Saturday, December 6

ಆಪಲ್ ಹೊಸ ಐಫೋನ್ 17 ಸರಣಿ ಬಿಡುಗಡೆ; ಇದರ ವಿಶೇಷತೆ ಏನು ಗೊತ್ತಾ?

ಬೆಂಗಳೂರು: ಆಪಲ್ ತನ್ನ ಬಹುನಿರೀಕ್ಷಿತ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ತಂದಿದೆ. ಈ ಬಾರಿ ಕಂಪನಿ ಮಹತ್ವದ ಬದಲಾವಣೆ ಮಾಡಿ, 128GB ಸ್ಟೋರೇಜ್ ಮಾದರಿಯನ್ನು ಸಂಪೂರ್ಣ ಕೈಬಿಟ್ಟಿದೆ. ಎಲ್ಲ ಫೋನ್‌ಗಳು 256GB ಸ್ಟೋರೇಜ್‌ನಿಂದಲೇ ಪ್ರಾರಂಭವಾಗುತ್ತವೆ.

ಹೊಸ ಸರಣಿಯಲ್ಲಿರುವ A19 ಚಿಪ್ ಹಾಗೂ A19 ಪ್ರೊ ಪ್ರೊಸೆಸರ್‌ಗಳು, ಶಕ್ತಿಶಾಲಿ N1 ನೆಟ್‌ವರ್ಕಿಂಗ್ ಚಿಪ್ (Wi-Fi 7, Bluetooth 6, Thread) ಮತ್ತು ಇನ್ನಷ್ಟು ತಂತ್ರಜ್ಞಾನ ಸುಧಾರಣೆಗಳು ಗಮನ ಸೆಳೆಯುತ್ತಿವೆ. ಜೊತೆಗೆ Ceramic Shield 2, ProMotion 120Hz ಡಿಸ್ಪ್ಲೇ, ಹೆಚ್ಚು ಕಾಲ ಬ್ಯಾಟರಿ ಬ್ಯಾಕಪ್, ವೇಗದ ಚಾರ್ಜಿಂಗ್ ಮುಂತಾದ ಅಂಶಗಳು ಈ ಬಾರಿ ವಿಶೇಷ.

📌 ಭಾರತದಲ್ಲಿ ಬೆಲೆ (256GB ಮೂಲ ಮಾದರಿ):

ಐಫೋನ್ 17 – ₹82,900

ಐಫೋನ್ 17 ಏರ್ – ₹1,19,900

ಐಫೋನ್ 17 ಪ್ರೊ – ₹1,34,900

ಐಫೋನ್ 17 ಪ್ರೊ ಮ್ಯಾಕ್ಸ್ – ₹1,49,900 (2TB ವರಗೂ ಲಭ್ಯ)

ಪೂರ್ವ-ಆದೇಶ ಸೆಪ್ಟೆಂಬರ್ 12ರಿಂದ ಪ್ರಾರಂಭವಾಗಲಿದ್ದು, ಭಾರತದಲ್ಲಿ ಸೆಪ್ಟೆಂಬರ್ 26ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ತಜ್ಞರ ಅಭಿಪ್ರಾಯದಲ್ಲಿ, ಆಪಲ್ 128GB ಮಾದರಿಯನ್ನು ಕೈಬಿಟ್ಟು 256GB ನಿಂದಲೇ ಪ್ರಾರಂಭಿಸಿರುವುದು, ಬಳಕೆದಾರರ ಹೆಚ್ಚುತ್ತಿರುವ ಡೇಟಾ ಅವಶ್ಯಕತೆ ಹಾಗೂ ಹೈ-ಎಂಡ್ ಮಾರುಕಟ್ಟೆಗೆ ತಕ್ಕ ತಂತ್ರ ಎನ್ನಲಾಗಿದೆ.