Thursday, February 19

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಸಹಾಯಕ (Assistant) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 650 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ದೇಶಾದ್ಯಂತ 18 ಕಚೇರಿಗಳಲ್ಲಿ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಫೆಬ್ರವರಿ 16ರಿಂದ ಆರಂಭವಾಗಿದ್ದು, ಮಾರ್ಚ್ 8, 2026 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು RBI ಅಧಿಕೃತ ವೆಬ್‌ಸೈಟ್ (rbi.org.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಚಂಡೀಗಢ, ಚೆನ್ನೈ, ಅಹಮದಾಬಾದ್, ಬೆಂಗಳೂರು, ಭೋಪಾಲ್, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ-ಲಕ್ನೋ, ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ನಗರಗಳಲ್ಲಿ ಹುದ್ದೆಗಳು ಲಭ್ಯವಿವೆ.

ಪರೀಕ್ಷಾ ವೇಳಾಪಟ್ಟಿ (ತಾತ್ಕಾಲಿಕ):
ಪೂರ್ವಭಾವಿ ಪರೀಕ್ಷೆ: ಏಪ್ರಿಲ್ 11, 2026
ಮುಖ್ಯ ಪರೀಕ್ಷೆ: ಜೂನ್ 7, 2026

ಅರ್ಹತೆ: ಯಾವುದೇ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ವರ್ಡ್ ಪ್ರೊಸೆಸಿಂಗ್ ಕಾರ್ಯಜ್ಞಾನ ಅಗತ್ಯ. ಸಂಬಂಧಿತ ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯ. ಮಾಜಿ ಸೈನಿಕರಿಗೆ 15 ವರ್ಷಗಳ ರಕ್ಷಣಾ ಸೇವೆಯನ್ನು ಪದವಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ.

ವಯೋಮಿತಿ: ಫೆಬ್ರವರಿ 1, 2026ರಂತೆ 20 ರಿಂದ 28 ವರ್ಷದೊಳಗಿನವರು ಅರ್ಹರು. SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. PwBD ಮತ್ತು ಮಾಜಿ ಸೈನಿಕರಿಗೆ ನಿಯಮಾನುಸಾರ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: RBI ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ತಾತ್ಕಾಲಿಕ ನೋಂದಣಿ ಸಂಖ್ಯೆ ಹಾಗೂ ಪಾಸ್‌ವರ್ಡ್ ಪಡೆಯಬೇಕು. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: 

ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಭಾಷಾ ಪ್ರಾವೀಣ್ಯತಾ ಪರೀಕ್ಷೆ (LPT)

LPTಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು LPT ಅಂಕಗಳ ಆಧಾರದ ಮೇಲೆ ಅಂತಿಮ ಅರ್ಹತೆ ನಿರ್ಧರಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು RBI ಅಧಿಕೃತ ವೆಬ್‌ಸೈಟ್ (rbi.org.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.