Saturday, December 6

ಪ್ರಮುಖ ಸುದ್ದಿ

ಜಗಳೂರು: ಶರಣಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

Focus, ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ
ಜಗಳೂರು : ಕಾರ್ತಿಕ ಮಾಸದ ಅಂಗವಾಗಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಜಗಳೂರು ತಾಲೂಕಿನ‌ ಗಡಿ ಗ್ರಾಮ ಖಾನಾಮಡುಗಿನ ದಾಸೋಹ ಮಠದ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಪ್ರತಿವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ರಥೋತ್ಸವವು ಭಾನುವಾರ ಜರುಗಿತು. ಸ್ವಾಮಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಸಾವಿರಾರು ಭಕ್ತರು ತೇರಿನ ಗಾಲಿಗೆ ಕಾಯಿ ಹೊಡೆದು ಪೂಜೆ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ರಥವನ್ನು ಎಳೆದು ಕೈಂಕರ್ಯ ನೆರವೇರಿಸಲಾಯಿತು. ಹಿರಿಯೂರು ತಾಲೂಕಿನ ಮೇಟಿ ಕುರ್ಕಿ ತಿಪ್ಪೇಸ್ವಾಮಿ ಎಂಬುವವರು ಸ್ವಾಮಿಯ ಮುಕ್ತಿ ಬಾವುಟವನ್ನು ಒಂದು ಲಕ್ಷದ ಹತ್ತು ಸಾವಿರದ ಹನ್ನೇರೆಡು ರೂಪಾಯಿಗಳಿಗೆ ಹಾರಜಿನಲ್ಲಿ ಪಡೆದುಕೊಂಡರು. ದಾಸೋಹ ಮಠದ ಐರ್ಮಡಿ ಶಿವರ್ಯರ ಮಾರ್ಗದರ್ಶನದಲ್ಲಿ ಜಾತ್ರಾ ವೈಭವದ ವಿಧಿವಿಧಾನಗಳು ನೆರವೇರಿದವು....
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು; 2024ರಲ್ಲಿ 31,934, ಈ ವರ್ಷ 6,561

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು; 2024ರಲ್ಲಿ 31,934, ಈ ವರ್ಷ 6,561

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಡೆಂಗ್ಯೂ ಪ್ರಕರಣಗಳು 2024ನೇ ಸಾಲಿನಲ್ಲಿ 31,934 ಕಂಡು ಬಂದಿದ್ದರೆ 2025ರ ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 6,561 ಕ್ಕೆ ಇಳಿದಿದ್ದು, ಶೇಕಡವಾರು 81% ಕಡಿಮೆಯಾಗಿದೆ. ಅಲ್ಲದೆ, ಸಾವು ಸಂಭವಿಸಿಲ್ಲ. ಇದು ನಿಜಕ್ಕೂ ಪರಿಣಾಮಕಾರಿ ಫಲಿತಾಂಶವಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇದೇ ಮಾದರಿಯಲ್ಲಿ, ಕಂಡುಬರುತ್ತಿದ್ದ ಚಿಕನ್ ಗುನ್ಯಾ ಜ್ವರದ ಪ್ರಮಾಣವೂ ಶೇ.59ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ 2024ರ ಸಾಲಿನಲ್ಲಿ 2,348 ಪ್ರಕರಣಗಳು ಕಂಡುಬಂದಿದ್ದರೆ 2025ರ ನವೆಂಬರ್ ಕೊನೆವಾರದ ತನಕ 974 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ. 2024ರಲ್ಲಾದ ಡೆಂಗ್ಯೂ ಪ್ರಕರಣಗಳ ಹೆಚ್ಚಳವನ್ನು ಗಂಭಿರವಾಗಿ ಪರಿಗಣಿಸಿ ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಡೆಂಗ್ಯೂವನ್ನು ಸೇರಿಸಲಾಯಿತು. ನಿಯಂತ್ರಣಕ್ಕಾಗಿ ನಿರಂತರವಾಗಿ ಅರಿವು ಕಾರ್ಯಕ್ರಮ, ಸ್ವಚ್ಚತೆ, ಉಚಿತ ಔಷಧ ಚಿಕಿತ್ಸೆಗಳ ಜತೆಗೆ ಅದರ ನಿಯಮಾವಳಿ ಪ್ರಕಾರ ಲಾರ್ವಾ ನಿಯಂತ್ರಣ ಕ್ರಮಗಳನ್ನು ಅನುಸರಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ₹2000 ತನಕ ದಂಡ ಶಿಕ್ಷೆ ವಿಧಿಸುವ ಕ್ರ...
ಜಿಎಸ್‌ಟಿ ಸೆಸ್ ಬದಲಿಗೆ ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

