Saturday, December 6

ದಿಯೋಘರ್‌ನಲ್ಲಿ ಬಸ್-ಟ್ರಕ್ ಡಿಕ್ಕಿ: 18 ಕನ್ವಾರಿಯರು ಸಾವು

ರಾಂಚಿ: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಜಮುನಿಯಾ ಗ್ರಾಮದ ಬಳಿ ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹದಿನೆಂಟು ಕನ್ವಾರಿಯರು ಸಾವನ್ನಪ್ಪಿದ್ದಾರೆ ಮತ್ತು ಹತ್ತು ಮಂದಿ ಗಾಯಗೊಂಡಿದ್ದಾರೆ.

ಬಾಬಾ ಬೈದ್ಯನಾಥ ಧಾಮ ದೇವಾಲಯದಲ್ಲಿ ಪವಿತ್ರ ನೀರನ್ನು ಅರ್ಪಿಸಲು ಸಾವಿರಾರು ಭಕ್ತರು ಪ್ರಯಾಣಿಸುವ ಶ್ರಾವಣಿ ಮೇಳದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದಿಯೋಘರ್ ಸಂಸದ ನಿಶಿಕಾಂತ್ ದುಬೆ ಈ ಕುರಿತು X ನಲ್ಲಿ ಪೋಸ್ಟ್‌ ಹಾಕಿದ್ದಾರೆ. “ನನ್ನ ಲೋಕಸಭಾ ಕ್ಷೇತ್ರವಾದ ದಿಯೋಘರ್‌ನಲ್ಲಿ, ಶ್ರಾವಣ ಮಾಸದ ಕನ್ವಾರಿಯ ಯಾತ್ರೆಯ ಸಮಯದಲ್ಲಿ, ಬಸ್ ಮತ್ತು ಟ್ರಕ್ ಅಪಘಾತದಿಂದಾಗಿ 18 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಬಾಬಾ ಬೈದ್ಯನಾಥ ಜಿ ಅವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಹೇಳಿದ್ದಾರೆ.

ದಿಯೋಘರ್‌ನ ಮೋಹನಪುರ ಬ್ಲಾಕ್‌ನಲ್ಲಿರುವ ಅಪಘಾತ ಸ್ಥಳವು ಉತ್ತರಕ್ಕೆ ಹರಿಯುವ ಜಮುನಿಯಾ ನದಿಯ ದಡದಲ್ಲಿ, ಪ್ರಸಿದ್ಧ ಶಿವ-ಪಾರ್ವತಿ ದೇವಾಲಯದ ಬಳಿ ಇದೆ. ಬಾಬಾ ಬೈದ್ಯನಾಥ ಧಾಮದಲ್ಲಿ ‘ಜಲ’ (ಪವಿತ್ರ ನೀರು) ಅರ್ಪಿಸಲು ದೇವಘರ್‌ಗೆ ತೆರಳುತ್ತಿದ್ದ ಸುಮಾರು 35 ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಡಿಕ್ಕಿ ಯಾಗಿದೆ ಎನ್ನಲಾಗಿದೆ.