Wednesday, May 13

ಭಾರತದ ನೂತನ ಸಿಡಿಎಸ್ ಆಗಿ ಎನ್.ಎಸ್. ರಾಜಾ ಸುಬ್ರಮಣಿ ನೇಮಕ; ನೌಕಾಪಡೆ ಮುಖ್ಯಸ್ಥರಾಗಿ ಕೃಷ್ಣ ಸ್ವಾಮಿನಾಥನ್

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಜೊತೆಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಕೃಷ್ಣ ಸ್ವಾಮಿನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಸಿಡಿಎಸ್ ಆಗಿರುವ ಅನಿಲ್ ಚೌಹಾಣ್ ಅವರ ಅವಧಿ ಮೇ 30ರಂದು ಅಂತ್ಯಗೊಳ್ಳಲಿದ್ದು, ಬಳಿಕ ರಾಜಾ ಸುಬ್ರಮಣಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಿಡಿಎಸ್ ಜವಾಬ್ದಾರಿಯ ಜೊತೆಗೆ ಅವರು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಜಾ ಸುಬ್ರಮಣಿ, ಸೇನೆಯಲ್ಲಿ ದೀರ್ಘ ಅನುಭವ ಹೊಂದಿದ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಭೂಸೇನೆಯ ಉಪಮುಖ್ಯಸ್ಥರಾಗಿ ಹಾಗೂ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.