Saturday, December 6

Author: jpprajamani

‘ಆಪರೇಷನ್ ಸಿಂಧೂರ’: ಸೇನಾ ಧೈರ್ಯಕ್ಕೆ ಕಾಂಗ್ರೆಸ್ ಶ್ಲಾಘನೆ

‘ಆಪರೇಷನ್ ಸಿಂಧೂರ’: ಸೇನಾ ಧೈರ್ಯಕ್ಕೆ ಕಾಂಗ್ರೆಸ್ ಶ್ಲಾಘನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 'ಆಪರೇಷನ್ ಸಿಂಧೂರ'ವನ್ನು ಸ್ವಾಗತಿಸಿರುವ ಕಾಂಗ್ರೆಸ್, ಸೇನೆಯ ದೃಢನಿಶ್ಚಯ ಮತ್ತು ಧೈರ್ಯವನ್ನು ಶ್ಲಾಘಿಸಿದೆ. 'ಆಪರೇಷನ್ ಸಿಂಧೂರ' ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಪಾಕಿಸ್ತಾನ ಮತ್ತು ಪಿಒಕೆಯಿಂದ ಹೊರಹೊಮ್ಮುವ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಭಾರತವು ದೃಢವಾದ ರಾಷ್ಟ್ರೀಯ ನೀತಿಯನ್ನು ಹೊಂದಿದೆ ಎಂದಿದ್ದಾರೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿಹಾಕಿರುವ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರ ದೃಢನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ ಎಂದು ಖರ್ಗೆ ಅವರು ಸಾಮಾಜಿಕ ಮಾಧ್ಯಮ 'X'ನಲ್ಲಿ...
‘ಆಪರೇಷನ್ ಸಿಂಧೂರ’ಕ್ಕೆ ಜೈಕಾರ: ದೇಶಾದ್ಯಂತ ವಿಜಯೋತ್ಸವ

‘ಆಪರೇಷನ್ ಸಿಂಧೂರ’ಕ್ಕೆ ಜೈಕಾರ: ದೇಶಾದ್ಯಂತ ವಿಜಯೋತ್ಸವ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು
ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ' ಎಂದು ಹೆಸರಿಸಲಾಗಿದ್ದು, ಸೇನಾ ಶಕ್ತಿ ಪ್ರದರ್ಶನಕ್ಕೆ ದೇಶಾದ್ಯಂತ ಅಭಿನಂದನೆ ವ್ಯಕ್ತವಾಗಿದೆ. ಹಲವೆಡೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಸರಿದರೆ ಸ್ವಾಗತಿಸುತ್ತೇವೆ ಎನ್ನುತ್ತಿರುವ ದೇಶದ ಜನ, ಇದೀಗ ನಡೆದಿರುವ 'ಆಪರೇಷನ್ ಸಿಂಧೂರ್' ಬೆಂಬಲಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಜನತೆ, ಭಾರತ ಮಾತೆಗೆ ಜೈಕಾರ ಹಾಕುತ್ತಿದ್ದಾರೆ....
ಭಾರತದ ದಾಳಿಗೆ ಅಕ್ಷರಶಃ ಬೆಚ್ಚಿದ ಪಾಕಿಸ್ತಾನ: ವಿಮಾನ ನಿಲ್ದಾಣಗಳಲ್ಲಿ ತುರ್ತು ಪರಿಸ್ಥಿತಿ

