Monday, September 8

ಭೀಕರ ದುರಂತ; ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ

ಕಾಲಿಸ್ಪೆಲ್ (ಅಮೆರಿಕಾ): ಅಮೆರಿಕದ ಮಾಂಟಾನಾ ರಾಜ್ಯದ ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಭೀಕರ ದುರಂತ ನಡೆದಿದೆ. ನಿಂತಿದ್ದ ವಿಮಾನದ ಮೇಲೆ ಮತ್ತೊಂದು ಸಣ್ಣ ವಿಮಾನ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಅಧಿಕಾರಿಗಳ ಪ್ರಕಾರ, ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಳಿಯುವಾಗ ನಿಯಂತ್ರಣ ತಪ್ಪಿ ಪತನಗೊಂಡಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಅಪಘಾತದ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.