Thursday, January 29

ಸಸಕಿ ಯೋಜನೆ, ಪ್ರಸಾದ್ ಯೋಜನೆ: ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ ಸರ್ಕಾರ ಅಸ್ತು

ಬೆಂಗಳೂರು: ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಯೆಲ್ಲಮ್ಮ ಬೆಟ್ಟಗಳ 215.37 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಾಗಿದೆ

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಈ ಕುರಿತಂತೆ ಮಾಧ್ಯಮಗಳಿಗೆ ವಿವರ ಒದಗಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಯೆಲ್ಲಮ್ಮ ಬೆಟ್ಟಗಳ 215.37 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

ಇದು ಸಸಕಿ ಯೋಜನೆ (ರೂ. 100 ಕೋಟಿ), ಪ್ರಸಾದ್ ಯೋಜನೆ (ರೂ. 18 ಕೋಟಿ), ರೇಣುಕಾ ಯೆಲ್ಲಮ್ಮ ದೇವಾಲಯ ಅಭಿವೃದ್ಧಿ ಪ್ರಾಧಿಕಾರ (ರೂ. 97 ಕೋಟಿ), ಮತ್ತು ಪ್ರವಾಸೋದ್ಯಮ ಇಲಾಖೆ (ರೂ. 15 ಕೋಟಿ) ಗಳನ್ನು ಕೆಟಿಪಿಪಿ ಕಾಯ್ದೆಯಡಿ ಡಿಪಿಎಆರ್ ಮೂಲಕ ಕೆಟಿಪಿಎಆರ್ ಅಡಿಯಲ್ಲಿ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.