ಜಿಎಸ್‌ಟಿ ಸೆಸ್ ಬದಲಿಗೆ ತಂಬಾಕು–ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ: ಈ ಅಧಿವೇಶನದಲ್ಲಿ ಮಸೂದೆ ಮಂಡನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಚಳಿಗಾಲದ ಅಧಿವೇಶನ ಆರಂಭದ ದಿನವೇ ಕೇಂದ್ರ ಸರ್ಕಾರ 13ಕ್ಕೂ ಹೆಚ್ಚು ಪ್ರಮುಖ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಇದರಲ್ಲಿ ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ–2025 ಮತ್ತು ಆರೋಗ್ಯ ಭದ್ರತಾ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ–2025 ಪ್ರಮುಖವಾಗಿವೆ. ತಂಬಾಕು, ಪಾನ್ ಮಸಾಲಾ ಸೇರಿದಂತೆ ‘ಪಾಪ’ ವಸ್ತುಗಳ ಮೇಲೆ ಈಗ ವಿಧಿಸುತ್ತಿರುವ ಜಿಎಸ್‌ಟಿ ಪರಿಹಾರ ಸೆಸ್‌ಗೆ ಬದಲಾಗಿ, ಅಬಕಾರಿ ಸುಂಕದ ರೂಪದಲ್ಲಿ ಹೆಚ್ಚುವರಿ ತೆರಿಗೆ ಮುಂದುವರಿಸಲು ಈ ಮಸೂದೆಗಳನ್ನು ತರಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಈ ವಸ್ತುಗಳ ಮೇಲೆ ಜಿಎಸ್‌ಟಿ 28% ವಿಧಿಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ವಿವಿಧ ದರಗಳಲ್ಲಿ ಪರಿಹಾರ ಸೆಸ್ ವಿಧಿಸಲಾಗುತ್ತಿದೆ. ಕೋವಿಡ್‌ ಅವಧಿಯಲ್ಲಿ ರಾಜ್ಯಗಳ ಜಿಎಸ್‌ಟಿ ಆದಾಯ ನಷ್ಟವನ್ನು ಪೂರೈಸಲು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಸಾಲ ಮರುಪಾವತಿಗಾಗಿ ಪರಿಹಾರ ಸೆಸ್ ಸಂಗ್ರಹವನ್ನು ಬಳಸಲಾಗುತ್ತಿತ್ತು. ಈ ಸಾಲ ಡಿಸೆಂಬರ್...
ಆಂಧ್ರ ಕರಾವಳಿಯಲ್ಲಿ 13 ಬಾಂಗ್ಲಾದೇಶಿ ಮೀನುಗಾರರ ಬಂಧನ

