Wednesday, January 28

ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ರವಾನೆಯಾಗಿರುವ ಬಗ್ಗೆ ತನಿಖೆಯಾಗಬೇಕು; ಸಿ.ಟಿ.ರವಿ

ಬೆಳಗಾವಿ: ಅನ್ನಭಾಗ್ಯದ ಅಕ್ಕಿಯು ವಿದೇಶಗಳಿಗೆ ರವಾನೆಯಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಅನ್ನಭಾಗ್ಯದ ಅಕ್ಕಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಅಕ್ರಮಗಳ ಬಗ್ಗೆ ಆಕ್ರೋಶ ಹೊರಹಾಕಿದರು.

ಅನ್ನಭಾಗ್ಯದ ಅಕ್ಕಿಯು ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳ ಕೈವಾಡವಿರುವುದನ್ನು ಸರ್ಕಾರದ ಖಚಿತಪಡಿಸಿದೆ. ಈ ಅಕ್ರಮ ನಿರಂತರವಾಗಿ ನಡೆದಿದೆ ಎಂದಾದರೆ, ಇದರ ಜಾಲ ರಾಜ್ಯದಾದ್ಯಂತ ವ್ಯಾಪಿಸಿದೆ ಎಂದರ್ಥ ಎಂದು ಪ್ರಶ್ನಿಸಿದರು.

ಇದೆಲ್ಲವೂ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದಿಯೇ? ಅಥವಾ ಸರ್ಕಾರವೂ ಇದರಲ್ಲಿ ಭಾಗಿಯಾಗಿದೆಯೇ? ಇದಕ್ಕೆಲ್ಲ ಕಡಿವಾಣ ಯಾವಾಗ? ಇದಕ್ಕಾಗಿ ತಕ್ಷಣವೇ ಎಸ್ಐಟಿ ರಚನೆಯಾಗಿ, ತನಿಖೆಯಾಗಬೇಕು ಎಂದರು.