Sunday, December 7

ಲೋಕಸಭೆಯಲ್ಲಿ ವಕ್ಫ್ ಜಟಾಪಟಿ: ಬೆಳಗಿನ ಜಾವ 1.15 ಕ್ಕೆ ಮತದಾನ, ಕೊನೆಗೂ ಮಸೂದೆ ಅಂಗೀಕಾರ

ನವದೆಹಲಿ: ವಕ್ಫ್ ಜಟಾಪಟಿಯಿಂದಾಗಿ ಲೋಕಸಭೆ ಕಲಾಪ ಮುಂಜಾನೆವರೆಗೂ ನಡೆಯಿತು. ಆಡಳಿತ ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾದ ವಕ್ಫ್​ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಕೊನೆಗೂ ಅಂಗೀಕಾರ ಪಡೆಯಿತು.

ಲೋಕಸಭೆಯಲ್ಲಿ ಬುಧವಾರ ಸತತ 12 ಗಂಟೆಗಳ ಕಾಲ ವಕ್ಫ್​ ತಿದ್ದುಪಡಿ ಮಸೂದೆ ಮೇಲೆ ಚರ್ಚೆ ನಡೆಯಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15 ಕ್ಕೆ ಮತದಾನ ನಡೆಯಿತು. ಮಸೂದೆಯ ಪರವಾಗಿ 288 ಮತಗಳು ಹಾಗೂ ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ವಿರೋಧ ಪಕ್ಷದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕೃತಗೊಂಡವು. ಈ ಮೂಲಕ ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ವಿಚಾರದಲ್ಲಿ ಸರ್ಕಾರ ಮೇಲುಗೈ ಸಾಧಿಸಿದೆ. ರಾಜ್ಯಸಭೆಯಲ್ಲೂ ಅಂಗೀಕಾರವಾಗಬೇಕಿದ್ದು, ಈ ವಿದೇಯಕ ಗುರುವಾರ ಮೇಲ್ಮನೆಯಲ್ಲಿ ಮಂಡನೆಯಾಗಲಿದೆ.

ಈ ಸುದ್ದಿಯನ್ನು ಇಂಗ್ಲಿಷ್ ಆವೃತ್ತಿಯಲ್ಲೂ ಓದಿ..

“Lok Sabha passes Waqf (Amendment) Bill after marathon debate”