ಆಂಧ್ರ ಕರಾವಳಿಯಲ್ಲಿ 13 ಬಾಂಗ್ಲಾದೇಶಿ ಮೀನುಗಾರರ ಬಂಧನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ವಿಶಾಖಪಟ್ಟಣ: ಆಂಧ್ರಪ್ರದೇಶದ ಶ್ರೀಕಾಕುಲಂ ಕರಾವಳಿಯಲ್ಲಿ ಅಲೆಮಾರಿ ಆಗಿ ತಲುಪಿದ್ದ 13 ಬಾಂಗ್ಲಾದೇಶಿ ಮೀನುಗಾರರನ್ನು ಸಮುದ್ರ ಪೊಲೀಸರು ಭಾನುವಾರ ವಶಕ್ಕೆ ಪಡೆಯಿದರು. ದೋಣಿಯ ಇಂಧನ ಹಾಗೂ ಆಹಾರ ಸಂಪೂರ್ಣ ಖಾಲಿಯಾಗಿದ್ದ ಕಾರಣ, ಅವರು ಸಮುದ್ರದಲ್ಲಿ ಹಲವು ದಿನಗಳಿಂದ ಸಿಲುಕಿಕೊಂಡಿದ್ದರೆಂದು ತಿಳಿದುಬಂದಿದೆ. ಎಚರ್ಲಾ ಮಂಡಲದ ಮುಸವಾನಿಪೇಟೆ ಬಳಿ ದೋಣಿ ಕಂಡುಬಂದ ವೇಳೆ ಸ್ಥಳೀಯ ಮೀನುಗಾರರು ಅವರ ಚಲನವಲನಗಳನ್ನು ಅನುಮಾನಾಸ್ಪದವಾಗಿ ಕಂಡು ಸಮುದ್ರ ಪೊಲೀಸರಿಗೆ ಮಾಹಿತಿ ನೀಡಿದರು. ದೋಣಿ ಮತ್ತು ಅದರಲ್ಲಿದ್ದವರನ್ನು ದಡಕ್ಕೆ ತರಲು ಮೂರು ದೋಣಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಅವರ ಭಾಷೆ ಮತ್ತು ಉಡುಪಿನ ಆಧಾರದಲ್ಲಿ ಅವರು ಬಾಂಗ್ಲಾದೇಶದವರೇ ಎಂದು ಗುರುತಿಸಲಾಯಿತು. ವಶಕ್ಕೆ ಪಡೆದ ನಂತರ ಪೊಲೀಸರು ಅವರನ್ನು ವಿಚಾರಣೆ ನಡೆಸಿದರು. ಆದರೆ ಹಸಿವು, ದೈಹಿಕ ದೌರ್ಬಲ್ಯ ಮತ್ತು ಭಯದಿಂದ ಬಳಲುತ್ತಿದ್ದ ಮೀನುಗಾರರಿಗೆ ಸಂವಹನ ನಡೆಸಲು ತೊಂದರೆಯಾಗಿತ್ತು. ಬಂಗಾಳಿ ಭಾಷೆಯನ್ನೂ ತಿಳಿದ ಕೆಲವು ಸ್ಥಳೀಯ ಮೀನುಗಾರರ ಸಹಾಯದಿಂದ ಮೂಲಭೂತ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಬಾಂಗ್ಲಾದೇಶದ ಜಲಪ್...

ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ 2 ಬಸ್ಸುಗಳ ಡಿಕ್ಕಿ; 11 ಮಂದಿ ಸಾವು

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಪಯಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಪಿಳ್ಳೈಯಾರ್ಪಟ್ಟಿಸಮೀಪದ ತಿರುಪತ್ತೂರು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ಸುಗಳ ಮುಖಭಾಗ ನುಜ್ಜುಗುಜ್ಜಾಗಿದೆ. ಬಸ್ಸುಗಳಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ...
ದಿತ್ವಾ ಚಂಡಮಾರುತ: ಐಎಎಫ್ ಆಪರೇಷನ್ ‘ಸಾಗರ್ ಬಂಧು’ ಯಶಸ್ವೀ

