Saturday, December 6

ಬೆಂಗಳೂರು ರಿಚ್ಮಂಡ್ ವೃತ್ತದಲ್ಲಿ ಅಪಘಾತ: ದ್ವಿಚಕ್ರ ವಾಹನಗಳಿಗೆ ಆಂಬ್ಯುಲೆನ್ಸ್ ಡಿಕ್ಕಿ, ದಂಪತಿ ಸಾವು

ಬೆಂಗಳೂರು: ರಾಜಧಾನಿಯ ರಿಚ್ಮಂಡ್ ವೃತ್ತ ಬಳಿ ಶನಿವಾರ ರಾತ್ರಿ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಹಲವಾರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಸಿಗ್ನಲ್‌ನಲ್ಲಿ ಹಲವಾರು ಮೋಟಾರ್‌ಸೈಕಲ್‌ಗಳು ನಿಂತಿದ್ದಾಗ, ವೇಗವಾಗಿ ಬಂದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ಒಂದು ದ್ವಿಚಕ್ರ ವಾಹನವನ್ನು ಹಲವಾರು ಮೀಟರ್‌ಗಳಷ್ಟು ಎಳೆದೊಯ್ದ ಬಳಿಕ ಆಂಬ್ಯುಲೆನ್ಸ್ ಪೊಲೀಸ್ ಚೌಕಿಗೆ ಅಪ್ಪಳಿಸಿದೆ.

ಅಪಘಾತದ ನಂತರ ಸ್ಥಳೀಯರು ಆಂಬ್ಯುಲೆನ್ಸನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರು. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.