
ಗದಗ: ಸಿದ್ದರಾಮಯ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು ಸಂಭ್ರಮಾಚರಣೆಗೆ ತಯಾರಿ ನಡೆದಿದೆ.
ಗದಗದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಕ್ಷದ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮಾಚರಣೆ ಬಗ್ಗೆ ಬೆಂಬಲಿಗರ ಒತ್ತಾಸೆಯ ಪತ್ರಕರ್ತರ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು.
“ಈ ಬಗ್ಗೆ ಹಲವರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಮಂತ್ರಿಗಳಿಗೆ ಪ್ರತಿ ವಿಧಾನಸಭಾ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಎಂದು ಸೂಚನೆ ಕೊಟ್ಟಿದ್ದು, ಇದು ಮೊದಲು ನಡೆಯಲಿ. ಆ ನಂತರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿದ್ದು ಈ ಸಂಭ್ರಮಾಚರಣೆಯನ್ನು ಮಾಡಲೇಬೇಕಾಗಿದೆ. ಇದನ್ನೂ ಮಾಡುತ್ತೇವೆ” ಎಂದು ಡಿಕೆಶಿ ತಿಳಿಸಿದರು.