Thursday, January 29

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಬಿಜೆಪಿ ನಾಯಕರ ನಡೆಗೆ ಸಿಎಂ ಆಕ್ಷೇಪ

ಬೆಂಗಳೂರು: ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಕುರಿತಂತೆ ಬಿಜೆಪಿ ನಾಯಕರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರು ಸದಾಕಾಲ ಸಾವಿನಲ್ಲಿ ರಾಜಕಾರಣ ಮಾಡುತ್ತಾರೆ. ಇಂದು ಅವರು ಮಂಗಳೂರಿಗೆ ಹೊರಟಿದ್ದಾರೆ, ಕಳೆದ ವಾರ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ 26 ಜನರು ಸಾವಿಗೀಡಾದರು, ಅಲ್ಲಿಗೆ ಇವರು ಹೋಗಿದ್ರಾ? ಪ್ರಧಾನಿಗಳು ಹೋದ್ರಾ? ಯಾಕೆ ಅದು ಕೂಡ ಭದ್ರತಾ ವೈಫಲ್ಯವಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.