Wednesday, January 28

ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಸುದ್ದಿಯಲ್ಲಿರುವ ನಡುವೆಯೇ, ಅವರ ತಾಯಿ ಪುಷ್ಪಾ ವಿರುದ್ಧ ಭೂ ವಿವಾದಕ್ಕೆ ಸಂಬಂಧಿಸಿದ ಬೆಳವಣಿಗೆ ಸುದ್ದಿಯ ಕೇಂದ್ರಬಿಂದುವಾಗಿದೆ. ಹಾಸನದ ವಿದ್ಯಾನಗರದಲ್ಲಿ ಭಾನುವಾರ ಬೆಳಗಿನ ಜಾವ ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಲಾಗಿದೆ.

ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಜಾಗಕ್ಕೆ ಯಶ್ ಅವರ ತಾಯಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಮ್ಮ ಅವರ ಸಂಬಂಧಿ ದೇವರಾಜ್ ಈ ವಿಚಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ನ್ಯಾಯಾಲಯವು ದೇವರಾಜ್ ಪರವಾಗಿ ಆದೇಶ ನೀಡಿದೆ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.