Saturday, September 6

KPTCL ಹಾಗೂ ಎಸ್ಕಾಂಗಳ ಅಧಿಕಾರಿ, ನೌಕರರಿಗೆ ಬೋನಸ್/ಅನುಗ್ರಹ ಭತ್ಯೆ; ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂಗಳ ಅಧಿಕಾರಿ/ನೌಕರರಿಗೆ 2024-25 ನೇ ಹಣಕಾಸು ವರ್ಷಕ್ಕೆ ಬೋನಸ್/ಅನುಗ್ರಹ ಪೂರ್ವಕವನ್ನು ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿ, ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ:ಆಇ 339 ವೆಚ್ಚ-1/2025 2:26.08.2025 ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1)ರ ಪ್ರಸ್ತಾವನೆಯನ್ನು ಪರಿಗಣಿಸಿ ,ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳ ನೌಕರರಿಗೆ 2024-25ನೇ ಆರ್ಥಿಕ ವರ್ಷಕ್ಕೆ ಕನಿಷ್ಟ ತಲಾ ರೂ.7,000/- ರಂತೆ ಅನುಗ್ರಹ ಭತ್ಯೆಯನ್ನು (Ex-gratia) ನೀಡಬೇಕೆಂದು ಸೂಚಿಸಿದ್ದಾರೆ.

ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ನಿಗಮಗಳ ಆಂತರಿಕ ಸಂಪನ್ಮೂಲಗಳಿಂದ ಭರಿಸುವ ಷರತ್ತಿಗೊಳಪಟ್ಟು ಉಲ್ಲೇಖಿತ (2)ರ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯ ಸಹಮತಿ ನೀಡಲಾಗಿದೆ ಎಂದು ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ವಿನೋದ್ ಕುಮಾ‌ರ್ ಡಿ.ಎಂ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.