Saturday, December 6

ನಟ ಸೈಫ್ ಅಲಿ ಖಾನ್‌ ಕೊಲೆ ಯತ್ನ ಪ್ರಕರಣ; ಶಂಕಿತನ ಸೆರೆ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಕೊಲೆ ಯತ್ನ ಪ್ರಕರಣದ ಆರೋಪಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಧ್ಯರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ದಾಂಧಲೆ ನಡೆಸಿದ್ದ. ಕಳ್ಳತನಕ್ಕೆ ಯತ್ನಿಸಿದ್ದ ಆತ ಸೈಫ್ ಅಲಿ ಖಾನ್‌ ಅವರನ್ನು ಚೂರಿಯಿಂದ ಇರಿದಿದ್ದ.

ಆರೋಪಿಯ ಪತ್ತೆಗೆ ಬಲೇ ಬೀಸಿದ್ದ ಬಾಂದ್ರಾ ಠಾಣೆಯ ಪೊಲೀಸರು, ಘಟನೆ ನಡೆದ ಸುಮಾರು 30 ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಈ ನಡುವೆ ಬಂಧಿತ ಆರೋಪಿಯೇ ದಾಳಿಕೋರನೆಂಬ ಮಾಹಿತಿ ಹಂಚಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಬಾಂದ್ರಾ ಪೊಲೀಸ್ ಠಾಣೆಗೆ ಶಂಕಿತ ವ್ಯಕ್ತಿಯನ್ನು ಕರೆತರಲಾಗಿದೆ. ಈತನೇ ನಟನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ಎಂಬವುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ಮಸರು ತಿಳಿಸಿದ್ದಾರೆ.