
ಆಪರೇಷನ್ ಸಿಂದೂರ್ ನಿಂದ ನವ ಭಾರತ ಶಕ್ತಿ ಅನಾವರಣವಾಗಿದೆ ಎಂದ ರಾಜನಾಥ್
ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತ ತೆಗೆದುಕೊಂಡಿರುವ ನವ ದೃಷ್ಠಿಕೋನ ಮತ್ತು ದೃಢ ನಿಲುವನ್ನು ಪ್ರತಿಬಿಂಬಿಸುವಂತಾದ ‘ಆಪರೇಷನ್ ಸಿಂದೂರ್’ ಭಾರತದ ಶಕ್ತಿ, ಕಾರ್ಯತಂತ್ರ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನ ಉತ್ತರ ಕಮಾಂಡ್‌ನ ಸೈನಿಕರೊಂದಿಗೆ ಸಂವಾದ ನಡೆಸಿದ ಅವರು, "ಭಯೋತ್ಪಾದಕರಿಗೆ ಹಾಗೂ ಅವರನ್ನು ಬೆಂಬಲಿಸುವ ಪಾಕಿಸ್ತಾನದಂತಹ ಶಕ್ತಿಗಳಿಗೆ ಈ ಕಾರ್ಯಾಚರಣೆ ಸ್ಪಷ್ಟ ಸಂದೇಶ ನೀಡಿದೆ. ಭಾರತ ಈಗ ಬಲಿಪಶುವಾಗುವುದಿಲ್ಲ. ನಾವು ಶಕ್ತಿಯುಳ್ಳ ಪ್ರತಿಕ್ರಿಯೆ ನೀಡುತ್ತಿದ್ದೇವೆ" ಎಂದು ಹೇಳಿದರು.ಪಿಒಕೆ ಮತ್ತು ಪಾಕಿಸ್ತಾನದಲ್ಲಿರುವ ಉಗ್ರ ಮೂಲಸೌಕರ್ಯಗಳನ್ನು ನಾಶಮಾಡಲು ಭಾರತೀಯ ಸೇನೆ ಹಾಗೂ ಗುಪ್ತಚರ ಸಂಸ್ಥೆಗಳ ತಾಕತ್, ನಿಖರತೆ ಹಾಗೂ ಸಮರ್ಪಣೆಯನ್ನು ಶ್ಲಾಘಿಸಿದ ಸಚಿವರು, "ಭಾರತದ ಭಯೋತ್ಪಾದನೆ ವಿರೋಧಿ ನೀತಿಯಲ್ಲಿ ಸಂಭವಿಸಿದ ಪರಿವರ್ತನೆಯು ಈ ಶೌರ್ಯಮಯ ಕಾರ್ಯಾಚರಣೆಗೆ ಕಾರಣವಾಗಿದೆ" ಎಂದು ಹೇಳಿದರು."ಆಪರೇಷನ್ ಸಿಂದೂರ್ ಕೇವಲ ಸೈನಿಕ ಕ್ರಮವಲ್ಲ; ಇದು ಭಾರತ ತನ್ನ ಭ...









