Wednesday, January 28

ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ದುರಂತ: ಬಾನಂಗಳದಲ್ಲಿ ವಿಮಾನಗಳ ಡಿಕ್ಕಿ

ಪ್ಯಾರಿಸ್: ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ವಿಮಾನ ದುರಂತ ಸಂಭವಿಸಿದೆ. ಏರ್ ಶೋ ವೇಳೆ ಮಂಗಳವಾರ ಎರಡು ವಿಮಾನಗಳು ಢಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.

ಫ್ರಾನ್ಸ್‌ನ ಈಶಾನ್ಯ ವಾಯುನೆಲೆಯಲ್ಲಿ ಫ್ರೆಂಚ್ ವಾಯುಪಡೆಯ ಎರಡು ವಿಮಾನಗಳು ಬಾನಂಗಳದಲ್ಲಿ ಢಿಕ್ಕಿ ಹೊಡೆದಿವೆ. ಆಲ್ಫಾ ಜೆಟ್ ವಿಮಾನಗಳು ಡಿಕ್ಕಿ ಹೊಡೆಡಿದ್ದು, ಬೆಂಕಿ ಕಾಣಿಸಿಕೊಂಡಿತು. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಮೂವರು ಪೈಲೆಟ್’ಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.