ದಿತ್ವಾ ಚಂಡಮಾರುತ: ಐಎಎಫ್ ಆಪರೇಷನ್ ‘ಸಾಗರ್ ಬಂಧು’ ಯಶಸ್ವೀ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಕೊಲಂಬೊ: ದಿತ್ವಾ ಚಂಡಮಾರುತದ ನಂತರ ಸಂಪೂರ್ಣವಾಗಿ ಪ್ರತ್ಯೇಕವಾಗಿದ್ದ ಶ್ರೀಲಂಕಾದ ಕೋಟ್ಮಲೆ ಪ್ರದೇಶದಲ್ಲಿ ಭಾನುವಾರ ಭಾರತೀಯ ವಾಯುಪಡೆಯು ಮಹತ್ತರ ರಕ್ಷಣಾ ಕಾರ್ಯಾಚರಣೆ ನಡೆಸಿ 12 ಭಾರತೀಯರು ಸೇರಿದಂತೆ 45 ಮಂದಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಕೋಟ್ಮಲೆ ಪ್ರದೇಶಕ್ಕೆ ಸಂಪರ್ಕ ರಸ್ತೆಗಳು ಅಡಚಣೆಯಾಗಿರುವ ಹಿನ್ನೆಲೆಯಲ್ಲಿ, ದಿನಪೂರ್ತಿ ಐಎಎಫ್ ಹೆಲಿಕಾಪ್ಟರ್‌ಗಳು ನಿರಂತರ ಹಾರಾಟ ನಡೆಸಿ, 6 ಗಂಭೀರ ಗಾಯಾಳುಗಳು ಮತ್ತು 4 ಶಿಶುಗಳು ಸೇರಿದಂತೆ ಸಿಲುಕಿಕೊಂಡವರನ್ನು ಕೊಲಂಬೊಗೆ ಕರೆದೊಯ್ದವು. ರಕ್ಷಿಸಲ್ಪಟ್ಟವರಲ್ಲಿ ಶ್ರೀಲಂಕಾ ನಾಗರಿಕರ ಜೊತೆಗೆ ಅನೇಕ ದೇಶಗಳ ವಿದೇಶಿ ಪ್ರಜೆಗಳೂ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳನ್ನು ಬಲಪಡಿಸಲು, ಐಎಎಫ್ 57 ಶ್ರೀಲಂಕಾ ಸೇನಾ ಸಿಬ್ಬಂದಿಯನ್ನು ಪೀಡಿತ ಪ್ರದೇಶಕ್ಕೆ ವಿಮಾನದಲ್ಲಿ ಸಾಗಿಸಿ ನೆಲದ ಪ್ರಮಾಣವನ್ನು ವಿಸ್ತರಿಸಿದೆ. ಜೊತೆಗೆ ಭೀಷ್ಮ್ ಕ್ಯಾಪ್ಸುಲ್ ಮತ್ತು ವೈದ್ಯಕೀಯ ತಂಡವನ್ನು ಒಳಗೊಂಡ ವಿಶೇಷ ವಿಮಾನಗಳ ಮೂಲಕ ರಾತ್ರಿ 8 ಗಂಟೆಯವರೆಗೆ 400 ಕ್ಕೂ ಹೆಚ್ಚು ಭಾರತೀಯರನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ. ಐಎಎಫ್ ತಿಳಿಸಿದಂತ...
ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್ ವಿಧಿವಶ

ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್ ವಿಧಿವಶ

Focus, ಪ್ರಮುಖ ಸುದ್ದಿ, ರಾಜ್ಯ, ಸಿನಿಮಾ
ಬೆಂಗಳೂರು: ಹಿರಿಯ ಚಲನಚಿತ್ರ ನಟ ಎಂ.ಎಸ್.ಉಮೇಶ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ಸಮಯದಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನಲ್ಲಿ 1945ರ ಏಪ್ರಿಲ್ 22ರಂದು ಜನಿಸಿದ್ದ ಉಮೇಶ್ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದರು. ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಉಮೇಶ್ ವಿಧಿವಶರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ....
ಬೆಳಗಾವಿ ಅಧಿವೇಶನ: ಈ ಬಾರಿ 20 ದಿನ ಸದನ ನಡೆಸಲು ಬಿಜೆಪಿ ಆಗ್ರಹ 

