
ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಗೊಂದಲಗಳು ತಾರಕಕ್ಕೇರಿದೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಇನ್ನೂ ಜೀವಂತವಾಗಿದೆ. ಇದರ ನಡುವೆ ಕೇರಳದ ನಾಯಕರ ಆಣತಿಗೆ ಕಾಂಗ್ರೆಸ್ ಸರ್ಕಾರವೇ ಗಡಗಡ ನಡುಗುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ.
ಕೇರಳ ಕಾಂಗ್ರೆಸ್ ನಾಯಕ ಕೆ. ಸಿ. ವೇಣುಗೋಪಾಲ್ ಅವರೇ ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ದರ್ಪ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇಷ್ಟೆಲ್ಲಾ ವಿವಾದಗಳಿರುವಾಗ, ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಗೊಂದಲದಲ್ಲಿರುವಾಗ ಬಜೆಟ್ ತಯಾರಿ ನಡೆಸುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಮೊದಲು ನಿರ್ಧರಿತವಾಗಲಿ ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಬರೆದುಕೊಂಡಿರುವ ಬಿಜೆಪಿ, ಕರ್ನಾಟಕದ ಜನತೆಗೆ ನಿಮ್ಮ ಕಾಟಾಚಾರದ, ದಾಖಲೆ ನಿರ್ಮಿಸಲು ಎಂದು ಮಂಡಿಸುವ ಬಜೆಟ್ನ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಕುರ್ಚಿ ಗೊಂದಲಗಳು ತಾರಕಕ್ಕೇರಿದೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಇನ್ನೂ ಜೀವಂತವಾಗಿದೆ. ಇದರ ನಡುವೆ ಕೇರಳದ ನಾಯಕರ ಆಣತಿಗೆ @INCKarnataka ಸರ್ಕಾರವೇ ಗಡಗಡ ನಡುಗುತ್ತಿದೆ. ಕೇರಳ ಕಾಂಗ್ರೆಸ್ ನಾಯಕ ಕೆ. ಸಿ. ವೇಣುಗೋಪಾಲ್ ಅವರೇ ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ದರ್ಪ ತೋರಿಸುತ್ತಿದ್ದಾರೆ.… pic.twitter.com/G8fQ2D8cbq
— BJP Karnataka (@BJP4Karnataka) January 2, 2026
