Thursday, January 29

ಯುವ ರಾಜ್ ಕುಮಾರ್ ನಟನೆಯ ‘ಎಕ್ಕ’ ಟ್ರೈಲರ್ ರಿಲೀಸ್

ಬೆಂಗಳೂರು: ನಟ ಯುವ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಎಕ್ಕ’ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾ ಫ್ಯಾಮಿಲಿ ಸೆಂಟಿಮೆಂಟ್, ಮಾಸ್ ಆಕ್ಷನ್ ಮತ್ತು ಲವ್ ಸ್ಟೋರಿ—all in one ಎಂಬ ರೀತಿಯ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿರುವ ಛಾಪು ಟ್ರೈಲರ್‌ನಲ್ಲಿಯೇ ಮೂಡಿಸಿದೆ.

ಸಂಜನಾ ಆನಂದ್ ಮತ್ತು ಸಂಪದಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಟ್ರೈಲರ್‌ನ ಕೆಲ ದೃಶ್ಯಗಳು, ವಿಶೇಷವಾಗಿ ಒಂದು ಫೈಟ್ ಸೀನ್, ಪುನೀತ್ ರಾಜ್‌ಕುಮಾರ್ ಅಭಿನಯದ ‘ಜಾಕಿ’ ಸಿನಿಮಾದ ನೆನಪನ್ನು ತರುವಂತಿದೆ.

ಚಿತ್ರದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಭಾಗಿ ಆಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್, ಮತ್ತು ಕೆಆರ್‌ಜಿ ಸ್ಟುಡಿಯೋಸ್ ಮೂರು ಪ್ರಮುಖ ನಿರ್ಮಾಣ ಸಂಸ್ಥೆಗಳು ಈ ಚಿತ್ರವನ್ನು ಒಟ್ಟಾಗಿ ನಿರ್ಮಿಸುತ್ತಿವೆ.

ಚರಣ್ ರಾಜ್ ಸಂಗೀತ ನೀಡಿರುವ ಈ ಚಿತ್ರಕ್ಕೆ, ಸತ್ಯಾ ಹೆಗಡೆ ಛಾಯಾಗ್ರಹಣ ಹೊತ್ತಿದ್ದಾರೆ. ‘ಎಕ್ಕ’ ಚಿತ್ರ ಜುಲೈ 18ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.