Thursday, January 29

ಮೆಕ್ಸಿಕೋದಲ್ಲಿ ಸಾಮೂಹಿಕ ಗುಂಡಿನ ದಾಳಿ: 12 ಮಂದಿ ಸಾವು

ಮೆಕ್ಸಿಕೋ: ಮೆಕ್ಸಿಕೋ ರಾಜ್ಯದ ಗ್ವಾನಾಜುವಾಟೊ ಪ್ರದೇಶದ ಇರಾಪುವಾಟೊ ನಗರದಲ್ಲಿ ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 12 ಜನರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೀದಿಯಲ್ಲಿ ನೃತ್ಯ, ಮದ್ಯಪಾನದಲ್ಲಿ ತೊಡಗಿದ್ದ ಜನರು ಗುಂಡಿನ ಧ್ವನಿಗೆ ಬೆಚ್ಚಿಬಿದ್ದುಓಡುತ್ತಿರುವ ದೃಶ್ಯಗಳು ದಾಖಲಾಗಿವೆ.

ಸೆಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಹಬ್ಬದ ಅಂಗವಾಗಿ ಸಾರ್ವಜನಿಕರು ರಸ್ತೆ ಮಧ್ಯೆ ಸಂಭ್ರಮದಲ್ಲಿದ್ದ ವೇಳೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಹಿಂದೆ ಮಾಫಿಯಾ ಸಂಘಟನೆಗಳ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.