Thursday, January 29

ಹತ್ಯೆಗೀಡಾದವರ ಮನೆಯವರಿಗಿಲ್ಲ ಸಾಂತ್ವನ, ಮುಸ್ಲಿಂ ನಿಯೋಗಕ್ಕೆ ಮಣಿಯಿತೇ ಸರ್ಕಾರ?

ಬೆಂಗಳೂರು: ಮಂಗಳೂರಿನಲ್ಲಿ ಮತಾಂಧರಿಂದ ಹತ್ಯೆಯಾದ ಸುಹಾಸ್ ಶೆಟ್ಟಿಯವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿತ್ತು. ಆದರೆ ಜೀವ ರಕ್ಷಣೆಗೆ ಅಗತ್ಯ ವ್ಯವಸ್ಥೆ ಕೂಡಾ ಕಲ್ಪಿಸಲಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ. ಇಷ್ಟು ಭೀಕರ ಹತ್ಯೆ ಬಳಿಕ ಮತ್ತಿಬ್ಬರು ಹಿಂದೂ ನಾಯಕರಿಗೆ ಜೀವಹತ್ಯೆಯ ಬೆದರಿಕೆ ಒಡ್ಡಲಾಗಿದ್ದರೂ ಪೊಲೀಸ್ ಇಲಾಖೆ ಆ ದುರುಳರನ್ನು ಹಿಡಿಯುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಹತ್ಯೆಗೀಡಾದವರ ಮನೆಗೆ ಹೋಗಿ ತಂದೆ ತಾಯಿಗಳಿಗೆ ಧೈರ್ಯ ತುಂಬುವುದು ಬಿಟ್ಟು ಹತ್ಯೆಗೈದವರ ಪರವಾಗಿದ್ದ ಮುಸ್ಲಿಂ ನಿಯೋಗದೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.