Sunday, December 7

ಉತ್ತರಾಖಂಡ: ಹಿಮಪಾತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಮುಂದುವರಿದ ಪ್ರಯತ್ನ

ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ ಆತಂಕದ ಸನ್ನಿವೇಶ ಸೃಷ್ಟಿಸಿದೆ. ಚಮೋಲಿ ಜಿಲ್ಲೆಯ ಮಾನಾ ಬಳಿ ಶುಕ್ರವಾರ ಹಿಮಪಾತದಲ್ಲಿ 55 ಕಾರ್ಮಿಕರು ಸಿಲುಕಿದ್ದು ಹಲವರನ್ನು ರಕ್ಷಿಸಲಾಗಿದೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಹಿಮದಡಿಯಲ್ಲಿ ಸಿಲುಕಿದ್ದಾರೆನ್ನಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಭೀಕರ ಹಿಮಪಾತ ಸಂಭವಿಸಿದೆ ಎನ್ನಲಾಗಿದೆ. ಮಾನಾದ ಗಡಿ ಪ್ರದೇಶದ ಗಡಿ ರಸ್ತೆ ಸಂಸ್ಥೆ ಶಿಬಿರದ ಬಳಿ ಭಾರೀ ಹಿಮಪಾತ ಸಂಭವಿಸಿದೆ. ಆ ಸ್ಥಳದಲ್ಲಿ ಕಾಮಗಾರಿಯಲ್ಲಿ ತೊಡಗಿದ್ದ 55ಕ್ಕೂ ಹೆಚ್ಚು ಕಾರ್ಮಿಕರು ಹಿಮಪಾತದಲ್ಲಿ ಸಿಲುಕಿದ್ದರು. ಕೆಶಿಪ್[ರ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗೂ ಸೇನಾ ತಂಡಗಳು 32 ಜನರನ್ನು ರಕ್ಷಿಸಿಸಿದ್ದಾರೆ. ಆದರೆ, ಇನ್ನೂ 23 ಕಾರ್ಮಿಕರು ಹಿಮದಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.