Wednesday, January 28

ಪರಪ್ಪನ ಅಗ್ರಹಾರದಲ್ಲಿ ಜಾಮರ್; ಜೈಲಿನೊಳಗಿದೆ ನೆಟ್ವರ್ಕ್, ಸುತ್ತಮುತ್ತಲ ನಾಗರಿಕರ ಪರದಾಟ

ಬೆಳಗಾವಿ: ಪರಪ್ಪನ ಅಗ್ರಹಾರ ಜೈಲು ಬಳಿ ಜಾಮರ್ ಅಳವಡಿಸಿರುವುದರಿಂದ ಸುತ್ತಮುತ್ತ ವಾಸವಿರುವ ಹತ್ತು ಸಾವಿರಕ್ಕೂಹೆಚ್ಚು ಮಂದಿಗೆ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲಎಂದು ಶಾಸಕ ಎಂ. ಕೃಷ್ಣಪ್ಪ ಅವರು ಸರ್ಕಾರದ ಗಾಮ್,ಅನಸೆಳೆದಿದ್ದಾರೆ.

ವಿಧಾನಸಭೆಯಲ್ಲಿ ಈ ಕುರಿತಂತೆ ಪ್ರಸ್ತಾಪಿಸಿರುವ ಶಾಸಕರು, ಪರಪ್ಪನ ಅಗ್ರಹಾರದ ಸುತ್ತಮುತ್ತ ಹತ್ತು ಸಾವಿರಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಹಳ ಹತ್ತಿರವಿದೆ. ಜಾಮರ್‌ನಿಂದಾಗಿ ಯಾರಿಗೂ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಅದರೆ ಜೈಲಿನೊಳಗೆ ಖೈದಿಗಳು, ಅಧಿಕಾರಿಗಳು ಮೊಬೈಲ್ ಬಳಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೈಲಿನ ಒಳಗಿರುವವರಿಗೆ ಸಿಗುವ ಸಿಗ್ನಲ್ ಹೊರಗಿನವರಿಗೆ ಸಿಗುತ್ತಿಲ್ಲ.‌ ಜೈಲಿನ ಜಾಮರ್‌ಗಳಿಂದಾಗಿ ನಾಗರಿಕರ ದೈನಂದಿನ ಬದುಕು ಅಸ್ತವ್ಯಸ್ತಗೊಂಡಿದೆ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.