
ಇರಾನ್ ಮೇಲೆ ಇಸ್ರೇಲ್ ದಾಳಿ: 224 ನಾಗರಿಕರು ಬಲಿ
ನವದೆಹಲಿ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ಶುರುವಾದ ಹಿಂಸಾತ್ಮಕ ಸಂಘರ್ಷ ಇದೀಗ ಇತರೆ ರಾಷ್ಟ್ರಗಳಿಗೂ ವಿಸ್ತಾರವಾಗಿದ್ದು, ಇಸ್ರೇಲ್ ಇದೀಗ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 224 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 1,257 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ.
💔🇮🇷 Israel bombed Iran’s top news station HQ yesterday.🚀🇮🇱 Iran responded by bombing the script-writing HQ of all Western mainstream media outlets: Mossad HQ & IDF Unit 8200.#IranIsrael #IranJustDoIt #Israel #IsraelIranConflict #IsraelTerroristState pic.twitter.com/56VzeXNrYi— Rebel_Warriors (@Rebel_Warriors) June 17, 2025
ಈ ಘಟನೆಗೆ ಸಂಬಂಧಿಸಿ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಸ್ಪಂದನೆ ನೀಡಿದ್ದು, ಇಸ್ರೇಲ್ ಈ ದಾಳಿಯ ಮೂಲಕ ಇರಾನ್‌ನ ಪ್ರಾದೇಶಿಕ ಅಖಂಡತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ಗಂಭೀರವಾಗಿ ಉಲ್ಲಂಘಿಸಿದ...