ಬೆಳಗಾವಿ ಅಧಿವೇಶನ: ಈ ಬಾರಿ 20 ದಿನ ಸದನ ನಡೆಸಲು ಬಿಜೆಪಿ ಆಗ್ರಹ 

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಈ ಬಾರಿಯ ಅಧಿವೇಶನವನ್ನು 8 ದಿನಗಳ ಬದಲು 20 ದಿನಗಳ ಕಾಲ ನಡೆಸಬೇಕು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಅಧಿವೇಶನ ಸಂಬಂಧ ನಡೆದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಮಿತಿ ಸಭೆ ಬಳಿಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಎರಡೂ ಪಕ್ಷಗಳು ಕಿವಿ ಹಿಂಡುವ ಕೆಲಸ ಮಾಡಿವೆ. ಈಗ ಬೆಳಗಾವಿ ಅಧಿವೇಶನದಲ್ಲಿ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಚರ್ಚಿಸಲಾಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದರು. ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಕೇವಲ ಬೆಂ...
ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬಿಕ್ಕಟ್ಟು ಶಮನ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ ಒಟ್ಟಾಗಿ ಉಪಹಾರ ಸೇವಿಸಿ ಗಮನಸೆಳೆದರು. ಉಪಹಾರ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ತೋರಿಸಲು ಹೈಕಮಾಡ್ ನಾಯಕರು ಹೇಳಿಕೊಟ್ಟ ಸೂತ್ರವನ್ನು ಸಿಎಂ ಡಿಸಿಎಂ ಪಾಲಿಸಿದ್ದಾರೆ. ಆದರೆ ಈ ಬೆಳವಣಿಗೆ ನಾಟಕೀಯ ರೀತಿಯಲ್ಲೇ ಇತ್ತೆ ವಿನಃ ಒಗ್ಗಟ್ಟು ಪ್ರದರ್ಶನದಂತೆ ಇರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಉಪಹಾರ ಬಳಿಕ ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹಂಚಿಕೊಂಡರು. ನಮ್ಮೊಳಗೆ ಭಿನ್ನಾಭಿಪ್ರಾಯವೇ ಇಲ್ಲ, ಒಗ್ಗಾಟಾಗಿವೆ ಇದ್ದೇವೆ. ಸದ್ಯದ ಗೊಂದಲಗಳಿಗೆ ಪ್ರತಿಪಕ್ಷ ಹಾಗೂ ಮಾಧ್ಯಮಗಳು ಕಾರಣ ಎಂದರು. #WATCH | Karnataka Chief Minister Siddaramaiah and Deputy CM DK Shivakumar hold a joint press conference in Bengaluru after the breakfast meeting pic.t...
ಮಂಗಳೂರಿಗೆ ಭೇಟಿನೀಡಿದ ಪ್ರಧಾನಿಗೆ ಸಿದ್ಧರಾಮಯ್ಯ ಪತ್ರ ಒಪ್ಪಿಸಿದ ದಿನೇಶ್ ಗುಂಡೂರಾವ್

ಮಂಗಳೂರಿಗೆ ಭೇಟಿನೀಡಿದ ಪ್ರಧಾನಿಗೆ ಸಿದ್ಧರಾಮಯ್ಯ ಪತ್ರ ಒಪ್ಪಿಸಿದ ದಿನೇಶ್ ಗುಂಡೂರಾವ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು: ಪ್ರಧಾನಿ ನರೇಂದ್ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ, ಸಿಎಂ ಸಿದ್ದರಾಮಯ್ಯ ಅವರ ಮಾರುದ್ದದ ಪತ್ರವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ದಿನೇಶ್ ಗುಂಡೂರಾವ್. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ನೀಡಿ, ಅದರಲ್ಲಿರುವಂತೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಬಗ್ಗೆ ಗಮನಸೆಳೆದಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿರುವ ಪತ್ರ ಇದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್,  ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಪತ್ರದಲ್ಲಿ‌ರುವಂತೆ ನಮ್ಮ ರಾಜ್ಯದ ರೈತರ ಸಂಕಷ್ಟವನ್ನು ಕೂಲಂಕುಷವಾಗಿ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳು...