Tuesday, January 27

LDF ಸೋತರೆ ಮೀಸೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ; ಮಾತು ಉಳಿಸಿಕೊಂಡ ನಾಯಕ

ಪತ್ತನಂತಿಟ್ಟ: ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಅಖಾಡ ಅನೇಕಾನೇಕ ವಿಶೇಷತೆಗಳಿಗೆ ಸಾಕ್ಷಿಯಾಯಿತು. ಈ ಚುನಾವಣೆಯಲ್ಲಿ ಬಿಜೆಪಿ ಯಶೋಗಾಥೆ ಬರೆದಂತೆ ಬೀಗುತ್ತಿದೆ. ಮತ್ತೊಂದೆಡೆ ಎಡರಂಗಕ್ಕೆ ತಕ್ಕ ಪಾಠ ಕಲಿಸಿರುವುದಾಗಿ ಯುಡಿಎಫ್ ನಾಯಕರು ಹೇಳುತ್ತಿದ್ದಾರೆ.

ಇದೇ ವೇಳೆ, ಸೋಲು ಗೆಲುವಿನ ಪಣದಲ್ಲಿ ಸೋತ ಎಲ್‌ಡಿಎಫ್ ನಾಯಕ ಮೀಸೆ ಬೋಳಿಸಿದರೆನ್ನಲಾದ ಸನ್ನಿವೇಶವೂ ಗಮನಸೆಳೆದಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪತ್ತನಂತಿಟ್ಟ ಪುರಸಭೆಯಲ್ಲಿ ಎಲ್‌ಡಿಎಫ್ ಗೆಲ್ಲಲು ವಿಫಲವಾದರೆ ಮೀಸೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಎಲ್‌ಡಿಎಫ್ ಪಕ್ಷದ ಕಾರ್ಯಕರ್ತ ಬಾಬು ವರ್ಗೀಸ್ ಎಂಬವರು ನುಡಿದಂತೆ ನಡೆದುಕೊಂಡಿದ್ದಾರೆ. ಪಕ್ಷದ ಸೋಲಿನ ನಂತರ ಅವರು ಸಾರ್ವಜನಿಕವಾಗಿ ತಮ್ಮ ಮಾತನ್ನು ಪಾಲಿಸಿದ್ದಾರೆ ಎನ್ನಲಾಗಿದೆ.