ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್’ನ ಡೆವಾಲ್ಡ್ ಬ್ರೆವಿಸ್ ಸಾಹಸಕ್ಕೆ ಶಹಬ್ಬಾಸ್ ಗಿರಿ
ಚೆನ್ನೈ: ಸತತ ಸೋಲಿನಿಂದ ಕಂಗಾಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಐಪಿಎಲ್ ಸರಣಿಯಿಂದ ಹೊರಬಿದ್ದಿದೆ. ಬುಧವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಅಂತರದಲ್ಲಿ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಪ್ಲೆ ಆಫ್ ನಿಂದ ಹೊರಗುಳಿಯುವಂತಾಯಿತು. ಆದರೂ ಅಂತಿಮ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ಆಟ ಈ ಸರಣಿಯಲ್ಲಿ ಅಚ್ಚಳಿಯದ ನೆನಾಪಾಗಿ ಉಳಿಯುವಂತಾಗಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಸರ್ವಪತನ ಕಂಡಿತು. ಈ ಗೆಲುವಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಗೆ ತಂಡ 19.4 ಓವರ್ ನಲ್ಲೇ 6 ವಿಕೆಟ್ ಕಳೆದುಕೊಂಡು 194 ರನ್ ಪೇರಿಸಿತು. ಈ ನಡುವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನಲ್ಲಿ ಸತತ 5ನೇ ಸೋಲು ಕಂಡು ಈ ಐಪಿಎಲ್ ಸರಣಿಯಿಂದ ಹೊರಬಿದ್ದಿದೆ. ಆದರೂ ಅಂತಿಮ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ಆಟ ಈ ಸರಣಿಯಲ್ಲಿ ಅಚ್ಚಳಿಯದ ನೆನಾಪಾಗಿ ಉಳಿಯುವಂತಾಗಿದೆ. ಬೌಂಡರಿಯಲ್ಲಿ ಡೆವಾಲ್ಡ್ ಬ್ರೆವಿಸ್ ಅವರು ಬಾಲ್ ಹಿಡಿದ ಕ್ಷಣ ರೋಮಾಂಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸ...








