Friday, January 30

ದೇಶದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ; ಗಡಿಯಲ್ಲಿ ಮೋದಿ ಗರ್ಜನೆ

ಕಚ್ : ಪ್ರಧಾನಿ ನರೇಂದ್ರ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಗುಡುಗಿದ್ದಾರೆ.

ಗುಜರಾತಿನ ಕಚ್ ಪ್ರದೇಶದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ದೀಪಗಳ ಹಬ್ಬದ ಶುಭಾಶಯ ಹಂಚಿಕೊಂಡ ಮೋದಿ, ಯೋಧರ ಬಗ್ಗೆ ಕುಶಲೋಪರಿ ವಿಚಾರಿಸಿದರು. ಈ ವೇಳೆ ಮಾತನಾಡಿದ ಮೋದಿ, ದೇಶ ರಕ್ಷಣೆ ವಿಷಯದಲ್ಲಿ ಮಿಲಿಟರಿ ಶಕ್ತಿ ಮೇಲೆ ದೇಶದ ಜನತೆಗೆ ನಂಬಿಕೆಯಿದೆ ಎಂದರು.

ದೇಶದ ನೆಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದ ಅವರು, ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದರು. ಇದೇ ವೇಳೆ, ಯೋಧರಿಂದಾಗಿ ದೇಶವು ಸುರಕ್ಷಿತವಾಗಿದೆ ಎಂದು ಹೇಳುವ ಮೂಲಕ ಸೈನ್ಯವನ್ನು ಹುರಿದುಂಭಿಸಿದರು.