವರು, ಸೇವೆಯಲ್ಲಿದ್ದ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದರು.
ದಶಕಗಳ ಹೆಂದೆ ರಾಜ್ಯದಲ್ಲಿ ಆಗಾಗ್ಗೆ ತಲ್ಲಣ ಸೃಷ್ಟಿಸುತ್ತಿದ್ದ ಹುಬ್ಬಳ್ಳಿ ಕಮರಿಪೇಟೆ ಅಕ್ರಮ ಸಾರಾಯಿ ದಂಧೆ ವಿರುದ್ಧದ ಕಾರ್ಯಾಚರಣೆ ಅವರ ವೃತ್ತಿಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗಲೂ ಪೊಲೀಸ್ ವ್ಯವಸ್ಥೆ ವಸಾಹತುಶಾಹಿ ಮನಸ್ಥಿತಿಯ ಹಿಡಿ...









