ಬಿಜೆಪಿ ಅಭ್ಯರ್ಥಿಯ ಚುನಾವಣಾ ಸವಾಲು; ಪ್ರಿಯಾಂಕಾ ಗಾಂಧಿಗೆ ಕೇರಳ ಹೈಕೋರ್ಟ್ ನೋಟಿಸ್
ಕೊಚ್ಚಿ: ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಕೇರಳ ಹೈಕೋರ್ಟ್ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ನೋಟಿಸ್ ನೀಡಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿರುವ ನೋಟಿಸ್‌ನಲ್ಲಿ, ಎರಡು ತಿಂಗಳೊಳಗೆ ಉತ್ತರ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.
ನೀಲಂಬೂರ್ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಪರ ಪ್ರಚಾರ ಮಾಡಲು ಪ್ರಿಯಾಂಕಾ ಗಾಂಧಿ ಈ ವಾರದ ಕೊನೆಯಲ್ಲಿ ತಮ್ಮ ಕ್ಷೇತ್ರಕ್ಕೆ ಆಗಮಿಸಲಿರುವ ಸಂದರ್ಭದಲ್ಲೇ ಈ ನೋಟಿಸ್ ಬಂದಿದೆ.
ನೀಲಂಬೂರ್ ವಿಧಾನಸಭಾ ಕ್ಷೇತ್ರವು ವಯನಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಡಿಸೆಂಬರ್‌ನಲ್ಲಿ ಪ್ರಿಯಾಂಕಾ ಅವರ ಗೆಲುವನ್ನು ರದ್ದುಗೊಳಿಸುವಂತೆ ಹರಿದಾಸ್ ಅರ್ಜಿ ಸಲ್ಲಿಸಿದ್ದರು. ಗಾಂಧಿ ತಮ್ಮ ನಾಮಪತ್ರದಲ್ಲಿ ಕೆಲವು ವಿವರಗಳನ್ನು ಮರೆಮಾಚಿದ್ದಾರೆ, ಇದರಲ್ಲಿ ಅವರು ಮತ್ತು ಅವರ ಕುಟುಂಬದ ಒಡೆತನದ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಮತ್ತು ಅವರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ನಿಖರವಾಗಿ ಪಟ್ಟಿ ಮಾಡಿಲ್ಲ ಎಂದು ಹ...









