Thursday, January 29

Author: jpprajamani

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ರೋಚಕ ಗೆಲುವು; ತಂಡವನ್ನು ಅಭಿನಂದಿಸಿದ ಹೆಚ್ಡಿಕೆ

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ರೋಚಕ ಗೆಲುವು; ತಂಡವನ್ನು ಅಭಿನಂದಿಸಿದ ಹೆಚ್ಡಿಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಐಪಿಎಲ್ 2025 ಟೂರ್ನಿಯಲ್ಲಿ ರೋಚಕ ಗೆಲುವು ಸಾಧಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸಲ ಕಪ್ ನಮ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಆರ್ ಸಿಬಿ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವರು ಸಂತಸ ವ...
18 ವರ್ಷಗಳ ಕನಸು ನನಸು; ಕೊನೆಗೂ ಕಪ್ ಗೆದ್ದ RCB

18 ವರ್ಷಗಳ ಕನಸು ನನಸು; ಕೊನೆಗೂ ಕಪ್ ಗೆದ್ದ RCB

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಅಹ್ಮದಾಬಾದ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹೊರಹೊಮ್ಮಿದೆ. ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಟ್ರೋಫಿ ಎತ್ತಿ ಹಿಡಿದಿದ್ದು, 18 ವರ್ಷಗಳ ಕನಸನ್ನು ನನಸಾಗಿಸಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ RCB ತಮ್ಮ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಕಾದಾಟ ನಡೆಸಿ 6 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. AAAAARRRRR CEEEEEEE BEEEEEE ❤🏆#TATAIPL | #RCBvPBKS | #Final | #TheLastMile | @RCBTweets pic.twitter.com/lp3AwgCVQl— IndianPremierLeague (@IPL) June 3, 2025 ಮೋಡಲ್ ಬ್ಯಾಟ್ ಮಾಡಿದ ಶ್ರೇಯಸ್ ನಾಯಕತ್ವದ RCB) ತಂಡ 190 ರನ್​ ಗಳಿಸಿತು. ಈ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 20 ಓವರ್ ಗಳಲ್ಲಿ ಕೇವಲ 184 ರನ್​ಗಳನ್ನಷ್ಟೇ ಗಳಿಸಿತು. ಅದಾಗಲೇ, ರಾಯಲ್ ಚಾಲೆಂಜರ್ಸ್ಅಭಿಮಾನಿಗಳು ವಿಜಯೋತ್ಸವ...
‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ತಮ್ಮ ಬಹುನಿರೀಕ್ಷಿತ ಚಿತ್ರ 'ಜನನಾಯಗನ್' ಚಿತ್ರೀಕರಣವನ್ನು ಅಧಿಕೃತವಾಗಿ ಪೂರ್ಣಗೊಳಿಸಿದ ನಂತರ, ನಟ-ರಾಜಕಾರಣಿ ವಿಜಯ್ ಈಗ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (TVK) ಅನ್ನು ಬಲಪಡಿಸುವತ್ತ ತಮ್ಮ ಸಂಪೂರ್ಣ ಗಮನವನ್ನು ನೀಡಲು ತೀರ್ಮಾನಿಸಿದ್ದಾರೆ. ವಿಜಯ್ ತಮಿಳುನಾಡಿನಾದ್ಯಂತ ಜಿಲ್ಲಾ ಮಟ್ಟದ ನಾಯಕತ್ವದೊಂದಿಗೆ ತೀವ್ರವಾದ ಸಂವಾದಗಳ ಸರಣಿಯನ್ನು ನಡೆಸಿದ್ದಾರೆ ಎಂದು ಟಿವಿಕೆ ಮೂಲಗಳು ಬಹಿರಂಗಪಡಿಸಿವೆ. 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ತಳಮಟ್ಟದ ಉಪಸ್ಥಿತಿ ಮತ್ತು ಸಾಂಸ್ಥಿಕ ಸಿದ್ಧತೆಯನ್ನು ನಿರ್ಣಯಿಸುವುದು ಇದರ ಉದ್ದೇಶವಾಗಿದೆ. ಮುಂಬರುವ ವಾರಗಳಲ್ಲಿ ವಿಜಯ್ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಒಂದರಿಂದ ಒಂದು ಸಭೆಗಳನ್ನು ನಿಗದಿಪಡಿಸಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಈ ಸಮಾಲೋಚನೆಗಳು ಪ್ರತಿಯೊಂದು ಪ್ರದೇಶದ ರಾಜಕೀಯ ಚಲನಶೀಲತೆಯನ್ನು ಪರಿಶೀಲಿಸುವುದು, ಸ್ಥಳೀಯ ಸವಾಲುಗಳನ್ನು ಪರಿಹರಿಸುವುದು ಮತ್ತು ರಾಜ್ಯದಲ್ಲಿ ಪಕ್ಷದ ಹೆಜ್ಜೆಗುರುತನ್ನು ವಿಸ್ತರಿಸಲು ಕಾರ್ಯತಂತ್ರವನ್ನು ರೂಪಿಸುವ ಗುರಿಯನ್ನು ಹೊಂದಿವೆ ಎಂದವರು ತಿಳಿಸಿದ್ದಾ...