ಭಾರತದ ದಾಳಿಗೆ ಅಕ್ಷರಶಃ ಬೆಚ್ಚಿದ ಪಾಕಿಸ್ತಾನ: ವಿಮಾನ ನಿಲ್ದಾಣಗಳಲ್ಲಿ ತುರ್ತು ಪರಿಸ್ಥಿತಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿ ಮೂಲಕ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರನ್ನು 'ಸಿಂಧೂರ ಆಪರೇಷನ್' ಮೂಲಕವೇ ಭಾರತೀಯ ಸೇನೆ ಧಮನ ಮಾಡಿದೆ. ಅಷ್ಟೇ ಅಲ್ಲ, ತನ್ನನ್ನು ಮುಟ್ಟಿದರೆ ಸುತ್ತು ಹೋಗುವಿರೆಂಬ ಸಂದೇಶವನ್ನೂ ಭಾರತವು ಜಗತ್ತಿಗೆ ರವಾನಿಸಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ಸೇನೆ ಮಧ್ಯ ರಾತ್ರಿಯೇ 'ಸಿಂಧೂರ ಆಪರೇಷನ್' ಹೆಸರಲ್ಲಿ ವಾಯುದಾಳಿ ನಡೆಸಿದ್ದು, ಇನ್ನೂ ಬೆಳಕು ಹರಿಯುವಷ್ಟರಲ್ಲೇ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ. ಯಾವ್ಯಾವ ಸ್ಥಳಗಳ ಮೇಲೆ ಭಾರತ ದಾಳಿ? ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲ ಪಾಕಿಸ್ತಾನ ನೆಲಕ್ಕೂ ನುಗ್ಗಿ ಹೊಡೆಯಲಾಗಿದೆ. ಬಹವಾಲ್ಪುರ್, ಕೋಟ್ಲಿ, ಮುರಿಡ್ಕೆ, ಬಾಗ್ ಮತ್ತು ಮುಜಫರಾಬಾದ್‌ಗಳ ಮೇಲೆ ಭಯಾನಕ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ಮಸೀದಿಯಲ್ಲಿ ಅಡಗಿದ್ದರೂ ದಾಳಿಯಿಂದ ಹಿಂದೆ ಸರಿಯದ ಸೇನೆ ಪ್ರಬಲ ದಾಳಿ ನಡೆಸಿದೆ. ಭಾರತದ ಈ ಮಿಲಿಟರಿ ದಾಳಿಗೆ ಬೆಚ್ಚಿರುವ ಪಾಕಿಸ್ತಾನ ಸರ್ಕಾರವು ಲಾಹೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಪಾಕಿಸ್ತಾನದಲ್ಲಿ ಅವ್ಯವಸ್ಥೆ ಸೃಷ್ಟಿಯಾಗ...
ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ್ದ ಪಾಕ್ ಪಾತಕಿಗಳಿಗೆ ‘ಸಿಂಧೂರ ಸ್ಟ್ರೈಕ್..!

ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ್ದ ಪಾಕ್ ಪಾತಕಿಗಳಿಗೆ ‘ಸಿಂಧೂರ ಸ್ಟ್ರೈಕ್..!

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. Pakistan pic.twitter.com/XuGFEMYjat — Mossad Commentary (@MOSSADil) May 6, 2025 ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್ ' ಎಂದು ಹೆಸರಿಸಲಾಗಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್ ' ಎಂದು ಹೆಸರಿಸಲು ಒಂದು ಕಾರಣವೂ ಇದೆ. ಪಹಲ್ಲಾಮ್ ದಾಳಿ ಸಂದರ್ಭದಲ್ಲಿ ಹಿಂದೂಗಳನ್ನೂ ಹುಡುಕಾಡಿ ಉಗ್ರರು ನರಮೇಧ ನಡೆಸಿದ್ದಾರೆ. ಕೇವಲ ಪುರುಷರನ್ನೇ ಗುಂಡಿಟ್ಟು ಕೊಂಡು ಮಹಿಳೆಯರ ಕುಂಕುಮ ಅಳಿಸಿದ್ದಾರೆ. ಈ ಕಾರಣದಿಂದಲೇ ಪಾಕ್ ಉಗ್ರರನ್ನು ಅಳಿಸಿಹಾಕುವ ಕಾರ್ಯಾಚರಣೆಯನ್ನು ಮೋದಿ ಸರ್ಕಾರ ಆರಂಭಿಸಿದೆ. 🚨 MASSIVE NEWS🇮🇳🇵🇰 India launches MISSILE ATTACK on Pakistan.Pakistan Army confirms attack by ...
ದಾವಣಗೆರೆ: ರೌಡಿಶೀಟರ್​ ಸಂತೋಷ್​ ಕೊಲೆ ಕೇಸ್: 10 ಮಂದಿ ಆರೋಪಿಗಳು ಕಾಕಿ ಎದುರು ಶರಣು

