Wednesday, January 28

ಸಿದ್ದು ಕುರ್ಚಿ ಉಳಿಸಿಕೊಳ್ಳಲು ವಸತಿ ಇಲಾಖೆಯ ಹಣ ವರ್ಗಾವಣೆ? ಏನಿದು ಬಿಜೆಪಿ ಆರೋಪ

ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಖಾನ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೌಲ್ಯದ ಆಸ್ತಿಪಾಸ್ತಿ ಪತ್ತೆ ಮಾಡಿದ ಬೆಳವಣಿಗೆಯನ್ನು ಮುಂದಿಟ್ಟು ಪ್ರತಿಪಕ್ಷ ಬಿಜೆಪಿಯು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ.

ಬೆಂಗಳೂರಿನ ಹಲಸೂರಿನಲ್ಲಿರುವ ಸರ್ಫರಾಜ್‌ ನಿವಾಸ ಮತ್ತು ಸಂಬಂಧಿಕರ ಮನೆಗಳೂ ಸೇರಿದಂತೆ 5 ಕಡೆ ಇತ್ತೀಚಿಗೆ ದಾಳಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಸುಮಾರು 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.


ಈ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿರುವ ಬಿಜೆಪಿ, ಬಡವರಿಗೆ ಸೂರು ಕಲ್ಪಿಸಬೇಕಾದ ವಸತಿ ಇಲಾಖೆ ಇಂದು ಭ್ರಷ್ಟಾಚಾರದ ಗೂಡಾಗಿದೆ. ಸಚಿವ ಜಮೀರ್ ಅಹ್ಮದ್ ಅವರ ಇಲಾಖೆಯಲ್ಲಿ ಲೂಟಿಯಾದ ಕೋಟ್ಯಂತರ ರೂ. ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಆ ಭ್ರಷ್ಟಾಚಾರದ ಹಣವನ್ನು ಕುರ್ಚಿ ಉಳಿಸಿಕೊಳ್ಳಲು ವರ್ಗಾವಣೆ ಮಾಡಿದ್ದು ಯಾರಿಗೆ? ಎಂದು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದೆ. ಈ ಪೋಸ್ಟ್’ನಲ್ಲಿ ಬಿಜೆಪಿ ಹಾಕಿರುವ ವೀಡಿಯೊ ಗಮನಸೆಳೆದಿದೆ.