Saturday, December 6

ಡಿವೈಡರ್‌ಗೆ ಡಿಕ್ಕಿ; ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಜೀವ ದಹನ

ಧಾರವಾಡ: ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಕಾರು ಅಪಘಾತದಲ್ಲಿ ಸಜೀವ ದಹನಗೊಂಡು ಮೃತಪಟ್ಟು ದಾರುಣ ಘಟನೆ ಸಂಭವಿಸಿದೆ.

ಶುಕ್ರವಾರ ರಾತ್ರಿ ಹಾವೇರಿಯಿಂದ ಮುರ್ಗೋಡಿನಲ್ಲಿರುವ ತಮ್ಮ ನಿವಾಸದತ್ತ ತೆರಳುತ್ತಿದ್ದ ವೇಳೆ, ಅಣ್ಣಿಗೇರಿ ಸಮೀಪ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ.

ಕಣ್ಣುಮುಚ್ಚುವಷ್ಟರಲ್ಲಿ ಕಾರು ಮಿಂಚಿನಂತೆ ಹೊತ್ತಿ ಉರಿದಿದ್ದು, ಒಳಗಿದ್ದ ಇನ್ಸ್‌ಪೆಕ್ಟರ್ ಬದುಕಿದ್ದಂತೆಯೇ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ.

ಅಪಘಾತ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.