ದಾವಣಗೆರೆ: ರೌಡಿಶೀಟರ್​ ಸಂತೋಷ್​ ಕೊಲೆ ಕೇಸ್: 10 ಮಂದಿ ಆರೋಪಿಗಳು ಕಾಕಿ ಎದುರು ಶರಣು

Focus, ಪ್ರಮುಖ ಸುದ್ದಿ, ರಾಜ್ಯ
ದಾವಣಗೆರೆ: ರೌಡಿಶೀಟರ್​ ಸಂತೋಷ್​ ಕುಮಾರ್​ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ. ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್​ ಕುಮಾರ್​ನನ್ನು ಆರೋಪಿಗಳು ಹತ್ಯೆಗೈದಿದ್ದರು. ಮೃತ ಸಂತೋಷ್​ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ 12 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಈ ನಡುವೆ ಆರೋಪಿಗಳಾದ ಕಾರ್ತಿಕ್, ಚವಳಿ ಸಂತು, ನವೀನ್, ಗುಂಡಪ್ಪ, ಬಸವರಾಜ್, ಹನುಮಂತಪ್ಪ, ಗಿಡ್ಡ ವಿಜಿ, ಶಿವು, ಕಡ್ಡಿ ರಾಘು, ಪ್ರಶಾಂತ್ ಮತ್ತು ಗಣಿ ಸೇರಿದಂತೆ ಎಂಬವರು ಪೊಲೀಸರ ಎದುರು ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ....
ಪಾಕ್ ಸ್ವಾಧೀನ ಪ್ರದೇಶದ ಮೇಲೆ ಭಾರತ ‘ಏರ್ ಸ್ಟ್ರೈಕ್’; ಉಗ್ರರ ಅಡಗುತಾಣಗಳು ಧ್ವಂಸ

ಪಾಕ್ ಸ್ವಾಧೀನ ಪ್ರದೇಶದ ಮೇಲೆ ಭಾರತ ‘ಏರ್ ಸ್ಟ್ರೈಕ್’; ಉಗ್ರರ ಅಡಗುತಾಣಗಳು ಧ್ವಂಸ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. Pakistan pic.twitter.com/XuGFEMYjat — Mossad Commentary (@MOSSADil) May 6, 2025 ಪಹಲ್ಲಾಮ್ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಕವಿದಿದೆ. ಪಾಕಿಸ್ತಾನಕ್ಕೆ ಹಲವು ರೀತಿಯಲ್ಲಿ ಹೊಡೆತ ನೀಡಿರುವ ಭಾರತ ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆ. 'ಆಪರೇಷನ್ ಸಿಂಧೂರ್ ': ವರ್ಷಗಳ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಭಾರತ ಈ ಬಾರಿ ಅದಕ್ಕಿಂತಲೂ ಭೀಕರ ಕಾರ್ಯಾಚರಣೆ ನಡೆಸಿದೆ. ಕೋಟ್ಲಿ, ಬಹ್ವಲ್ಪುರ್ ಮತ್ತು ಮುಜಫರಾಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್' ಎಂದು ...
BMTCಯಲ್ಲಿ ಸಾರಿಗೆ ಆಶಾಕಿರಣ ; 28100 ನೌಕರರ ಕಣ್ಣಿನ ತಪಾಸಣೆ,  ಉಚಿತ ಕನ್ನಡಕ ವಿತರಣೆ.. ಮೃತ ನೌಕರರ ಅವಲಂಬಿತರಿಗೆ ಪರಿಹಾರದ‌ ಚೆಕ್..

