Saturday, December 6

ಕೃಷಿಯಲ್ಲಿ ಕ್ರಾಂತಿಗೆ ಮೋದಿ ಮುನ್ನುಡಿ; ಬರೋಬ್ಬರಿ 109 ತಳಿಗಳ ಬಿಡುಗಡೆ

ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂಗಾರು ಆರಂಭದಲ್ಲಿ ಅವರು, ರೈತರಿಗೆ ಅಧಿಕ ಆದಾಯ ತರಬಲ್ಲ ಹೊಸ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.

27 ತೋಟಗಾರಿಕಾ ಬೆಳೆಗಳು, 34 ಕ್ಷೇತ್ರ ಬೆಳೆಗಳು ಮತ್ತು 61 ಬೆಳೆಗಳು ಸೇರಿ ಒಟ್ಟು 109 ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ.

ಅಧಿಕ ಇಳುವರಿ, ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಿ ಭಾನುವಾರ ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯಲ್ಲಿ ಭಾನುವಾರ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಮುಖ ಕ್ಷೇತ್ರ ಬೆಳೆಗಳು (ಸಿರಿಧಾನ್ಯ ಹಾಗೂ ವಿವಿಧ ಧಾನ್ಯಗಳು):

  • ಎಣ್ಣೆ ಬೀಜಗಳು,
  • ದ್ವಿದಳ ಧಾನ್ಯ,
  • ಗೋಧಿ,
  • ಭತ್ತ,
  • ಕಬ್ಬು,
  • ಹತ್ತಿ,
  • ಮೇವು ಬೆಳೆ,
  • ಹಾಗೂ ಇತರ ಬೆಳೆಗಳು

ಪ್ರಮುಖ ತೋಟಗಾರಿಕಾ ಬೆಳೆಗಳು:

  • ವಿವಿಧ ಹಣ್ಣುಗಳು,

  • ತರಕಾರಿ,

  • ಗೆಡ್ಡೆ,

  • ಮಸಾಲೆ ಬೆಳೆಗಳು,

  • ಹೂವುಗಳು,

  • ಗಿಡಮೂಲಿಕೆಗಳು