‘ಪೋಗಟ್ ಅನರ್ಹತೆ ಬಗ್ಗೆ ದುಃಖವಾಗಿದೆ, ಆದರೆ ನಿಯಮಗಳನ್ನು ಗೌರವಿಸಬೇಕು’: ಅಂತರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಪ್ರತಿಕ್ರಿಯೆ

ಪ್ಯಾರಿಸ್: ತೂಕ ಹೆಚ್ಚಿದ್ದ ಕಾರಣಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಸುದ್ದಿ ಇಡೀ ಕ್ಷೀಡಾ ಕ್ಷೇತ್ರವನ್ನೇ ನಲುಗಿಸದೆ. ಈ ಬಗ್ಗೆ ಕ್ರೀಡಾಪಟುಗಳು ದುಃಖ ವ್ಯಕ್ತಪಡಿಸಿದ್ದಾರೆ.

ಫೊಗಟ್ ಅವರ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿರುವ ಅಂತರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ನೆನಾದ್ ಲಾಲೋವಿಕ್ ಅವರು ತಮಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಲಾಲೋವಿಕ್, ನಿಯಮಗಳು ಎಲ್ಲರಿಗೂ ಒಂದೇ. ಅದನ್ನು ಗೌರವಿಸಬೇಕು ಎಂದಿದ್ದಾರೆ. ಫೋಗಟ್ ಅವರ ಅನರ್ಹತೆ ಬಗ್ಗೆ ಅತೀವ ದುಃಖವಾಗಿದೆ. ಆದರೆ ಈ ಬಗ್ಗೆ ಏನನ್ನೂ ಮಾಡಲಾಗುವುದಿಲ್ಲ ಎಂದವರು ಹೇಳಿದ್ದಾರೆ.