BMTCಯಲ್ಲಿ ಸಾರಿಗೆ ಆಶಾಕಿರಣ ; 28100 ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ.. ಮೃತ ನೌಕರರ ಅವಲಂಬಿತರಿಗೆ ಪರಿಹಾರದ‌ ಚೆಕ್..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬಿಎಂಟಿಸಿ‌ಯಲ್ಲಿ ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಮೃತ ನೌಕರರ ಅವಲಂಬಿತರಿಗೆ ಪರಿಹಾರದ‌ ಚೆಕ್ ವಿತರಣೆ ಮಾಡಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ಬಿಎಂಟಿಸಿ ತಿಳಿಸಿದೆ. BMTCಯು ಸಿ-ಕ್ಯಾಂಪ್ ಸಹಯೋಗದಲ್ಲಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 50 ಘಟಕಗಳಲ್ಲಿ ಹಾಗೂ 4 ಕಾರ್ಯಾಗಾರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಿದ್ದು, ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಪಾಸಣೆಗೆ ಒಳಪಡುವ ನೌಕರರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ 50 ಲಕ್ಷ ರೂ ಹಾಗೂ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ 10 ಲಕ್ಷ ರೂ ನೀಡಲಾಗುತ್ತಿದೆ ಎಂದರು. 2024ರ ಫೆಬ್ರವರಿ–2025ರ ಏಪ್ರಿಲ್ ವರೆಗೆ 107 ನೌಕರರ ಕುಟುಂಬಗಳಿಗೆ ರೂ. 7.3 ಕೋಟಿ ಪರಿಹಾರ ಪಾವತಿ ಮಾಡಲಾಗಿದೆ ಎಂದವರು ವಿವರಿಸ...
ಗಣಿ ಕೇಸಿನಲ್ಲಿ 7 ವರ್ಷ ಶಿಕ್ಷೆಗೊಳಗಾಗಿರುವ ಜನಾರ್ಧನ ರೆಡ್ಡಿ ಶಾಸಕ ಸ್ಥಾನಕ್ಕೂ ಸಂಚಕಾರ

ಗಣಿ ಕೇಸಿನಲ್ಲಿ 7 ವರ್ಷ ಶಿಕ್ಷೆಗೊಳಗಾಗಿರುವ ಜನಾರ್ಧನ ರೆಡ್ಡಿ ಶಾಸಕ ಸ್ಥಾನಕ್ಕೂ ಸಂಚಕಾರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಮತ್ತೆ ಜೈಲು ಸೇರಿದ್ದಾರೆ. ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಪರಾಧಿಯಾಗು ಶಿಕ್ಷೆಗೆ ಗುರಿಯಾಗಿರುವ ಶಾಸಕ ಜನಾರ್ಧನ ರೆಡ್ಡಿ ಅವರ ಶಾಸಕ ಸ್ಥಾನಕ್ಕೂ ಕಂಟಕ ಎದುರಾಗಿದೆ. 884 ಕೋಟಿ ರೂಪಾಯಿ ಅಕ್ರಮಆರೋಪದಲ್ಲಿ ಸಿಬಿಐ ಕೋರ್ಟ್‌, ಮಾಜಿ ಸಚಿವರೂ ಆದ ಜನಾರ್ಧನ ರೆಡ್ಡಿಯನ್ನುದೋಷಿ ಎಂದು ಮಂಗಳವಾರ ತೀರ್ಪು ನೀಡಿದೆ. 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ್ದು ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಜನಾರ್ದನ ರೆಡ್ಡಿ ಅವರು ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಈ ಬಗ್ಗೆ ರೆಡ್ಡಿ ಪರ ವಕೀಲರು, ವಯಸ್ಸು ಮತ್ತು ಸೇವೆಯನ್ನು ಪರಿಗಣಿಸಿ ಶಿಕ್ಷೆ ಕಡಿಮೆ ಮಾಡಲು ಮನವಿ ಮಾಡಿದ್ದಾರೆ. ಸಿಬಿಐ ಈ ಮನವಿಯನ್ನು ತಿರಸ್ಕರಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈ ನಡುವೆ, ಸಿಬಿಐ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೂ ಸಂಚಕಾರ ಎದುರಾಗಿದೆ.ಈ ತೀರ್ಪನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಬೇಕಿದ್ದು, ಜೈಲು ಶಿಕ್ಷೆಯ ತೀರ್ಪಿಗೆ ಹೈಕೋರ್ಟ್​​ನಿಂದ...

