ಬಜೆಟ್ ಬಗ್ಗೆ ಓಕೆ, ಆದರೆ ಭರವಸೆ ಬಗ್ಗೆ ನುಡಿದಂತೆ ನಡೀತೀರಾ? ಆಶಾ ಕಾರ್ಯಕರ್ತೆಯರ ಖಾರವಾದ ಪ್ರಶ್ನೆಗೆ ಸಿಎಂ ಏನಂತಾರೆ?
ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಬಜೆಟ್'ನಲ್ಲಿ ಘೋಷಿಸಿರುವ ಒಂದು ಸಾವಿರ ರೂಪಾಯಿ ಗೌರವಧನ ನೀಡಿರುವುದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸ್ವಾಗತಿಸಿದೆ. ಅದರಂತೆ ಬಜೆಟ್ ಪೂರ್ವದಲ್ಲಿ ನೀಡಿರುವ ಭರವಸೆಯನ್ನೂ ಈಡೇರಿಸಿ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಒತ್ತಾಯಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ಗೌರವಧನ ಹೆಚ್ಚಳ ಮಾಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಡಿ.ನಾಗಲಕ್ಷ್ಮಿ, 'ಇದು ರಾಜ್ಯ ಬಜೆಟ್ ಸಂದರ್ಭದಲ್ಲಿ ಬಜೆಟ್ ಅಲ್ಲಿ ಘೋಷಣೆ ಮಾಡಿದ ಒಂದು ಸಾವಿರ ರೂಪಾಯಿ ಆಗಿರುತ್ತದೆ. ಇದು ರಾಜ್ಯದ ಎಲ್ಲಾ 41,000 ಆಶಾ ಗಳಿಗೆ ರಾಜ್ಯದಿಂದ ಹೆಚ್ಚಳವಾಗಿರುವುದಿಲ್ಲ .ಕೇವಲ 15004 ಮಂದಿಗೆ ಈ 1000 ರೂ ಹೆಚ್ಚಳ ಆಗಿದೆ. ಬಜೆಟ್ ನಲ್ಲಿ ಘೋಷಣೆ ಆಗಿರುವುದು ಈಗ ಸರ್ಕಾರದ ಅನುಮೋದನೆಯಾಗಿ ಆದೇಶವಾಗಿರುತ್ತದೆ' ಎಂದು ಗಮನಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ AIUTUC, ನೇತೃತ್ವದಲ್ಲಿ ಜನವರಿ 7 ರಿಂದ 10ರವರೆಗೆ ಅನಿರ್ದಿಷ್ಟ- ಅಹೋ ರಾತ್ರಿ ಆಶಾ ಕಾರ್...









