Saturday, December 6

ಬಿಡದಿ ಬಳಿ ಬಾಯ್ಲರ್ ಸ್ಫೋಟ; ಐವರು ಕಾರ್ಮಿಕರಿಗೆ ಗಾಯ

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ಬಿಡದಿ ಬಳಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಐವರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಬಿಡದಿಯ ಭೈರಮಂಗಲ ಕ್ರಾಸ್​ಬಳಿಯ ವಿಧ್ಯುತ್​​ ಉತ್ಪಾದನಾ ಘಟಕದಲ್ಲಿ ಬಾಯ್ಲರ್​ಸ್ಪೋಟಗೊಂಡು ಅವಘಡ ಸಂಭವಿಸಿದೆ. ಘಟನೆಯಲ್ಲಿ ಉತ್ತರ ಭಾರತದ ಐವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಅಮಲೇಶ್, ಸಂತೂನ್, ಉಮೇಶ್, ತರುಣ್, ಲಖನ್ ಎಂದು ಗುರುತಿಸಲಾಗಿದೆ.

ಅವಘಡದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.