Thursday, January 29

ಕಾಂಗೋ ಗಣರಾಜ್ಯದಲ್ಲಿದೋಣಿ ದುರಂತ: 148 ಮಂದಿ ಸಾವು

ಕಾಂಗೋ: ಕಾಂಗೋ ಗಣರಾಜ್ಯದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 148 ಕ್ಕೆ ಏರಿದ್ದು, 100 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ದೇಶದ ವಾಯುವ್ಯದಲ್ಲಿರುವ ಕಾಂಗೋ ನದಿಯಲ್ಲಿ ಮಂಗಳವಾರ ಬೆಂಕಿ ಹೊತ್ತಿಕೊಂಡ ನಂತರ ದೋಣಿ ಮಗುಚಿ ಬಿದ್ದು ದುರಂತಕ್ಕೀಡಾಗಿದೆ. ಆ ದೋಣಿಯಲ್ಲಿ ಸುಮಾರು 500 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಪ್ರಯಾಣಿಕ ದೋಣಿಯಲ್ಲಿ ಒಬ್ಬ ವ್ಯಕ್ತಿ ಅಡುಗೆ ಮಾಡುತ್ತಿದ್ದಾಗ ಕಾಣಿಸಿಕೊಂಡ ಬೆಂಕಿ ದೈತ್ಯ ದೋಣಿಯನ್ನು ಆವರಿಸಿಕೊಂಡಿತು ಎನ್ನಲಾಗಿದೆ. ಆ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರು ನೀರಿಗೆ ಹಾರಿದ್ದಾರೆ. ಆದರೆ ಈಜಲು ಸಾಧ್ಯವಾಗದೆ ಜಲಸಮಾಧಿಯಾಗಿದ್ದಾರೆ. ಎಂಬಂಡಕ ಪಟ್ಟಣದ ಬಳಿ ಮೋಟಾರು ಚಾಲಿತ ಮರದ ದೋಣಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಲವನ್ನು ರಕ್ಷಿಸಿದೆ.