Saturday, December 6

‘ನಾನು ಮೂಲಭೂತವಾದದ ವಿರೋಧಿಯೇ ಹೊರತು ಧರ್ಮಶ್ರದ್ದೆಯ ವಿರೋಧಿಯಲ್ಲ’

ಬೆಂಗಳೂರು: RSS ನಂತಹ ಸಂಘಟನೆಗಳನ್ನು ನಿಗ್ರಹಿಸಿದಾಗ ಮೂಲಭೂತವಾದವನ್ನು ನಿಗ್ರಹಿಸಿದಂತಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. RSS ನಿಷೇಧ ಕುರಿತ ತಮ್ಮ ಸಮರ್ಥಿಸಿ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ‘ನಾನು ಮೂಲಭೂತವಾದದ ವಿರೋಧಿಯೇ ಹೊರತು ಯಾವುದೇ ಧರ್ಮಶ್ರದ್ದೆಯ ವಿರೋಧಿಯಲ್ಲ’ ಎಂದಿದ್ದಾರೆ.

‘ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆ ತಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಆದರೆ RSS ತಮ್ಮದು ಧಾರ್ಮಿಕ ಸಂಘಟನೆಯಲ್ಲ ಎನ್ನುತ್ತದೆ, ಧರ್ಮದ ಹೆಸರಲ್ಲಿ ಅವಾಂತರ ಸೃಷ್ಟಿಸುತ್ತದೆ.ತಮ್ಮದು ರಾಜಕೀಯ ಸಂಘಟನೆಯಲ್ಲ ಎನ್ನುತ್ತದೆ, ನೇರಾನೇರಾ ರಾಜಕೀಯ ಮಾಡುತ್ತದೆ. ಹೀಗೆ ಇವರು ನಡೆನುಡಿಗಳೇ ನಿಗೂಢ’ ಎಂದು ಅವರು ವಿಶ್ಲೇಷಿಸಿದ್ದಾರೆ.