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ; ಯು.ಟಿ.ಖಾದರ್ ವಿರುದ್ಧ ಬಿಜೆಪಿ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ. ಪೊಲೀಸರು ತನಿಖೆ ಆರಂಭಿಸುವ ಮುನ್ನವೆ ಫಾಜಿಲ್ ಕುಟುಂಬದವರಿಗೆ ಕ್ಲೀನ್ ಚಿಟ್ ಕೊಡಲು ಯು.ಟಿ.ಖಾದರ್ ಅವರು ಏನು ಗೃಹ ಸಚಿವರೇ..??ಈ ಹಿಂದೆ ಫಾಜಿಲ್ ಮೃತನಾದ ಸಂದರ್ಭದಲ್ಲಿ ಇದೇ ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಅವರಿಂದ ಫಾಜಿಲ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಿಸಿದ್ದರು.ಬಹುಶಃ ಆ ಹಣದಿಂದಲೇ ಫಾಜಿಲ್ ಕುಟುಂಬ ಸುಹಾಸ್ ಶೆಟ್ಟಿ… pic.twitter.com/30McfqCE6t— BJP Karnataka (@BJP4Karnataka) May 4, 2025 ಪೊಲೀಸರು ತನಿಖೆ ಆರಂಭಿಸುವ ಮುನ್ನವೆ ಫಾಜಿಲ್ ಕುಟುಂಬದವರಿಗೆ ಕ್ಲೀನ್ ಚಿಟ್ ಕೊಡಲು ಯು.ಟಿ.ಖಾದರ್ ಅವರು ಏನು ಗೃಹ ಸಚಿವರೇ..? ಎಂದು ಬಿಜೆಪಿ ಪ್ರಶ್ನಿಸಿದೆ. ಸಾಮಾಜಿಕ ಮಾಧ್ಯಮ 'X'ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, 'ಈ ಹಿಂದೆ ಫಾಜಿಲ್ ಮೃತನಾದ ಸಂದರ್ಭದಲ್ಲಿ ಇದೇ ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಅವರಿಂದ ಫಾಜಿಲ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಿಸಿದ್ದರು' ಎಂದು ನೆನಪಿಸಿದೆ. ಬಹುಶಃ ಆ ಹಣದಿಂದಲೇ ಫಾ...
ಹತ್ಯೆಗೀಡಾದವರ ಮನೆಯವರಿಗಿಲ್ಲ ಸಾಂತ್ವನ, ಮುಸ್ಲಿಂ ನಿಯೋಗಕ್ಕೆ ಮಣಿಯಿತೇ ಸರ್ಕಾರ?

ಹತ್ಯೆಗೀಡಾದವರ ಮನೆಯವರಿಗಿಲ್ಲ ಸಾಂತ್ವನ, ಮುಸ್ಲಿಂ ನಿಯೋಗಕ್ಕೆ ಮಣಿಯಿತೇ ಸರ್ಕಾರ?

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಮಂಗಳೂರಿನಲ್ಲಿ ಮತಾಂಧರಿಂದ ಹತ್ಯೆಯಾದ ಸುಹಾಸ್ ಶೆಟ್ಟಿಯವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿತ್ತು. ಆದರೆ ಜೀವ ರಕ್ಷಣೆಗೆ ಅಗತ್ಯ ವ್ಯವಸ್ಥೆ ಕೂಡಾ ಕಲ್ಪಿಸಲಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ. ಇಷ್ಟು ಭೀಕರ ಹತ್ಯೆ ಬಳಿಕ ಮತ್ತಿಬ್ಬರು ಹಿಂದೂ ನಾಯಕರಿಗೆ ಜೀವಹತ್ಯೆಯ ಬೆದರಿಕೆ ಒಡ್ಡಲಾಗಿದ್ದರೂ ಪೊಲೀಸ್ ಇಲಾಖೆ ಆ ದುರುಳರನ್ನು ಹಿಡಿಯುವಲ್ಲಿ ವಿಫಲವಾಗಿದೆ ಎಂದು ದೂರಿದರು. ಹತ್ಯೆಗೀಡಾದವರ ಮನೆಗೆ ಹೋಗಿ ತಂದೆ ತಾಯಿಗಳಿಗೆ ಧೈರ್ಯ ತುಂಬುವುದು ಬಿಟ್ಟು ಹತ್ಯೆಗೈದವರ ಪರವಾಗಿದ್ದ ಮುಸ್ಲಿಂ ನಿಯೋಗದೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಮಂಗಳೂರಿನಲ್ಲಿ ಮತಾಂಧರಿಂದ ಹತ್ಯೆಯಾದ ಸುಹಾಸ್ ಶೆಟ್ಟಿಯವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿತ್ತು. ಆದರೆ ಜೀವ ರಕ್ಷಣೆಗೆ ಅಗತ್ಯ ವ್ಯವಸ್ಥೆ ಕೂಡಾ ಕಲ್ಪಿಸಲಿಲ್ಲ. ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ. ಇಷ್ಟು ...