ಕಮಲ್ ‌ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು: ಸಿ.ವಿ.ದೇವರಾಜ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ತಮಿಳಿನಿಂದಲೆ ಕನ್ನಡ ಹುಟ್ಟಿದೆ ಎಂದು ಅಜ್ಞಾನ ಮತ್ತು ಅವೈಜ್ಞಾನಿಕ ಹೇಳಿಕೆ ನೀಡಿದ ಬಹಭಾಷಾ ನಟ ಕಮಲ್ ಹಾಸನ್ ಕ್ಷಮೆ ಕೇಳುವಂತೆ ಪದೇ ಪದೇ ದುಂಬಾಲು ಬೀಳುವುದು ಕನ್ನಡಿಗರ ಸ್ವಾಭಿಮಾನಕ್ಕೆ ಅಪಮಾನ ಮಾಡಿದಂತೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ. ದೇವರಾಜ್ ಹೇಳಿದ್ದಾರೆ. ನಟ‌ ಕಮಲ್ ಹಾಸನ್ ಕನ್ನಡ ಭಾಷೆಯ ಇತಿಹಾಸ ತಿಳಿಯದೆ ನೀಡಿದ ಹೇಳಿಕೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವ ಅಸಮಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ. ದೇವರಾಜ್, ಇತ್ತೀಚಿನ ವರ್ಷಗಳಲ್ಲಿ ಹಲವಾರು ಚಿತ್ರ ನಿರ್ಮಿಸಿ ಸೋತು ಸುಣ್ಣವಾಗಿರುವ ನಟ ಕಮಲ್ ಹಾಸನ್ ಬಿಡುಗಡೆಯಾಗಲಿರುವ ತನ್ನ ಹೊಸ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶದಿಂದ ಕನ್ನಡ ‌ಭಾಷೆಯ ಕುರಿತು ಅಜ್ಞಾನದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ತನ್ನ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶವನ್ನು ಯಶಸ್ವಿಯಾಗಿ ಇಡೇರಿಸಿಕೊಂಡಿದ್ದಾರೆ ಎಂಡಿದ್ದಾರೆ. ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಕಮಲ್‌ ಹಾಸನ್ ಕ್ಷಮೆ ಕೇಳುವಂ...
ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಕಮಲ್ ಹಾಸನ್ ನಡೆ ಬಗ್ಗೆ ಹೈಕೋರ್ಟ್ ಗರಂ

ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಕಮಲ್ ಹಾಸನ್ ನಡೆ ಬಗ್ಗೆ ಹೈಕೋರ್ಟ್ ಗರಂ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ತಮಿಳು ನಟ ಕಮಲ್ ಹಾಸನ್ ಬಗ್ಗೆ ಹೈಕೋರ್ಟ್ ಕೂಡಾ ಗರಂ ಆಗಿದೆ. ಕಮಲ್ ಹಾಸನ್ ಕ್ಷಮೆ ಕೇಳುವಂತೆ ಕನ್ನಡಿಗರು ಪಟ್ಟು ಹಿಡಿದಿದ್ದು, ಕನ್ನಡ ಚಿತ್ರೋದ್ಯಮ ಕೂಡಾ ಕಮಲ್ ಹಾಸನ್ ಅವರ ಹೊಸ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ. ಈ ಸಂದಿಗ್ಧ ಪರಿಸ್ಥಿತಿ ನಡುವೆ ಹೈಕೋರ್ಟ್ ಮೆಟ್ಟಿಲೇರಿರುವ ಕಮಲ್ ಹಾಸನ್ ನಡೆ ಬಗ್ಗೆ ನ್ಯಾಯಪೀಠ ಕೂಡಾ ಅಸಮಾಧಾನ ವ್ಯಕ್ತಪಡಿಸಿದೆ. ಕಮಲ್ ಹಾಸನ್ ಅವರ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ನಟ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಜಟಿಲ ಸಮಸ್ಯೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಥಗ್ ಲೈಫ್ ಚಿತ್ರತಂಡದ ಪರವಾಗಿ ವಾದ ಮಂಡಿಸಿದ ವಕೀಲರು, ಉಂಟಾಗಿರುವ ವಿವಾದ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತುಕತೆ ನಡೆಸಿ ಅನಂತರವೇ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯದ ಗಮನಸೆಳೆದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ವಿಚಾರಣೆಯನ್ನು ಈ ತಿಂಗಳ 10ಕ್ಕೆ ಮುಂದೂಡಿದರು. ಈ ನ...
ಒತ್ತಡಕ್ಕೆ ಮಣಿದು ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ಕರ್ನಾಟಕ ಬಂದ್; ಕನ್ನಡ ಸಂಘಟನೆಗಳ ಎಚ್ಚರಿಕೆ

ಒತ್ತಡಕ್ಕೆ ಮಣಿದು ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ಕರ್ನಾಟಕ ಬಂದ್; ಕನ್ನಡ ಸಂಘಟನೆಗಳ ಎಚ್ಚರಿಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳ ನಾಯಕರು, ಒಂದು ವೇಳೆ ಒತ್ತಡಕ್ಕೆ ಮಣಿದು ಚಿತ್ರ ಬಿಡ್ಸುಗಡೆಗೆ ಮುಂದಾದರೆ ಕರ್ನಾಟಕ ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ವಾಟಾಳ್ ಪಕ್ಷದ ನಾಯಕರು ಕನ್ನಡ ಭಾಷೆಯ ಕುರಿತು ನಟ ಕಮಲಹಾಸನ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು. ವಾಟಾಳ್ ನಾಗರಾಜ್ ಮಾತನಾಡಿ ಕಮಲಹಾಸನ್ ಕನ್ನಡದ ಮುಂದೆ ತೀರ ಸಣ್ಣ ವ್ಯಕ್ತಿ, ತಮಿಳುನಾಡಿನಲ್ಲಿ ಅವರ ಜನಬೆಂಬಲ ಇಲ್ಲ, ಪಾರ್ಟಿ ಕಟ್ಟಿ ಸೋತಿದ್ದಾರೆ ಎಂದು ಕುಟುಕಿದರು. ತಮಿಳಿನಿಂದ ಕನ್ನಡ ಬಂತು ಈ ಮಾತನ್ನ ಆಡಿದ್ದಾರೆ, ಯಾರು ಮಾತನಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಈ ಪದ ಯಾಕೆ ಉಪಯೋಗಿಸಿದರು ಎಂಬುದು ಅರಿವಾಗುತ್ತಿಲ್ಲ ಎಂದ ಅವರು, ತಮಿಳಿನಿಂದ ಕನ್ನಡ ಹುಟ್ಟಿದ್ದೆ ಎಂದು ಹೇಳಿರುವುದು ಕೆಟ್ಟ ಸಂಸ್ಕೃತಿ, ಅಪರಾಧವಾಗಿದೆ ಎಂದರಲ್ಲದೆ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ ಎಂದರು. ಈ ಹಿಂದೆ ಸಿ.ರಾಜಗೋಪಾಲಚಾ...
ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 4 ಸಾವಿರಕ್ಕೆ ಏರಿಕೆ

ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 4 ಸಾವಿರಕ್ಕೆ ಏರಿಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 4 ಸಾವಿರಕ್ಕೆ ಏರಿಕೆಯಾಗಿವೆ. ಸೋಮವಾರದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,000ಕ್ಕೆ ತಲುಪಿದೆ. ಕೇರಳದಲ್ಲಿ 1,435 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 506 ಸಕ್ರಿಯ ಪ್ರಕರಣಗಳು, ದೆಹಲಿಯಲ್ಲಿ 483 ಸಕ್ರಿಯ ಪ್ರಕರಣಗಳು, ಗುಜರಾತ್ ನಲ್ಲಿ 338 ಸಕ್ರಿಯ ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 331 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 253, ತಮಿಳುನಾಡಿನಲ್ಲಿ 189, ಉತ್ತರ ಪ್ರದೇಶದಲ್ಲಿ 157, ರಾಜಸ್ಥಾನದಲ್ಲಿ 69, ಪುದುಚೇರಿಯಲ್ಲಿ 41, ಮಧ್ಯಪ್ರದೇಶದಲ್ಲಿ 23, ಆಂಧ್ರಪ್ರದೇಶದಲ್ಲಿ 17, ಒಡಿಶಾದಲ್ಲಿ 12 ಸಕ್ರಿಯ ಪ್ರಕರಣಗಳು ಇವೆ ಎಂದು ಸರ್ಕಾರೀ ಮೂಲಗಳು ತಿಳಿಸಿವೆ....
ಕಮಲ್ ಹಾಸನ್ ಕ್ಷಮೆ ಯಾಚಿಸದಿದ್ದರೆ ಕರ್ನಾಟಕದಲ್ಲಿ ಅವರ ಚಿತ್ರಗಳ ಪ್ರದರ್ಶನ ಇಲ್ಲ; KFCC

ಕಮಲ್ ಹಾಸನ್ ಕ್ಷಮೆ ಯಾಚಿಸದಿದ್ದರೆ ಕರ್ನಾಟಕದಲ್ಲಿ ಅವರ ಚಿತ್ರಗಳ ಪ್ರದರ್ಶನ ಇಲ್ಲ; KFCC

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಮಾತುಗಳನ್ನಾಡಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ನಟ ಕಮಲ್ ಹಾಸನ್ ಕ್ಷಣೆಯಾಚಿಸದ ಹೊರದು 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಹೇಳಿದೆ. ಕನ್ನಡ ಪರ ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ KFCC ಈ ಕುರಿತಂತೆ ಸ್ಪಷ್ಟನೆ ನೀಡಿದೆ. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ನಟನೆಯ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಸ್ಪಷ್ಟಪಡಿಸಿದ್ದಾರೆ....
ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ; ಮಣಿಪುರದಲ್ಲಿ 800 ಜನರ ರಕ್ಷಣೆ

ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ; ಮಣಿಪುರದಲ್ಲಿ 800 ಜನರ ರಕ್ಷಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಇಂಫಾಲ್: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಈಶಾನ್ಯ ರಾಜ್ಯಗಳು ತತ್ತರಿಸಿವೆ. ಅದರಲ್ಲೂ ಮಣಿಪುರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರವಾಹ ಪೀಡಿತ ಮಣಿಪುರದಲ್ಲಿ ಜನರನ್ನು ರಕ್ಷಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ 'ಆಪರೇಷನ್ ಜಲ್ ರಹತ್ 2' ಅನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. #WATCH | Imphal East District, Manipur | Flood-like situation in Imphal following incessant rainfall in the area.(Visuals from Sanjenthong Officer Colony) pic.twitter.com/X2D7l3dSDy— ANI (@ANI) May 31, 2025 ಮಣಿಪುರದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಿದ ತೀವ್ರ ಪ್ರವಾಹ ಮತ್ತು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಉಪ ಆಯುಕ್ತರಿಂದ ಸಹಾಯಕ್ಕಾಗಿ ಬಂದ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ 'ಆಪರೇಷನ್ ಜಲ್ ರಹತ್ 2' ಅನ್ನು ಪ್ರಾರಂಭಿಸಲಾಗಿದೆ. 0 ರಿಂದ 20 ಅಂಗವಿಕಲರು ಮತ್ತು ವೃದ್ಧರು ಸೇರಿದಂತೆ ಒಟ್ಟು ಸುಮಾರು 800 ಜನ...
ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಆಗಿ ಜಸ್ವೀರ್ ಸಿಂಗ್ ಮಾನ್

ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಆಗಿ ಜಸ್ವೀರ್ ಸಿಂಗ್ ಮಾನ್

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಏರ್ ಮಾರ್ಷಲ್ ಜಸ್ವೀರ್ ಸಿಂಗ್ ಮಾನ್ ಅವರು ಭಾರತೀಯ ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ಭಾನುವಾರ ಅಧಿಕಾರ ವಹಿಸಿಕೊಂಡರು. ಏರ್ ಮಾರ್ಷಲ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 16, 1989 ರಂದು IAF ನಲ್ಲಿ ಫೈಟರ್ ಪೈಲಟ್ ಆಗಿ ಜಸ್ವೀರ್ ಸಿಂಗ್ ಮಾನ್ ಅವರು ನಿಯೋಜನೆಗೊಂಡರು. ಅವರು ಪ್ರಾಥಮಿಕವಾಗಿ ವಿವಿಧ ರೀತಿಯ ಫೈಟರ್ ವಿಮಾನಗಳಲ್ಲಿ 3000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದ್ದಾರೆ. ಅವರು ಪೈಲಟ್ ಅಟ್ಯಾಕ್ ಇನ್ಸ್ಟ್ರಕ್ಟರ್ ಆಗಿದ್ದಾರೆ. ಅವರ ಕಾರ್ಯಾಚರಣೆಯ ವೃತ್ತಿಜೀವನದಲ್ಲಿ, ಅವರು ಫೈಟರ್ ಸ್ಕ್ವಾಡ್ರನ್‌ಗೆ ಕಮಾಂಡ್ ಮಾಡಿದ್ದಾರೆ. ಫಾರ್ವರ್ಡ್ ಬೇಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತು ಪ್ರೀಮಿಯಂ ಫೈಟರ್ ಬೇಸ್‌ನ ಏರ್ ಆಫೀಸರ್ ಕಮಾಂಡಿಂಗ್ ಆಗಿದ್ದಾರೆ. ಅವರು ವಾಯು ಪ್ರಧಾನ ಕಚೇರಿ ಮತ್ತು ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ವಿವಿಧ ಪ್ರಮುಖ ನೇಮಕಾತಿಗಳನ್ನು ಸಹ ನಿರ್ವಹಿಸಿದ್ದಾರೆ. ಏರ್ ಆಫೀಸರ್ 2017 ರಲ್ಲಿ ರಿಪಬ್ಲಿಕ್ ಆಫ್ ಸಿಂಗಾಪುರ್ ಏರ್ ಫೋರ್ಸ್ ಮತ್ತು 2018 ರಲ್ಲಿ ಯುಎಸ್ಎಎಫ್ ಜೊ...