Sunday, December 7

ನೀತಿ ಸಭೆಗೆ ಸಿಎಂ ಗೈರು: ಸಚಿವರ ಸಮರ್ಥನೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ವಾರ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಗೈರು ಹಾಜರಾಗಿದ್ದರಲ್ಲಿ ತಪ್ಪಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಹೇಳಿದ್ದಾರೆ..ಸರ್ಕಾರದ ಪರವಾಗಿ ನಮ್ಮ ಕಂದಾಯ ಸಚಿವರು ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಈ ಹಿಂದೆ ನಡೆದ ನೀತಿ ಆಯೋಗದ ಎಷ್ಟೋ ಸಭೆಗಳಿಗೆ ಹೋಗಿಲ್ಲ. ಆಗ ಹಣಕಾಸು ಸಚಿವರು ನಡೆಸಿದ್ದಾರೆ. ಮತ್ತೆ ಸಭೆಗೆ ಹೋದರೂ ಅವರು ಹೇಳಿದ್ದನ್ನು ಮಾತ್ರ ಕೇಳಿಕೊಂಡು ಬರಬೇಕು. ನಮಗೆ ಕೇಳುವ ಹಕ್ಕು, ಸಮಯ ಎರಡನ್ನೂ ಕೊಡುವುದಿಲ್ಲ. ಒನ್‌ ವೇ ಸಭೆಗಳಿಗೆ ನಾವೇಕೆ ಹೋಗಬೇಕು ಎಂದು ಪತ್ರಕರ್ತರನ್ನೇ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಪ್ರಶ್ನಿಸಿದರು.